Home Posts tagged #v4news karnataka (Page 279)

ಉಡುಪಿಯಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ವಿವಿಧ ಸಂಘಟನೆಗಳಿಂದ ಜನಾಂದೋಲನ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆಯೂ ಕೋವಿಡ್ ಸಂಕಷ್ಟ ಕಾಲದಲ್ಲಿ ಜನರಿಗೆ ಪ್ಯಾಕೇಜ್ ಗಳನ್ನು ನೀಡುವಂತೆ ಅಗ್ರಹಿಸಿ ಹಮ್ಮಿಕೊಂಡಿರುವ ಜನಂದೋಲನವು ಇಂದು ಉಡುಪಿ ಶಾಸಕ ರಘುಪತಿ ಭಟ್ ಕಚೇರಿ ಮುಂದುಗಡೆ ನಡೆಸಲಾಯಿತು.ವಿವಿಧ ಸಂಘಟನೆಗಳ ಕಾರ್ಯಕರ್ತರು ಜನಾಂದೋಲನದಲ್ಲಿ ಭಾಗವಹಿಸಿ ಶಾಸಕ ರಘುಪತಿ ಭಟ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ದ ಘೊಷಣೆಗಳನ್ನು ಕೂಗಿದ್ರು.

ಹೆಜಮಾಡಿಯಲ್ಲಿ ಸಮುದ್ರದ ಅಲೆಗೆ ಸಿಲುಕಿ ಮೀನುಗಾರ ಮೃತ್ಯು

ಹೆಜಮಾಡಿಯ ನದಿ ಹಾಗೂ ಸಮುದ್ರ ಒಂದಾಗುವ ಅಳುವೆ ಬಾಗಿಲಿಗೆ ಮೀನುಗಾರಿಕೆಗೆ ತೆರಳಿದ ಮೀನುಗಾರರೋರ್ವರು ಸಮುದ್ರದ ಬೃಹತ್ ಅಲೆಯ ದಾಳಿಗೆ ತುತ್ತಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಮೃತರು ಹೆಜಮಾಡಿ ಕೋಡಿ ಮಾನಂಪಾಡಿ ನಿವಾಸಿ ಜಯಂತ್ (51).ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಹೊಂದಿದ್ದ ಇವರು ಮುಂಜಾನೆ ತೀರ ಮೀನುಗಾರಿಕೆ ನಡೆಸುವುದಕ್ಕಾಗಿ ಅಳವೆ ಪ್ರದೇಶಕ್ಕೆ ತೆರಳಿದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು,

ಜಪ್ಪಿನಮೊಗರು : ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ

ಜಪ್ಪಿನಮೊಗರು ಗ್ರಾಮದ ಕೊಪ್ಪರಿಗುತ್ತು ಎಂಬಲ್ಲಿ ಸಾಕು ದನಗಳನ್ನು ಹೊರಗಡೆ ಕಟ್ಟಿ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿ ತಂದೆಯೇ ತನ್ನ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನುವ ಘಟನೆ ನಡೆದಿದೆ. ಕೊಪ್ಪರಿಗೆಗುತ್ತು ನಿವಾಸಿ ಆರೋಪಿ ವಿಶ್ವನಾಥ ಶೆಟ್ಟಿ (52) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಾಮೀತ್ ಶೆಟ್ಟಿ (25) ಸುಟ್ಟ ಗಾಯಗೊಂದಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಾಕುದನಗಳನ್ನು ಹೊರಗಡೆ ಕಟ್ಟಿಹಾಕಿದ್ದ ಬಗ್ಗೆ

ವಿ4 ಡಿಜಿಟಲ್ ಇನ್ಫೋಟೆಕ್ ಮತ್ತು ಡಿಜಿಟಲ್ನಲ್ಲಿ ಉಚಿತ ಲಸಿಕೆ ವಿತರಣೆ

ಮಂಗಳೂರಿನ ವಿ4 ಡಿಜಿಟಲ್ ಇನ್ಫೋಟೆಕ್ ಮತ್ತು ಡಿಜಿಟಲ್‌ನ ಕೇಬಲ್ ಆಪರೇಟರ್ ಹಾಗೂ ಸಿಬ್ಬಂದಿಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಯೆಯ್ಯಡಿಯಲ್ಲಿರುವ ವಿ4 ಡಿಜಿಟಲ್ ಇನ್ಫೋಟೆಕ್ ಮತ್ತು ಡಿಜಿಟಲ್‌ನಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ವೈದ್ಯಾಧಿಕಾರಿ ಡಾ| ಸುಷ್ಮಾ ಜಾಸ್ಮಿನ್ ಅವರು ಚಾಲನೆ ನೀಡಿದ್ರು. ಇನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ , ಜಿಲ್ಲಾ ಆರೋಗ್ಯ ಇಲಾಖೆ , ಮಂಗಳೂರು ಮಹಾನಗರ ಪಾಲಿಕೆ ಸಹಕಾರದೊಂದಿಗೆ

