Home Posts tagged #missing case

ಪುತ್ತೂರು: ನಾಪತ್ತೆಯಾದ ಪುತ್ತೂರಿನ ವಿದ್ಯಾರ್ಥಿನಿ ಪತ್ತೆ

ಪುತ್ತೂರು: ಪಡೂರು ಗ್ರಾಮದ ಮುಂಡಾಜೆಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಪುತ್ತೂರು ಪಟ್ಟೂರು ಮುಂಡಾಜೆ ನಿವಾಸಿ ಗಿರಿಜಾ ದೇವಿ, ಮಂಟು ಪಾಸ್ವಾನ ದಂಪತಿ ಪುತ್ರಿ ರೂಪ (19ವ) ಜು.1ರಂದು ನಾಪತ್ತೆಯಾಗಿದ್ದರು. ಇದೀಗ ಅವರು ಬೆಂಗಳೂರಿನಲ್ಲಿ ಪತ್ತೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ರೂಪ ಅವರ ತಾಯಿ ಮಂಗಳೂರಿನ ನರ್ಸಿಂಗ್

ಪಾಣೆಮಂಗಳೂರು ಹಳೆ ಸೇತುವೆ ಬಳಿ ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ಅವರ ಮೃತದೇಹ ಪತ್ತೆ

ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆಯ ಬಳಿ ಬೈಕ್, ಮೊಬೈಲ್, ಚಪ್ಪಲಿ ಹಾಗೂ ಅಂಗಿ ಬಿಟ್ಟು ನಾಪತ್ತೆಯಾಗಿದ್ದ ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ಅವರ ಮೃತದೇಹ ಪತ್ತೆಯಾಗಿದೆ. ಅವರು ಸುಳ್ಯ ಮಂಗಳ ಡ್ರೈವಿಂಗ್‌ ಸ್ಕೂಲ್‌ ನ ಮಾಲಕ. ಇಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಪಾಣೆಮಂಗಳೂರು ಹಳೆ ಸೇತುವೆಯ ಕೆಳಭಾಗದಲ್ಲಿ ಬೈಕ್ ಅಂಗಿ ಮೊಬೈಲ್‌ ಮತ್ತು ಚಪ್ಪಲ್ಲಿ ಅನಾಥವಾಗಿ ಬಿದ್ದಿರುವುದನ್ನು ಗಮನಿಸಿ, ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.ಈ ಬಳಿಕ

ಪುತ್ತೂರು ನಗರಸಭೆ ಸದಸ್ಯ ರಮೇಶ್ ರೈ ನಾಪತ್ತೆ

ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆ ಕೆಳಭಾಗದಲ್ಲಿ ಬೈಕ್ ಮೊಬೈಲ್ ಶರ್ಟ್ ಮತ್ತು ಚಪ್ಪಲಿ ಅನಾಥವಾಗಿ ಸಿಕ್ಕಿದ್ದು, ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಅವರ ಸೊತ್ತುಗಳು ಇದಾಗಿದ್ದು,ಇದನ್ನು ಅಲ್ಲಿಟ್ಟು ಕಾಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ರಮೇಶ್ ರೈ ಅವರು ಇತ್ತೀಚಿಗೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ,ಅಯ್ಕೆಯಾಗಿದ್ದರು.ಇಂದು ಬೆಳಿಗ್ಗೆ ಸುಮಾರು 11 ಗಂಟೆಯಿಂದ ಬೈಕ್ ಹಾಗೂ ಸೊತ್ತುಗಳು ಇಲ್ಲಿ ಅನಾಥವಾಗಿ ಕಂಡು

ವಾಲ್ಪಾಡಿ : ಕಾಲು ಜಾರಿ ನೀರಿಗೆ ಬಿದ್ದ ವ್ಯಕ್ತಿ – ಅಗ್ನಿಶಾಮಕ ಸಿಬ್ಬಂದಿಗಳಿಂದ ಹುಡುಕಾಟ

ಮೂಡುಬಿದಿರೆ : ತಾಲೂಕಿನ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಗೊಟ್ಟು ಎಂಬಲ್ಲಿ ವ್ಯಕ್ತಿಯೋವ೯ರು ಕಾಲು ಜಾರಿ ನೀರಿಗೆ ಬಿದ್ದ ಘಟನೆ ನಡೆದಿದೆ.ವಾಲ್ಪಾಡಿಯ ಆನೆಗುಡ್ಡೆ ಬಳಿಯ ಶ್ರೀನಿವಾಸ್ ಭಟ್ ಎಂಬವರ ಪುತ್ರ ಗುರುಪ್ರಸಾದ್ ಭಟ್ (36ವ) ನೀರಿಗೆ ಬಿದ್ದವರು.ಜೋಗೊಟ್ಟು ಬಳಿಯ ಪಡ್ಡಾಯಿಮಜಲು ಎಂಬಲ್ಲಿರುವ ಅಣೆಕಟ್ಟಿನಲ್ಲಿ ನೀರು ತುಂಬಿಕೊಂಡಿತ್ತು ಇದರಲ್ಲಿ ಸಿಲುಕಿಕೊಂಡಿರುವ ಕಸವನ್ನು ತೆಗೆಯಲೆಂದು ಬದಿಗೆ ಇಳಿದ ಸಂದಭ೯ದಲ್ಲಿ ಕಾಲು ಜಾರಿ ನೀರಿಗೆ ಬಿದ್ದು

