Home Posts tagged #mangalore (Page 370)

ಪ್ರಧಾನಿ ಮೋದಿ ಅವರಿಂದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ

ಕಂಟೇನರ್‍ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14ರ ಯಾಂತ್ರೀಕರಣ, ಬಿಎಸ್ 6 ಶ್ರೇಣಿ ಇಂಧನಗಳ ಉತ್ಪಾದನೆ, ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ಸಮುದ್ರ ಲವಣ ನೀರು ಶುದ್ಧೀಕರಣ ಘಟಕ. ಶುದ್ಧ ನೀರಿನ ಸಂರಕ್ಷಣೆ, 30 ಎಂಎಲ್‍ಡಿ ಲವಣ ನೀರು ಶುದ್ಧೀಕರಣ ಸಾಮಥ್ರ್ಯದೊಂದಿಗೆ ಸುಸ್ಥಿರತೆಗೆ ಉತ್ತೇಜನ. ಎನ್‍ಎಂಪಿಯಲ್ಲಿ

ರೈತರಿಗೆ ಮತ್ತು ಮೀನುಗಾರರಿಗೆ ಸೌಲಭ್ಯ ವಿತರಿಸಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿಯವರಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ಮತ್ಸ್ಯಾ ಸಂಪಾದನಾ ಯೋಜನೆಯ ಆಳ ಸಮುದ್ರ ಮೀನುಗಾರಿಕೆಯ ಬೋಟ್ ಫಲಾನುಭವಿಗಳಿಗೆ ಆದೇಶ ಪತ್ರವನ್ನು ವೇದಿಕೆಯಲ್ಲಿ ವಿತರಿಸಿದರು.

ಮಂಗಳೂರು ಮಲ್ಲಿಗೆ, ಪರಶುರಾಮನ ಸ್ಮರಣಿಕೆಯೊಂದಿಗೆ ಸ್ವಾಗತ

ಬಂಗ್ರಕೂಳೂರಿನಲ್ಲಿ ಕಾಯ್ದಿರಿಸಲಾದ ಬೃಹತ್ ಸಮಾವೇಶದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರ ಬಂದರು ಇಲಾಖೆ ಸಚಿವ ಸರ್ಬಾನಂದ್ ಸೊನೊವಾಲ್ ಅವರು ಮೈಸೂರು ಪೇಟ ಹಾಗೂ ರತ್ನ ಮಾಲೆ ಮತ್ತು ಉಡುಪಿ ಶ್ರೀಕೃಷ್ಣನ ಸ್ಮರಣಿಕೆ ನೀಡಿ ಸ್ವಾಗತಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು ಮಲ್ಲಿಗೆ ಮಾಲಾರ್ಪಣೆ ಮಾಡಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರು ಪರಶುರಾಮನ ಸ್ಮರಣಿಕೆಯನ್ನು ನೀಡಿ

ಮೂಡುಬಿದರೆ: ಮನೆಗೆ ನುಗ್ಗಿ ಮಹಿಳೆಗೆ ತಲವಾರು ಝಳಪಿಸಿ ಕರಿಮಣಿ ಸರ ದರೋಡೆ

ಮೂಡುಬಿದಿರೆ: ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಬಡಗ ಮಿಜಾರು ಗ್ರಾಮದ ಬೇರಿಂಜೆಯ ಮನೆಯೊಂದಕ್ಕೆ ಮುಸುಕುಧಾರಿ ವ್ಯಕ್ತಿಗಳಬ್ಬರು ನುಗ್ಗಿ ತಲವಾರು ಝಳಪಿಸಿ ಮಹಿಳೆಯ ಕತ್ತಿನಲ್ಲಿದ್ದ ಸುಮಾರು 5 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ದರೋಡೆ ಮಾಡಿ ಪರಾರಿಯಾದ ಘಟನೆ ನಡೆದಿದೆ. ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ದುಡಿಯುತ್ತಿರುವ ಕಮಲ ಶೆಟ್ಟಿ ದರೋಡೆಗೊಳಗಾದ ಮಹಿಳೆ ಇವರ ಇಬ್ಬರು ಗಂಡು ಮಕ್ಕಳು ಮೃತಪಟ್ಟಿದ್ದು, ಪತಿ ಕಳೆದ ವರ್ಷ ನಿಧನ ಹೊಂದಿದ್ದರು.

