ಪುತ್ತೂರು: ವ್ಯಕ್ತಿ ನಾಪತ್ತೆ
ಪುತ್ತೂರು: ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡ ಎಂಬಲ್ಲಿನ ನಿವಾಸಿ ಸೇಸಪ್ಪ ಗೌಡ(62) ಕಳೆದ 5 ದಿನಗಳ ಹಿಂದೆ ಪುತ್ತೂರಿನಿಂದ ಕಾಣೆಯಾಗಿದ್ದಾರೆ ಎಂದು ಅವರ ಪುತ್ರ ಲೋಕೇಶ್ ದೇವರಗುಂಡ ಎಂಬವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಪುತ್ತೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಿಂದ ಔಷಧಿ ಪಡೆದುಕೊಂಡು ಅಲ್ಲಿಂದ ತೆರಳಿದ ಅವರು ತಮ್ಮ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ. ಅಲ್ಪ ಮಟ್ಟಿಗೆ ಮಾನಸಿಕ ಅಸ್ವಸ್ಥಗೆ ಒಳಗಾಗಿದ್ದಾರೆ. ಸುಮಾರು 6 ಅಡಿ ಎತ್ತರ, ಗೋದಿ ಮೈಬಣ್ಣ, ಅರೆ ನರೆತ ಕೂದು ಹೊಂದಿದ್ದಾರೆ. ಕನ್ನಡ, ತುಳು, ಮಲಯಾಳ ಬಾಷೆ ಬಲ್ಲವರಾಗಿದ್ದಾರೆ. ಅವರ ಪತ್ತೆಯಾದಲ್ಲಿ ಪುತ್ತೂರು ನಗರ ಠಾಣೆಗೆ ಮಾಹಿತಿ ನೀಡುವಂತೆ ನಗರ ಠಾಣೆಯ ಪೊಲೀಸರು 08251-230555.
9480805361ಕರೆ ಮಾಡಲು ತಿಳಿಸಿದ್ದಾರೆ.