Home Posts tagged #mangalore (Page 126)

ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ಅಯ್ಯಪ್ಪ ಮಾಲೆಧಾರಿ ಯುವಕ

ಕಲ್ಮಕಾರು : ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ಅಯ್ಯಪ್ಪ ಮಾಲೆಧಾರಿ ಯುವಕ,ಸ್ನಾನಕ್ಕೆ ತೆರಳಿದ ಅಯ್ಯಪ್ಪ ಮಾಲೆಧಾರಿಯೊಬ್ಬರ ಮೇಲೆ ಇಂದು ಮುಂಜಾನೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಕಲ್ಮಕಾರು ಗ್ರಾಮದ ಚರಿತ್ ಎಂಬವರು ಆನೆ ದಾಳಿಗೆ ಒಳಗಾದ ಯುವಕ. ಡಿ.17 ರ ಮುಂಜಾನೆ ಸ್ನಾನದ ಬಳಿಕ ನೀರಿನ ತೋಡಿನಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಈ ಘಟನೆ ನಡೆದಿದೆ.ಅಯ್ಯಪ್ಪ ವೃತಧಾರಿಗಳು ತಂಗುವ ಟೆಂಟ್

ಬೆಳ್ಳಾರೆ: ಜೇಸಿಐ ಘಟಕದ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ

ಸಮುದಾಯ ಅಭಿವೃದ್ಧಿಯ ಗುರಿಯೊಂದಿಗೆ ಯುವಕರಲ್ಲಿ ನಾಯಕತ್ವ ಗುಣ ತುಂಬಿಸಿ ಜೇಸಿ ಸಂಸ್ಥೆಯು ಸಮಾಜಮುಖಿ ಚಿಂತನೆ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದು ಜೇಸಿಐ ವಲಯ 15ರ ಪೂರ್ವ ವಲಯಾಧ್ಯಕ್ಷ ಚಂದ್ರಹಾಸ ರೈ ಹೇಳಿದರು.ಅವರು ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಜೇಸಿಐ ಬೆಳ್ಳಾರೆ ಘಟಕದ 2025ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಬೆಳ್ಳಾರೆ ಜೇಸಿಐ ಘಟಕದ 2025ನೇ

ಸುಳ್ಯ : ಪ್ರತಿಷ್ಠಿತ “ಚೈತನ್ಯ ಶ್ರೀ-2024” ಮಹಿಳಾ ಸಾಧಕಿ ಪ್ರಶಸ್ತಿಗೆ ಬಹುಮುಖ ಸಾಧಕಿ ಡಾ.ಅನುರಾಧಾ ಕುರುಂಜಿ ಆಯ್ಕೆ

ಬಹುಮುಖ ಸಾಧಕಿ ಡಾ. ಅನುರಾಧಾ ಕುರುಂಜಿಯವರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತ್ ವತಿಯಿಂದ ನೀಡುವ ಪ್ರತಿಷ್ಠಿತ “ಚೈತನ್ಯ ಶ್ರೀ- 2024” ಮಹಿಳಾ ಸಾಧಕಿ ಪ್ರಶಸ್ತಿಗೆ ದ.ಕ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ರಾಜ್ಯಮಟ್ಟದ ನಾಲ್ಕನೇ ವೈಜ್ಞಾನಿಕ ಸಮ್ಮೇಳನದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದು ಪ್ರವೃತ್ತಿಯಲ್ಲಿ ತರಬೇತುದಾರಳು, ಸಂಘಟಕಿ ಹಾಗೂ ಬರಹಗಾರ್ತಿಯಾಗಿರುವ ಬಹುಮುಖ ಪ್ರತಿಭೆ ಸುಳ್ಯದ ಡಾ.ಅನುರಾಧಾ

ದುಬೈ : “ಮಿಡ್ಲ್ ಕ್ಲಾಸ್ ಫ್ಯಾಮಿಲಿ ” ತುಳು ಚಿತ್ರದ ಪ್ರೀಮಿಯರ್ ಟಿಕೆಟ್ ಬಿಡುಗಡೆ ಕಾರ್ಯಕ್ರಮ

ದುಬೈ : ಯುವ ನಟ – ನಿರ್ದೇಶಕ ರಾಹುಲ್ ಅಮೀನ್ ನಿರ್ದೇಶಿಸಿ, ವಿನೀತ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿದ “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ತುಳು ಚಿತ್ರದ ಯುಎಇ ರಾಷ್ಟ್ರದ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಜರುಗಿತು. ಡಿಸೆಂಬರ್ .8 ರಂದು ದುಬೈನ ಮಾರ್ಕೊ ಪೋಲೊ ಹೊಟೇಲ್ ನ ಸಭಾಂಗಣದಲ್ಲಿ ನಡೆದ ಟಿಕೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ,