ಕಾಪು ಬೀಚ್ ಬಳಿ ಬೈಕ್ ಬಿಟ್ಟು ಯುವಕ ನಾಪತ್ತೆ : ಮುಂದುವರಿದ ಹುಡುಕಾಟ

ಯುವಕನೋರ್ವ ಬೀಚ್ ಬಳಿ ಬೈಕ್ ಇಟ್ಟು ನಿಗೂಡವಾಗಿ ನಾಪತ್ತೆಯಾದ ಘಟನೆ ಕಾಪುವಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಾಪು ಪಡುಗ್ರಾಮ ನಿವಾಸಿ ತುಳಸಿ ಸಾಲ್ಯಾನ್ ಅವರ ಪುತ್ರ ಕರಣ್ ಸಾಲ್ಯಾನ್ (20) ನಾಪತ್ತೆಯಾದ ಯುವಕ. ಈತ ಗುರುವಾರ ಸಂಜೆಯಿಂದ ನಾಪತ್ತೆಯಾಗಿದ್ದು ಶುಕ್ರವಾರ ಬೆಳಿಗ್ಗೆ ಕಾಪು ಬೀಚ್ ಬಳಿ ಬೈಕ್, ಬೆಲೆಬಾಳುವ ಫೋನ್, ನಗದು ಸಹಿತವಾಗಿ ಪರ್ಸ್ ಪತ್ತೆಯಾಗಿದೆ.‌ ಮನೆಯವರು ಮತ್ತು ಸ್ಥಳೀಯರು ಕಾಪು ಬೀಚ್ ಬಳಿ, ಸಮುದ್ರ ತೀರ ಮತ್ತು ಸಮುದ್ರದಲ್ಲಿ ತೀವ್ರ

ಪಡುಬಿದ್ರಿ: ನಾಪತ್ತೆಯಾದ ವ್ಯಕ್ತಿ ಶವವಾಗಿ ಪತ್ತೆ

ಪಡುಬಿದ್ರಿ: ಕಳೆದ ಎರಡು ದಿನದ ಹಿಂದೆ ನಾಪತ್ತೆಯಾದ ಪಲಿಮಾರು ಗುಂಡಿ ನಿವಾಸಿ ವ್ಯಕ್ತಿಯ ಶವ ಪಕ್ಕದ ಕೆಸರು ತುಂಬಿದ ಹಳ್ಳವೊಂದರಲ್ಲಿ ಪತ್ತೆಯಾಗಿದೆ.ಮೃತರು ಪಲಿಮಾರು ಗುಂಡಿ ನಿವಾಸಿ, ಮುಂಬೈ ಮಹಾ ನಗರದಲ್ಲಿ ವಾಸವಿದ್ದ ಆನಂದ ಪೂಜಾರಿ(51), ಊರಿನ ಮನೆಯಲ್ಲಿ ಕುಟುಂಬದ ದೈವದ ಧಾರ್ಮಿಕ ಕಾರ್ಯಕ್ರಮವಿದ್ದು ಅದರಲ್ಲಿ ಪಾಲ್ಗೊಂಡಿದ್ದ ಇವರು ರಾತ್ರಿ ಸುಮಾರು ಹನ್ನೆರಡರ ಸುಮಾರಿಗೆ ಪಕ್ಕದ ಮನೆಯ ಅಂಗಳದಲ್ಲಿ ನಡೆದು ಹೋಗುವುದನ್ನು ಆ ಮನೆ ಮಂದಿ ನೋಡಿದ್ದರು. ಅಲ್ಲಿಂದ

ಮಾಲ್ ಗೆ ತೆರಳಿದ ಎರಡು ಮಕ್ಕಳ ತಾಯಿ ನಾಪತ್ತೆ

ಉಳ್ಳಾಲ : ನಗರದ ಸಿಟಿ ಸೆಂಟರ್ ಮಾಲ್ ಗೆಂದು ತೆರಳಿದ್ದ ಚೆಂಬುಗುಡ್ಡೆ ನಿವಾಸಿ ಇಬ್ಬರು ಮಕ್ಕಳ ತಾಯಿ ನಾಪತ್ತೆಯಾಗಿರುವ ಕುರಿತು ಮಂಗಳೂರು ಉತ್ತರ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ.ಚೆಂಬುಗುಡ್ಡೆ ಕೆರೆಬೈಲ್ ಗುಡ್ಡೆ ನಿವಾಸಿ ಸಫಾನ (27) ನಾಪತ್ತೆ ಯಾದವರು.ಎ.28 ರಂದು ತಾಯಿ ಜೊತೆಗೆ ಸಿಟಿಸೆಂಟರ್ ಗೆಂದು ತೆರಳಿರುವ ಸಫಾನ, ಬಳಿಕ ಮನೆಯತ್ತ ಬಾರದೇ ನಾಪತ್ತೆಯಾಗಿದ್ದಾಳೆ. ವಿವಾಹಿತೆಯಾಗಿರುವ ಸಫಾನ ಇಬ್ಬರು ಮಕ್ಕಳ ತಾಯಿಯಾಗಿದ್ದಾಳೆ. ಈಕೆಯನ್ನು

