Home Posts tagged #puttur

ನೆಹರೂ ಮೆಮೊರಿಯಲ್ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ “ನಂದನ ದಿನ”

ಸುಳ್ಯ ನೆಹರು ಮೆಮೊರಿಯಲ್ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ “ನಂದನ ದಿನ” ಅಗಸ್ಟ್ 30ನೇ ಶನಿವಾರದಂದು ನಡೆಯಿತು. ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಶೈಕ್ಷಣಿಕ ಸಾಧನೆ ಜೊತೆಗೆ ಸಾಂಸ್ಕೃತಿಕ, ಸಾಮಾಜಿಕ

ಮಂಜೇಶ್ವರ: ರಾಮಯ್ಯ ನಾಯ್ಕ್ ನಿಧನ

ಮಂಜೇಶ್ವರ ಸಮೀಪ ವರ್ಕಾಡಿ ಕೆಳಗಿನ ಪಾಡ ರಾಮಯ್ಯ ನಾಯ್ಕ್ (80)ರವರು ಅಲ್ಪ ಕಾಲೀನ ಅನಾರೋಗ್ಯ ದಿಂದ ಮೃತ ಪಟ್ಟಿರುತ್ತಾರೆ. ಅವರು ಜನಸಂಘ ಕಾಲದಿಂದ ಬಿಜೆಪಿ ಸದಸ್ಯರು ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರು ಮತ್ತು ವರ್ಕಾಡಿ ದುರ್ಗಾಪರಮೇಶ್ವರಿ ಭಜನಾ ಮಂದಿರ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಗುಡ್ಡೋಡಿ ದೈವಸ್ಥಾನ ದ ಗೌರವಾಧ್ಯಕ್ಷರಾಗಿದ್ದು ಅವರು ಉತ್ತಮ ಸಮಾಜಸೇವಕರಾಗಿದ್ದರು. ಅವರು ಹೆಂಡತಿ, ಮಗಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿರುತ್ತಾರೆ.

ಪುತ್ತೂರು :ಲಿಟ್ಲ್ ಫ್ಲವರ್ ಶಾಲೆಯಲ್ಲಿ ಶಾಲಾ ಶೈಕ್ಷಣಿಕ ಸಂಘಗಳ ಉದ್ಘಾಟನೆ

ಲಿಟ್ಲ್ ಫ್ಲವರ್ ಶಾಲೆ ದರ್ಬೆ ಪುತ್ತೂರು ಇಲ್ಲಿನ ಶಾಲಾ ಶೈಕ್ಷಣಿಕ ಸಂಘಗಳ ಉದ್ಘಾಟನೆ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆಯಲ್ಲಿ ನೆರವೇರಿತು. ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಗ್ರಾಫಿಕ್ ಡಿಸೈನರ್ ಶ್ರೀ ಮಂಜುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜೀವನ ಅನ್ನೋದು ಸದಾ ಗೆಲುವು ಅಲ್ಲ ಸತತ ಹೋರಾಟ. ಏನೇ ಕೆಲಸ ಮಾಡಿ ಅದರಲ್ಲಿ ಶ್ರದ್ದೆ ಇರಲಿ.ಸಾಮಾಜಿಕ ಜಾಲತಾಣ ವನ್ನು ಒಳಿತಿಗೆ ಬಳಸಿದ್ರೆ ಅದ್ಬುತ ಯಶಸ್ಸು ನಿಮ್ಮದಾಗತ್ತೆ ಎಂದರು.

