ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗದ ಮನೆಯಲ್ಲಿ ಕಳ್ಳರ ಕರಾಮತ್ತು ನಡೆದಿದೆ. ಮನೆ ಮಾಲೀಕ ವಿದೇಶದಲ್ಲಿದ್ದು, ಬೀಗ ಹಾಕಿದ ಮನೆಗೆ ನುಗ್ಗಿದ ಕಳ್ಳರು ಮನೆಯಿಡೀ ಜಾಲಾಡಿ ಡಿ.ವಿ.ಆರ್ ಹೊತ್ತೊಯ್ದ ಘಟನೆ ನಡೆದಿದೆ. ಮನೆ ಮಾಲಿಕ ಎಂ.ಕೆ.ಖಲೀಲ್ ಕುಟುಂಬ ಅರಬ್ ರಾಷ್ಟ್ರದ ಅಜ್ಮನ್ ನಲ್ಲಿದ್ದು ಆರು ತಿಂಗಳ ಹಿಂದಷ್ಟೇ ಬಂದು ಹೋಗಿದ್ದರು.
ಪುತ್ತೂರು : ವೈದ್ಯರ ಎಡವಟ್ಟಿಗೆ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ರಾತ್ರೋರಾತ್ರಿ ರೋಗಿಯ ಸಂಬಂಧಿಕರು ಮತ್ತು ಸಾರ್ವಜನಿಕರು ಆಸ್ಪತ್ರೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಕಕ್ಕೆಪದವಿನ ಪಿಲಿಬೈಲ್ ನಿವಾಸಿ ಕೃಷ್ಣಪ್ಪ ಗೌಡ ಎಂಬವರು ಜ್ವರದ ಕಾರಣ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಪರೀಕ್ಷಿಸಿದ ವೈದ್ಯರು ನಾಲಿಗೆಯ ಕೆಳ ಭಾಗದಲ್ಲಿ ಗೆಡ್ಡೆಯ ಬಗ್ಗೆ ಸೂಚನೆ ನೀಡಿದ್ದರು. ಬಳಿಕ ಗೆಡ್ಡೆಯನ್ನ
ಪುತ್ತೂರು: ಭಾನುವಾರ ಸಂಜೆ ಪುತ್ತೂರು ನಗರ ವ್ಯಾಪ್ತಿಯಲ್ಲಿ ಭಾರೀ ಗಾಳಿಮಳೆ ಬಂದಿದ್ದು ಬಪ್ಪಳಿಗೆಯ ಸಿಂಗಾಣಿ ಎಂಬಲ್ಲಿ ಮನೆಯ ಮೇಲೆ ಮರ ಬಿದ್ದು ಬಾಗಶ: ಜಖಂಗೊಂಡಿದ್ದು, ಮನೆ ಮಂದಿ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಬಪ್ಪಳಿಗೆಯ ಸಿಂಗಾಣಿಯ ಕಮಲ ಎಂಬaವರ ಮನೆಯ ಮಾಡಿನ ಶೀಟು ಗಾಳಿಗೆ ಹಾರಿ ಹೋಗಿದ್ದು, ಉರ್ಲಾಂಡಿಯಲ್ಲಿ ಶೋಭಾ ಹೆಗ್ಡೆ ಎಂಬವರ ಮನೆಯ ಮೇಲೆ ಮರ ಬಿದ್ದು ಬಾಗಶ: ಜಖಂಗೊಂಡಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಸುದ್ದಿ ತಿಳಿದು ತಕ್ಷಣ
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಮಾಜಿ ಅಧ್ಯಕ್ಷ ಶಿವಕುಮಾರ್ ಕೌಡಿಚ್ಚಾರ್ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಉದ್ಯೋಗ ನಿಮಿತ್ತ ಧಾರವಾಡದಲ್ಲಿ ವಾಸ್ತವ್ಯ ಹೊಂದಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಮೃತ ಶರೀರ ದಾರವಾಡ ಸರಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಕುಟುಂಬಸ್ಥರು ಈಗಾಗಲೇ ಧಾರವಾಡ ಕಡೆ ಪ್ರಯಾಣ ಬೆಳೆಸಿದ್ದಾರೆ.