ಪುತ್ತೂರು: ವ್ಯಕ್ತಿ ನಾಪತ್ತೆ

ಪುತ್ತೂರು: ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡ ಎಂಬಲ್ಲಿನ ನಿವಾಸಿ ಸೇಸಪ್ಪ ಗೌಡ(62) ಕಳೆದ 5 ದಿನಗಳ ಹಿಂದೆ ಪುತ್ತೂರಿನಿಂದ ಕಾಣೆಯಾಗಿದ್ದಾರೆ ಎಂದು ಅವರ ಪುತ್ರ ಲೋಕೇಶ್ ದೇವರಗುಂಡ ಎಂಬವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.ಪುತ್ತೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಿಂದ ಔಷಧಿ ಪಡೆದುಕೊಂಡು ಅಲ್ಲಿಂದ ತೆರಳಿದ ಅವರು ತಮ್ಮ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ. ಅಲ್ಪ ಮಟ್ಟಿಗೆ ಮಾನಸಿಕ ಅಸ್ವಸ್ಥಗೆ ಒಳಗಾಗಿದ್ದಾರೆ. ಸುಮಾರು 6 ಅಡಿ

ಕೊಣಾಜೆ : ಯುವತಿ ನಾಪತ್ತೆ

ಉಳ್ಳಾಲ: ಮನೆ ಕೆಲಸಕ್ಕಿದ್ದ ಯುವತಿ ನಾಪತ್ತೆಯಾಗಿರುವ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಹಾವೇರಿ ಸವಣೂರು ಮಾರುತಿಪುರ ನಿವಾಸಿ ಪೂಜಾ ಲಮಾಣಿ (20) ನಾಪತ್ತೆಯಾದವರು. ಕೊಣಾಜೆ ಕಕ್ಕೆಮಜಲು ನಿವಾಸಿ ಕುಟುಂಬವೊಂದು ಅನಾರೋಗ್ಯದಲ್ಲಿರುವ ಪ್ರಾಯಸ್ತರನ್ನು ನೋಡಿಕೊಳ್ಳಲು ಖಾಸಗಿ ಏಜೆನ್ಸಿ ಮೂಲಕ ಕೆಲಸಕ್ಕೆ ಇಟ್ಟುಕೊಂಡಿದ್ದು, ತಿಂಗಳಿಗೆ 20,000 ರೂ ಏಜೆನ್ಸಿಗೆ ಪಾವತಿಸುತ್ತಿದ್ದರು. ಫೆ.1 ರಂದು ಸಂಜೆ 3 ಕ್ಕೆ ಮನೆಯಿಂದ ಹೊರಹೋದಾಕೆ ನಂತರ

ಜೂ.1 – ಇಂದು ವಿವಾಹವಾಗಬೇಕಿದ್ದ ವರ ನಾಪತ್ತೆ

ಉಳ್ಳಾಲ: ಇಂದು (ಜೂ.1) ರಂದು ವಿವಾಹವಾಗಬೇಕಾಗಿರುವ ವರ ನಾಪತ್ತೆಯಾಗಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ತೌಡುಗೋಳಿ ವರ್ಕಾಡಿ ಎಂಬಲ್ಲಿ ಮನೆಯಲ್ಲಿ ಸಂಜೆ ನಡೆಯಬೇಕಾಗಿದ್ದ ಮೆಹಂದಿ ಶಾಸ್ತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಪೋಷಕರು,ಕುಟುಂಬಸ್ಥರು ಸಂಭ್ರಮದಲ್ಲಿ ತೊಡಗಿದ್ದರೆ ಇತ್ತ ಹಣ್ಣು ಖರೀದಿಗೆಂದು ತೆರಳಿದ್ದ ವರನೇ ನಾಪತ್ತೆಯಾಗಿದ್ದು ವಧೂ ವರರ ಕುಟುಂಬವನ್ನು ಆತಂಕಕ್ಕೀಡು ಮಾಡಿದೆ. ತೌಡುಗೋಳಿ- ವರ್ಕಾಡಿ ದೇವಂದಪಡ್ಪುವಿನ ಉದ್ಯಮಿ‌ ಐತಪ್ಪ ಶೆಟ್ಟಿ ಅವರ