ಕೋಡಿಂಬಾಡಿಯ ಮತದಾನ ಕೇಂದ್ರದಲ್ಲಿ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ಮತ ಚಲಾವಣೆ.
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಮತಯಾಚನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುತ್ತೂರಿಗೆ ಹೆಲಿಕಾಪ್ಟರ್ ಮೂಲಕ ನಗರದ ಹೊರವಲಯದ ಮೊಟ್ಟೆತ್ತಡ್ಕ ಹೆಲಿಪ್ಯಾಡ್‌ಗೆ ಆಗಮಿಸಿದ್ದಾರೆ. ಅಲ್ಲಿಂದ ವಾಹನದ ಮೂಲಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ಅಂಚೆ ಕಚೇರಿ ಬಳಿಯಿಂದ ಕೋರ್ಟ್ ರಸ್ತೆಯಾಗಿ ಸಾಗಿ ಕಿಲ್ಲೆ ಮೈದಾನದ ತನಕ ಜಾಥಾ ನಡೆಯಲಿದೆ.
ಪುತ್ತೂರು: ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾರವರು ಇಂದು ಉಪ್ಪಿನಂಗಡಿ ಪೇಟೆ, ಶಾಂತಿನಗರ,ಸತ್ತಿಕಲ್ಲು, ಪೆರ್ನೆ, ಹಿರೇಬಂಡಾಡಿ, ಅಡೆಕಲ್, ಪೆರಿಯಡ್ಕದಲ್ಲಿ ಸಾರ್ವಜನಿಕ ಭಾಷಣ ನಡೆಸಿ ಭರ್ಜರಿ ಮತ ಪ್ರಚಾರ ನಡೆಸಿದರು. ಪುತ್ತೂರು ತಾಲೂಕಿನಲ್ಲಿ ಉಪ್ಪಿನಂಗಡಿ ಪಟ್ಟಣವು ಅತೀ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ಅಂತೆಯೇ ವ್ಯಾಪಾರ ವ್ಯವಹಾರದಲ್ಲಿ ಕೇಂದ್ರ ಬಿಂದು ಆಗಿರುವ ಪಟ್ಟಣ ಆದರೆ ಇಲ್ಲಿಗೆ ಯಾವುದೇ ಮೂಲಭೂತ ಸೌಕರ್ಯಗಳು ತಲುಪಿಲ್ಲ ಮುಖ್ಯ ಬಸ್ ನಿಲ್ದಾಣದಲ್ಲಿ ಒಂದು
ಪುತ್ತೂರು: ಚುನಾವಣೆಗೆ ಸ್ಪರ್ದಿಸುತ್ತಿದ್ದೇನೆ ವೋಟು ಸಿಗಬೇಕು ಎಂದು ಜನತೆಗೆ ಸುಳ್ಳು ಭರವಸೆಯನ್ನು ಕೊಡುವುದಿಲ್ಲ ಮತ್ತು ಮಾತು ಕೊಟ್ಟಿದ್ದರೆ ಅದಕ್ಕೆ ತಪ್ಪಿ ನಡೆಯಲಾರೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರು ಹೇಳಿದರು. ಮಾಣಿಲ ಗ್ರಾಮದ ವಿವಿಧ ದಲಿತ ಕಾಲೊನಿಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಕಾಲನಿಯ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಅಶೋಕ್ ರೈ ಬಳಿ ಹೇಳಿಕೊಂಡರು. ಕಳೆದ ಹಲವು ವರ್ಷಗಳಿಂದ ನಾವು ಮನೆ ಮಾಡಿಕೊಂಡಿದ್ದು
ಪುತ್ತೂರಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರಿಂದ ನನ್ನ ಬೂತ್, ನಾನು ಅಭ್ಯರ್ಥಿ.. ಒಂದು ವಿಭಿನ್ನ ಪ್ರಯೋಗ ನಡೆಯಲಿದ್ದು, ಪುತ್ತೂರಿನ ವಿಧಾನಸಭಾ ಕ್ಷೇತ್ರzಗಳಿಗೆ ಕಾಂಗ್ರೆಸ್ ನಾಯಕರಿಂದ ಮತ್ತು ಕಾರ್ಯಕರ್ತರಿಂದ ಎಲ್ಲಾ 220 ಬೂತ್ ಗಳಲ್ಲಿಯೂ ಮನೆ ಮನೆಗಳ ಸಂಪರ್ಕಿಸುವ ಮೂಲಕ ಮತಯಾಚನೆ ನಡೆಯಲಿದೆ.