ಕಡಬ ಗ್ರಾಮದ ಶ್ರಮಜೀವಿ ಕೃಷಿಕ ಯತೀಂದ್ರ ಗೌಡ ವಿಧಿವಶ

ಕಡಬ: ಕಡಬ ಗ್ರಾಮದ ಪಿಜಕ್ಕಳ ಗೊಡಾಲು ನಿವಾಸಿ, ಯತೀಂದ್ರ ಗೌಡ(48.ವ) ಅವರು ಆ.24ರಂದು ನಿಧನ ಹೊಂದಿದ್ದಾರೆ.ಇವರು ಆ.23ರಂದು ತನ್ನ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಕಡಬ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆ ಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು(ಆ.24) ಬೆಳಿಗ್ಗೆ ಮೃತಪಟ್ಟಿದ್ದಾರೆ.ಮೃತರು ಪತ್ನಿ, ಮಕ್ಕಳು ಹಾಗೂ ಬಂಧು

ಉಡುಪಿ: ಮುಂದಿನ 5 ದಿನಗಳಲ್ಲಿ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮುಂದಿನ 5 ದಿನಗಳಲ್ಲಿ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಆ.18 ಮತ್ತು 19 ರಂದು ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಜಿಲ್ಲೆಯಾದ್ಯಂತ ರಾತ್ರಿಯಿಂದಲೇ ಧಾರಾಕಾರ ಮಳೆಯಾಗುತ್ತಿದ್ದು ಜಿಲ್ಲೆಯ ಅಂಗನವಾಡಿ ,ಪ್ರಾಥಮಿಕ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ರಜೆ ಘೋಷಣೆ ಮಾಡಿದ್ದಾರೆ.ಮುಂದಿನ ಎರಡು ದಿನ ಅರಬ್ಬಿ

ಕಡಬ ಪಟ್ಟಣ ಪಂಚಾಯತ್ ಪ್ರಥಮ ಚುನಾವಣೆ:ಶೇ 79.83 ಮತದಾನ

ಕಡಬ: ಕಡಬ ಪಟ್ಟಣ ಪಂಚಾಯತ್ ನಡೆದ ಪ್ರಥಮ ಚುನಾವಣೆಯಲ್ಲಿ ಶೇ 79.83 ಮತದಾನವಾಗಿದ್ದು, ಯಾವುದೇ ಗೊಂದಲವಿಲ್ಲದೆ ಬೆಳಿಗ್ಗೆ 7 ರಿಂದ ಸಂಜೆ ಐದರ ತನಕ ಶಾಂತಿಯುತ ಮತದಾನವಾಗಿದೆ,32 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭಧ್ರವಾಗಿದ್ದು, ಒಟ್ಟು ಹದಿಮೂರು ವಾರ್ಡ್ಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ಎಲ್ಲಾ ಕ್ಷೇತ್ರಗಳನ್ನು ಅಭ್ಯರ್ಥಿಗಳನ್ನು ಕಣಕಕ್ಕಿಳಿಸಿದ್ದು, ಎಸ್.ಡಿ.ಪಿ.ಐ-೩, ಮುಸ್ಲಿಂ ಲೀಗ್-೧, ಪಕ್ಷೇತರರು-೨ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. 10

ಕರ್ನಾಟಕದ ಕಾಂಗ್ರೆಸ್ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿಕ ಆರೋಗ್ಯ ಸೇವೆ ನಿರಾಕರಣೆ:ಸಂಸದ ಕ್ಯಾ. ಚೌಟ ಕಳವಳ

ನವದೆಹಲಿ: ದೇಶದಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಆಯುಷ್ಮಾನ್‌ ಯೋಜನೆಗೆ ಕರ್ನಾಟಕ ಸರ್ಕಾರವು ತನ್ನ ಪಾಲು ನೀಡದ ಕಾರಣ ಯೋಜನೆ ಅನುಷ್ಠಾನ ಪ್ರಕ್ರಿಯೆ ಸ್ಥಗಿತಗೊಂಡಿರುವ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ನಿಯಮ 377ರ ಅಡಿಯಲ್ಲಿ ಲೋಕಸಭೆಯಲ್ಲಿಈ ಗಂಭೀರ ವಿಷಯವನ್ನು