ವಿಟ್ಲ: ನಿಯಂತ್ರಣ ತಪ್ಪಿ ಕ್ರೇಟಾ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ವಿಟ್ಲ ಪುತ್ತೂರು ರಸ್ತೆಯ ಚಂದಳಿಕೆ ಎಂಬಲ್ಲಿ ನಡೆದಿದೆ. ಕಾರು ಪಲ್ಟಿಯಾದ ಪರಿಣಾಮ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಪವಾಡ ಎಂಬಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಪುತ್ತೂರು: ಬೊಳುವಾರಿನಲ್ಲಿ ಮಾವಿನ ಮರವೊಂದು ರಸ್ತೆಗೆ ಬಿದ್ದು ಸಾರ್ವಜನಿಕರು, ವಾಹನ ಚಾಲಕರು ಅಪಾಯದಿಂದ ಪಾರಾದ ಘಟನೆ ನಡೆದಿದೆ. ಘಟನಾ ಸ್ಥಳಕ್ಮೆ ಶಾಸಕರುಭೇಟಿ ನೀಡಿ ಪರಿಶೀಲನೆ ನಡೆಸಿದು, ಮರ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಮಧ್ಯಮ ಗಾತ್ರದ ಮಾವಿನ ಮರ ರಸ್ತೆಗೆ ಮುರಿದು ಬಿದ್ದಿತ್ತು. ಸಾರ್ವಜನಿಕರು, ವಾಹನಗಳು ರಸ್ತೆಯಲ್ಲಿ ಸಂಚರಿಸುತಿದ್ದರೂ ಯಾವುದೇ ಅಪಾಯ ಉಂಟಾಗಿಲ್ಲ. ಮಾವಿನ ಮರ ಬಿದ್ದ ಸುದ್ದಿ ತಿಳಿದು ಸ್ಥಳಕ್ಕೆ ಬಂದ
ಮಾಣಿ – ಮೈಸೂರು ರಾ.ಹೆದ್ದಾರಿ 275 ರ ಆರ್ಯಾಪು ಗ್ರಾಪಂ ವ್ಯಾಪ್ತಿಯ ಕಲ್ಲರ್ಪೆಯಲ್ಲಿ ಅಪಾಯಕಾರಿ ತಿರುವು ಇದ್ದು ಅದನ್ನು ಶಾಸಕರಾದ ಅಶೋಕ್ ರೈ ವೀಕ್ಷಣೆ ಮಾಡಿದರು. ಈ ತಿರುವಿನಲ್ಲಿ ಅನೇಕ ವಾಹನ ಅಫಘಾತಗಳು ನಡೆದಿದ್ದು ಮೂವರು ಮೃತಪಟ್ಟ ಘಟನೆಯೂ ನಡೆದಿತ್ತು. ಇಲ್ಲಿರುವ ಅಪಾಯಕಾರಿ ಧರೆಯನ್ನು ತೆರವು ಮಾಡಿ ವಾಹನ ಸಂಚಾರ ಗೋಚರಿಸುವಂತೆ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಶಾಸಕರಿಗೆ ಅನೇಕ ಮಂದಿ ಮನವಿಯನ್ನು ಮಾಡಿದ್ದರು. ಈ
ಪುತ್ತೂರು: ಕೋತಿ ಬೆಣ್ಣೆ ತಿಂದು ಬೆಕ್ಕಿನ ಮುಖಕ್ಕೆ ಒರೆಸಿದ ಹಾಗೆ ತಮ್ಮ ಮುಖ ಉಳಿಸಿಕೊಳ್ಳಲು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ಬಿಜೆಪಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿ ಆರ್.ಸಿ ನಾರಾಯಣ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದ್ದಾರೆ. “ಪದ್ಮರಾಜ್ ಪರಿವಾರ” ವಾಟ್ಸ್‌ಆಪ್ ಗ್ರೂಪ್ ವಿವಾದಕ್ಕೆ ಸಂಬಂಧಪಟ್ಟಂತೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮಲ ರಾಮಚಂದ್ರ ಮಾತನಾಡಿ ನಾನು
ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವಕ್ಕೆ ಇಂದು ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು. ವೃಷಭ ಲಗ್ನ ಮುಹೂರ್ತದಲ್ಲಿ ಭಕ್ತಾಧಿಗಳ ಜಯಘೋಷದೊಂದಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ವಿಎಸ್ ಭಟ್ ಹಾಗೂ ವಸಂತ ಕೆದಿಲಾಯ ಧ್ವಜಾರೋಹಣ ನೆರವೇರಿಸಿದ್ರು. ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ, ವ್ಯವಸ್ಥಾಪನ ಸಮಿತಿಯ ಅಧಯಕ್ಷರು ಸದಸ್ಯರು ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.
ಕೆದಂಬಾಡಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕೆದಂಬಾಡಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. ಶಾಸಕರಾದ ಅಶೋಕ್ ರೈ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಮುಖಂಡರಾದ ಮುರಳೀಧರ್ ರೈ, ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ್ ರೈ ಮೊದಲಾದವರು ಇದ್ದರು.




