ಕರಾವಳಿಗೆ ಅಭಿವೃದ್ಧಿ ಪೂರಕ ಯೋಜನೆಗೆ ಮೋದಿ ಚಾಲನೆ : ಸಿಎಂ ಬೊಮ್ಮಾಯಿ

ಬಹಳ ಸಮಯದ ಬಳಿಕ ಪ್ರಧಾನಿ ಕರಾವಳಿಗೆ ಬರುತ್ತಿದ್ದಾರೆ. ಸುಮಾರು 3800ಕೋಟಿಯ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇಡೀ ಕರಾವಳಿಗೆ ಅಭಿವೃದ್ಧಿಗೆ ಈ ಯೋಜನೆಗಳು ಪೂರಕ. ಉದ್ಯೋಗವಕಾಶಗಳನ್ನೂ ಇದು ನೀಡಬಲ್ಲದು. ಮೀನುಗಾರರಿಗೆ ಅನುಕೂಲ ಆಗುವ ಯೋಜನೆಗಳನ್ನು ನೀಡಲಾಗಿದೆ. ಕರಾವಳಿ ಅಭಿವೃದ್ಧಿಗೆ ಈ ಯೋಜನೆಗಳು ಪೂರಕ ಎಂದ ಸಿಎಂಮುರುಘ ಶ್ರೀಗಳ ಬಗ್ಗೆ ಮಾತಾನಾಡುವ ಪೂರಕ ಸಂದರ್ಭ ಇದಲ್ಲ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ತನಿಖೆ ನಡೆಸುತ್ತಿದ್ದಾರೆ.

ಮೂಡುಬಿದಿರೆಯಲ್ಲಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ

ಮೂಡುಬಿದಿರೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್ ಉಪನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮೂಡುಬಿದಿರೆ ಮತ್ತು ಸಂತ ಥೋಮಸ್ ವಿದ್ಯಾ ಸಂಸ್ಥೆ ಆಲಂಗಾರು ಇವುಗಳ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ವಾಅಬಾಲ್ ಪಂದ್ಯಾಟವು ಆಲಂಗಾರು ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಿತು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ದೀಪ ಬೆಳಗಿಸಿ, ವಾಲಿಬಾಲ್‍ನ್ನು ರಿಬ್ಬನ್‍ನಿಂದ

ಬಂಟ್ವಾಳ : ಸಿಡಿಲು ಬಡಿದು ಲಕ್ಷಾಂತರ ಮೌಲ್ಯದ ಸೊತ್ತುಗಳು ಭಸ್ಮ

ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಪುಣ್ಕೆದಡಿಯಲ್ಲಿ ಮಂಗಳವಾರ ತಡರಾತ್ರಿ ಮನೆಯೊಂದಕ್ಕೆ ಅತ್ಯಂತ ಭೀಕರ ರೀತಿಯಲ್ಲಿ ಸಿಡಿಲು ಬಡಿದು ಲಕ್ಷಾಂತರ ಮೌಲ್ಯದ ಮನೆಯ ಸೊತ್ತುಗಳ ಜತೆಗೆ ಕ್ಯಾಟರಿಂಗ್ ಉದ್ಯಮ ಪಾತ್ರೆ ಪಗಡೆಗಳು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನಡೆದಿದೆ.ಪುಣ್ಕೆದಡಿ ನಿವಾಸಿ ಲೋಕೇಶ್ ಪೂಜಾರಿ ಅವರ ಮನೆಗೆ ಸಿಡಿಲು ಬಡಿದಿದ್ದು, ಆದರೆ ಮನೆಮಂದಿ ಪಕ್ಕದ ಮನೆಯಲ್ಲಿ ಮಲಗಿದ್ದ ಹಿನ್ನೆಲೆಯಲ್ಲಿ ಬಾರಿ ಅನಾಹುತವೊಂದು ತಪ್ಪಿದಂತಾಗಿದೆ. ಇಲ್ಲದೇ ಇದ್ದರೆ ಜೀವಕ್ಕೂ

ತಲಪಾಡಿ-ಚೆಂಗಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ರಿಟರ್ನ್ ಹಾಲ್ ಬಿರುಕು