ಸುಳ್ಯ:ಪರಿಸರ ಜಾಗೃತಿಯಾನ, ಪರಿಸರ ಗೀತೆ ಗಾಯನ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಹಾಗೂ ಸರಕಾರಿ ಪ್ರೌಢಶಾಲೆ ಅಜ್ಜಾವರ ಇದರ ಸಹಯೋಗದೊಂದಿಗೆ ಪರಿಸರ ಜಾಗೃತಿಯಾನ, ಪರಿಸರ ಗೀತೆ ಗಾಯನ ಹಾಗೂ ಔಷಧೀಯ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾ ಸರಣಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಅಧ್ಯಕ್ಷರಾಗಿರುವ ಶ್ರೀ ಚಂದ್ರಶೇಖರ ಪೇರಾಲು ವಹಿಸಿದ್ದರು. ಎಸ್. ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಪ್ರಕಾಶ್ ಕಣೆಮರಡ್ಕ

ಆನೆ ದಾಳಿಯಿಂದ ಹಾನಿ ವಿಚಾರ: ಉಬರಡ್ಕ- ಮಿತ್ತೂರು, ರೆಂಜಾಳ ಗ್ರಾಮದ ಕೃಷಿಕರೊಂದಿಗೆ ಸಂವಾದ

ಕಾಡುಪ್ರಾಣಿಗಳಿಂದ ವಿಶೇಷವಾಗಿ ಆನೆ ದಾಳಿಯಿಂದ ಹಾನಿಗೊಳಗಾಗಿರುವ ಉಬರಡ್ಕ- ಮಿತ್ತೂರು ಗ್ರಾಮದ ಮತ್ತು ಮರ್ಕಂಜ ಗ್ರಾಮದ ರೆಂಜಾಳದ ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮವು ಉಬರಡ್ಕ C.A ಬ್ಯಾಂಕ್ ಸಭಾಂಗಣ ಮತ್ತು ಮರ್ಕಂಜದ ಸಭೆಯು ರೆಂಜಾಳ ವಿನಾಯಕ ಸಭಾಭವನದಲ್ಲಿ ನಡೆಯಿತು. ಹಲವಾರು ತಮ್ಮ ಕೃಷಿ ಹಾನಿಯಾಗಿರುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು, ಸರಕಾರದಿಂದ ಸಿಗುವ ಸವಲತ್ತುಗಳು, ಪರಿಹಾರಗಳ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದರು.ಸಭೆಯನ್ನು

ಪುತ್ತೂರು: ಫಿಕ್ಸೆಲ್ ಕ್ರಿಯೇಟಿವ್ ಪುತ್ತೂರು 8ನೇ ವರ್ಷಕ್ಕೆ ಪಾದಾರ್ಪಣೆ

ಪುತ್ತೂರಿನಲ್ಲಿ ಗ್ರಾಹಕರ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಫಿಕ್ಸೆಲ್ ಕ್ರಿಯೇಟಿವ್ ಪುತ್ತೂರು ಎಂಟನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಪ್ರಜ್ವಲ್ ಪುತ್ತೂರು ಮಾಲಕತ್ವದಲ್ಲಿ ಫಿಕ್ಸೆಲ್ ಕ್ರಿಯೇಟಿವ್ ಕಾರ್ಯಾಚರಿಸುತ್ತಿದ್ದು, ಎಲ್‌ಇಡಿ ವಿಡಿಯೋ ವಾಲ್, ಟಿವಿ & ಪ್ರೋಜೆಕ್ಟರ್, ವಿಡಿಯೋಗ್ರಫಿ, ಲೈವ್ ವಿಡಿಯೋ ಮಿಕ್ಸಿಂಗ್, ಇಂಡಸ್ಟ್ರೀಯಲ್ ಅರ್ತಿಂಗ್, ಜನರೇಟರ್ ಅರ್ತಿಂಗ್, ಸೋಲಾರ್ ಅರ್ತಿಂಗ್, ಡಿಜಿಟಲ್ ಅರ್ತಿಂಗ್ ವ್ಯವಸ್ಥೆಯೂ ಲಭ್ಯವಿದೆ. ಈ ಹಿಂದೆ