ಪುತ್ತೂರು: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ಮಾಡಿರುವ ವಿರುದ್ದ ವಿಶ್ವ ಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‍ವೆಲ್ ಕಿಡಿ ಕಾರಿದ್ದಾರೆ. ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. 2023ರ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ವಿಶ್ವಹಿಂದೂ ಪರಿಷತ್ತಿನ ಯುವ ವಿಭಾಗ ರಾಷ್ಟ್ರಭಕ್ತ ಬಜರಂಗದಳ ಸಂಘಟನೆಯನ್ನು ನಿಷೇಧಿಸಲು ಪ್ರಸ್ತಾವನೆ ಮಾಡಿರುವುದು ರಾಜ್ಯದ ಹಿಂದುಗಳ
ಪುತ್ತೂರು: ನಕ್ಸಲೈಟ್, ಭಯೋತ್ಪಾದನೆ, ಕಮ್ಯುನಿಸ್ಟ್ ಮೆಂಟಾಲಿಟಿ ಇರುವ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ಆರ್ ಎಸ್ ಎಸ್ ಹಿನ್ನಲೆ ಹೊಂದಿರುವ ಹಿಂದೂ ಸಂಘಟನೆ ಭಜರಂಗದಳವನ್ನು ನಿಷೇಧ ಹೇಳಿಕೆ ಜತೆಗೆ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ. ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಹಿಂದೂಗಳನ್ನು ದಮನ ಮಾಡಿ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ಪ್ರಯತ್ನವನ್ನು ಡಿಕೆಶಿ ಮಾಡುತ್ತಿದ್ದಾರೆ.
ಪುತ್ತೂರು: ಪಡಿತರ ವಿತರಣೆಯಲ್ಲಿ ಇದುವರೆಗೆ ಬೆಳ್ತಿಗೆ ಮತ್ತು ಬಿಳಿ ಅಕ್ಕಿಯನ್ನು ನೀಡಲಾಗುತ್ತಿದೆ. ಕರಾವಳಿ ಭಾಗದ ಜನ ಕುಚ್ಚಲಕ್ಕಿ ಅನ್ನ ಊಟ ಮಾಡುವ ಕಾರಣ ಈ ಭಾಗಕ್ಕೆ ರೇಶನ್ ಮೂಲಕ ಕುಚ್ಚಲಕ್ಕಿ ನೀಡಬೇಕು ಎಂಬ ಬೇಡಿಕೆ ಇದ್ದು ಈ ಬೇಡಿಕೆಯನ್ನು ಈಬಾರಿ ಕಾಂಗ್ರೆಸ್ ಈಡೇರಿಸಲಿದೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಭರವಸೆ ನೀಡಿದ್ದಾರೆ. ವಿಟ್ಲ ಕಂಬಳಬೆಟ್ಟುವಿನಲ್ಲಿ ರಾತ್ರಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕರಾವಳಿ ಗೆ ಕುಚ್ಚಲಕ್ಕಿ
ಭಜರಂಗದಳ ನಿಷೇಧ ಬಿಡಿ, ಯಾವ ಒಬ್ಬ ಕಾರ್ಯಕರ್ತನಿಗೆ ತೊಂದರೆಯಾಗಲು ನಾವು ಬಿಡುವುದಿಲ್ಲ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಅರುಣ್ ಕುಮಾರ್ ಪುತ್ತಿಲ ಎಚ್ಚರಿಕೆ.ಪುತ್ತೂರು : ಚುನಾವಣೆಯ ಹೊಸ್ತಿಲಿನಲ್ಲಿಯೇ ಕಾಂಗ್ರೆಸ್ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಪ್ರಣಾಳಿಕೆ ಕೆಲವು ವಿಚಾರವು ಕಿಚ್ಚು ಹಚ್ಚಿದೆ.ಈ ಬಗ್ಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರು ಪ್ರತಿಕ್ರಿಯಿಸಿದ್ದು, `ಕಾಂಗ್ರೆಸ್
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಜಿಲ್ಲೆಯಲ್ಲಿ ಕೋಮುಗಲಭೆಗಳಾಗಿವೆ. ಆದರೆ ಬಿಜೆಪಿ ಆಡಳಿತಾವಧಿಯಲ್ಲಿ ಯಾವುದೇ ಕೋಮು ಗಲಭೆಗಳು ನಡೆಯದೆ ಜನ ನೆಮ್ಮದಿಯಲ್ಲಿದ್ದಾರೆ. ಜನತೆ ಮತ್ತೆ ಕೋಮುಗಲಭೆಯ ಪರಿಸ್ಥಿತಿ ನಿರ್ಮಾಣಕ್ಕೆ ಅವಕಾಶ ನೀಡಬಾರದು. ದ.ಕ.ಜಿಲ್ಲೆಯಲ್ಲಿ ಒಂದು ಸ್ಥಾನವನ್ನೂ ಬಿಟ್ಟು ಕೊಡದಿದ್ದರೆ ಕೋಮುಗಲಭೆ ಆಗಲ್ಲ ಎಂದು ತಮಿಳುನಾಡು ರಾಜ್ಯದ ಬಿಜೆಪಿ ಅಧ್ಯಕ್ಷ, ರಾಜ್ಯದ ಚುನಾವಣಾ ಸಹ ಪ್ರಭಾರಿಯಾಗಿರುವ ಅಣ್ಣಾಮಲೈ ಅವರು ಹೇಳಿದರು. ಮಾಡ್ನೂರು ಗ್ರಾಮದ ಕಾವು-ನನ್ಯದ




