ಮಂಗಳೂರು : ಡಿ.14ರಂದು ಉಚಿತ ವೃತ್ತಿ ಜಾಗೃತಿ ಕಾರ್ಯಾಗಾರ

ಭಾರತದ ಟ್ರೆಂಡಿಂಗ್ ಕೆರಿಯರ್ ಗೈಡೆನ್ಸ್ ಪ್ಲಾಟ್ಫಾರ್ಮ್ ಮತ್ತು ಮಂಗಳೂರಿನ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನ ಸಹಯೋಗದೊಂದಿಗೆ “ಡ್ರಾ ಮೈ ಕೆರಿಯರ್” ವೃತ್ತಿ ಜಾಗೃತಿ ಕಾರ್ಯಾಗಾರವು ಡಿ.14 ರಂದು ನಗರದ ಐಎಂಎ ಸಭಾಂಗಣದಲ್ಲಿ ನಡೆಸುತ್ತಿದೆ.ಕಾರ್ಯಾಗಾರವು 9,10, ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಅಭಿರುಚಿಯನ್ನು ಅರ್ಥಮಾಡಿಕೊಳ್ಳಲು ಮತ್ತು ವೃತ್ತಿ ಅವಕಾಶಗಳ ಬಗ್ಗೆ ಮಾರ್ಗದರ್ಶನ ನೀಡುವ ಗುರಿಯನ್ನು ಹೊಂದಿದೆ.ಐಐಎಂ

ವಿಟ್ಲ: ಜೋಕಾಲಿಗೆ ಕುತ್ತಿಗೆ ಸಿಲುಕಿ ಬಾಲಕಿ ಸಾವು

ವಿಟ್ಲ: ಆಟವಾಡುತ್ತಿದ್ದ ವೇಳೆ ಜೋಕಾಲಿಗೆ ಕುತ್ತಿಗೆ ಸಿಲುಕಿ ಬಾಲಕಿಯೋರ್ವಳು ಮೃತಪಟ್ಟ ಘಟನೆ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಇದೊಂದು ಆತ್ಮಹತ್ಯೆ ಎಂದು ತಿಳಿದು ಬಂದಿದೆ ಈ ಬಗ್ಗೆ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೇರಾ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿ ಮಡಲ ನಿವಾಸಿ ಕಿಶೋರ್ ರವರ ಪುತ್ರಿ ತೀರ್ಥಶ್ರೀ (8) ಮೃತಪಟ್ಟ ಬಾಲಕಿ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ವಿಟ್ಲ ಪೊಲೀಸರು ಬಾಲಕಿಯ

ಮೂಡುಬಿದಿರೆ : ದ್ವಿಚಕ್ರ ವಾಹನದಿಂದ ಬಿದ್ದು ಸಂಶಯಾಸ್ಪದ ಸಾವು

ಮೂಡುಬಿದಿರೆ : ಪಡುಮಾರ್ನಾಡು ಗ್ರಾಮದ ಬನ್ನಡ್ಕ ಎಂಬಲ್ಲಿ ಗುರುವಾರ ಸಂಜೆ ಬೈಕ್‌ನಿಂದ ಬಿದ್ದು ಚಿನ್ನದ ಕೆಲಸಗಾರ, ತೋಡಾರು ಗ್ರಾಮದ ಸೀತಾರಾಮ ಆಚಾರ್ಯ(49) ಮೃತಪಟ್ಟಿದ್ದು ಪೋಲಿಸರು ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ.ಮೂಡುಬಿದಿರೆ ಜ್ಯೋತಿನಗರದಲ್ಲಿ ಚಿನ್ನದ ವೃತ್ತಿಗೆ ಸಂಬಂಧಿಸಿದ ವಿಘ್ನೇಶ್ ಮೆಷಿನ್ ಕಟ್ಟಿಂಗ್ ಉದ್ಯಮವನ್ನು ನಡೆಸುತ್ತಿದ್ದು ಜನವರಿ 3ರಂದು ನಡೆಯಲಿದ್ದ ಅವರ ಪುತ್ರನ ಉಪನಯನದ ಆಮಂತ್ರಣ ಪತ್ರಿಕೆಯನ್ನು ವಿತರಿಸಿ ವಾಪಸ್ಸು

ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ವಿಟ್ಲ: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ಓಂ ಸಾಯಿ ಇಂಡಸ್ಟ್ರೀಸ್ ನ ಮಾಲಕ ಬದನಾಜೆ ನಿಡ್ಯ ನಿವಾಸಿ ದಾಮೋದರ್ ಪೂಜಾರಿ (60) ಎಂದು ಗುರುತಿಸಲಾಗಿದೆ. ಮೃತರು ಇಬ್ಬರು ಮಕ್ಕಳನ್ನು ಮತ್ತು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.