ಮಂಜೇಶ್ವರ: ತಲಪಾಡಿ-ಚೆಂಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗುತ್ತಿರುವ ಮಧ್ಯ ತಲಪ್ಪಾಡಿಯಿಂದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿರ್ಮಿಸಿರುವ ರಿಟರ್ನ್ ಹಾಲ್ ಬಿರುಕು ಬಿಟ್ಟಿರುವುರಾಗಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಯಾವುದೇ ಮಾಹಿತಿ ನೀಡದೆ ಕಾಮಗಾರಿ ಮುಂದುವರಿಸುತ್ತಿರುವ ಗುತ್ತಿಗೆದಾರರು ಬಿರುಕು ಬಿಟ್ಟಿರುವ ಬಗ್ಗೆ ಸ್ಥಳೀಯರ ಪ್ರಶ್ನೆಗಳಿಗೆ ಸ್ಪಂದಿಸದಿರುವುದು ಜನರ ಆತಂಕ ಹೆಚ್ಚಿಸಿದೆ. ರಾಷ್ಟ್ರೀಯ ಹೆದ್ದಾರಿ

ಮುಂಬೈ: ನಾಪತ್ತೆಯಾಗಿದ್ದ ಸುಧೀರ್ ಕುಮಾರ್ ಸಫಲಿಗ ಶವವಾಗಿ ಪತ್ತೆ

ವಸಾಯಿಯ ಪಶ್ಚಿಮದ ಗೊರೈಪಾಡದ ಜೀವನ್ ನಗರ ನಿವಾಸಿ 35 ವರ್ಷ ಸುಧೀರ್ ಕುಮಾರ್ ಸಫಲ್ಯ ಅವರು ಆ.14ರಂದು ನಾಪತ್ತೆಯಾಗಿದ್ದು ಬಳಿಕ ಸೋಮವಾರ ಸಂಜೆ ಶವವಾಗಿ ಪತ್ತೆಯಾಗಿದ್ದಾರೆ. ಮೂಲತಃ ಮಂಜೇಶ್ವರ ಬಳಿಯ ಉಪ್ಪಳ ನಿವಾಸಿಯಾಗಿದ್ದ ಸುಧೀರ್ ಅವಿವಾಹಿತನಾಗಿದ್ದು, ಇವರನ್ನು ಕೊಲೆ ಮಾಡಲಾದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗೊರೈಪಾಡದ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಸುಧೀರ್ ಆ.14ರಂದು ಉಪ್ಪಳ ಸಮಿತಿಯ ಕಾರ್ಯದರ್ಶಿಯವರಿಗೆ ಫೋನ್ ಕರೆ ಮಾಡಿ ಭೇಟಿಗಾಗಿ

ಪ್ರದಾನಿ ಆಗಮನದ ಹಿನ್ನೆಲೆ ಕೂಳೂರು, ಚೌಕಿ ವ್ಯಾಪ್ತಿಯಲ್ಲಿ ತುರ್ತುಪರಿಸ್ಥಿತಿ ವಾತಾವರಣ ಸಿಪಿಐ(ಎಂ) ಖಂಡನೆ.

ಸೆ 2ರ ಮೋದಿ ಸಮಾವೇಶಕ್ಕಾಗಿ ಕೂಳೂರು ವ್ಯಾಪ್ತಿಯಲ್ಲಿ ಭಯದ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಎರಡು ದಿನದ ಬಂದ್ ಗೆ ಆಡಳಿತವೇ ಕರೆನೀಡಿದೆ. ಗೋಲ್ಡ್ ಪಿಂಚ್ ಮೈದಾನದ ಸುತ್ತಮುತ್ತಲಿನ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಶಾಲಾ ಕಾಲೇಜುಗಳಿಗೆ ಗಣೇಶೋತ್ಸವದ ನೆಪದಲ್ಲಿ ರಜೆ ಸಾರಲಾಗಿದೆ.. ಮೊದಲೇ ಕೊರೋನಾ, ನೆರೆ, ಬೆಲೆಏರಿಕೆಯಂತಹ ಸಮಸ್ಯೆಗಳಿಂದ ಬಳಲುತ್ತಿರುವ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕಾರ್ಯಕ್ರಮವು ಒಂದು ಪಕ್ಷದ