ಕಾರ್ಕಳದಲ್ಲಿ ಕಾಂಗ್ರೆಸ್‌ನಿಂದ ಜನಾಗ್ರಹ ಆಂದೋಲನ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಕಾಂಗ್ರೆಸ್ ವತಿಯಿಂದ ಕಾರ್ಕಳದಲ್ಲಿ ಪ್ರತಿಭಟನೆ ನಡೆಸಿದರು.  ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಕಚೇರಿಯಿಂದ ಜನಾಗ್ರಹ ಅಂದೋಲನದ ಪ್ರತಿಭಟನೆಯ ರ್‍ಯಾಲಿಯನ್ನು ಶಾಸಕರ ಕಚೇರಿಯ ಬಳಿ ಬರುತ್ತಿದ್ದಂತೆ ಪೊಲೀಸರು ತಡೆ ಹಿಡಿದ ಘಟನೆಯೂ ನಡೆಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ಮಾತನಾಡಿ, ಜನಾಗ್ರಹ ಅಂದೋಲನ ಎಂಬುದು ಹಿಂದೆಂದೂ ಕಾಣದಂಥ

Defeat Covid : Tips at your fingertips

By:  Subrat Saraf, Assistant professor, college o–f Hotel Management and Tourism During the past 12-15 months, the world has been experiencing a very tough time in view of the pandemic owing to the outbreak of Covid-19 disease. The disease has claimed the lives of many of our beloved ones while many have succeeded in the […]

ಕಾಪುವಿನಲ್ಲಿ ಕಾಂಗ್ರೆಸ್, ಜೆಡಿಎಸ್, ದಲಿತ ಸಂಘಟನೆಗಳಿಂದ ಜನಾಗ್ರಹ ಆಂದೋಲನ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಕಾಂಗ್ರೆಸ್, ಜೆಡಿಎಸ್, ದಲಿತ ಸಂಘಟನೆಗಳಿಂದ ಜನಾಗ್ರಹ ಆಂದೋಲನ ಕಾಪುವಿನಲ್ಲಿ ನಡೆಯಿತು. ಕಾಪುವಿನಲ್ಲಿ ಶಾಸಕ ಲಾಲಾಜಿ ಮೆಂಡನ್ ಕಛೇರಿಗೆ ಮುತ್ತಿಗೆ ಹಾಕಿ ರಾಜ್ಯ, ಕೇಂದ್ರ ಸರ್ಕಾರಗಳ ಹಾಗೂ ಕಾಪು ಶಾಸಕರ ವಿರುದ್ಧ ಘೋಷಣೆಯನ್ನು ಕೂಗುವ ಮೂಲಕ ಪ್ರತಿಭಟಿಸಿದ್ದಾರೆ. ನೂರಾರು ಕಾರ್ಯಕರ್ತರು ಕಾಪು ರಾಜೀವ ಭವನದಿಂದ ಜಾಥದ ಮೂಲಕ ಶಾಸಕರ ಕಛೇರಿಯ ಮುಂಭಾಗದಲ್ಲಿ ಸಾಮಾಜಿಕ ಅಂತರದಲ್ಲಿ ನಿಂತು ಪ್ರತಿಭಟನೆಗೆ ಸಾತ್

ದ.ಕ. ಜಿಲ್ಲೆಯಲ್ಲಿ ಮಧ್ಯಾಹ್ನ 2ರ ವರೆಗೆ ಎಲ್ಲಾ ಅಂಗಡಿ ತೆರೆಯಲು ಅವಕಾಶ: ಸಚಿವ ಕೋಟ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 23ರಿಂದ ಬೆಳಗ್ಗೆಯಿಂದ ಮಧ್ಯಾಹ್ನ 2ರವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಸಚಿವರು, ಜೂನ್ 23ರಿಂದ ಜವಳಿ, ಝೆರಾಕ್ಸ್ , ಚಪ್ಪಲಿ ಸೇರಿದಂತೆ ಇತರ ವ್ಯಾಪಾರಸ್ಥರು ಬದುಕು ಕಟ್ಟಿಕೊಳ್ಳಲು ಕಷ್ಟ ಎಂಬ ದೂರಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ ಕಾರಣ ನಾಳೆಯಿಂದ ಬೆಳಗ್ಗೆಯಿಂದ

ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ನಿಂದ ಕೂಳೂರು-ಕುಳಾಯಿ ಪ್ರದೇಶದ ನಿರ್ಗತಿಕರಿಗೆ ಉಪಹಾರ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಹುಟ್ಟು ಹಬ್ಬದ ಪ್ರಯುಕ್ತ ಕುಳೂರು-ಕುಳಾಯಿ ಪ್ರದೇಶದ ನಿರ್ಗತಿಕರಿಗೆ ಊಟವನ್ನು ನೀಡುವುದರೊಂದಿಗೆಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆರ್ಥಪೂರ್ಣವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಅನೇಕರ ಹಸಿವು ನೀಗಿಸುವ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದೇವೆ. ಇಂದು ರಾಹುಲ್ ಗಾಂಧಿಯವರ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷವಾಗಿ ಬಡ ಬಗ್ಗರ

ಕುಸಿದು ಬಿದ್ದ ಮಠದಬೆಟ್ಟು ಕಾಲು ಸೇತುವೆ: ಸಂಪರ್ಕ ಕಡಿತ

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಇಂದ್ರಾಣಿ‌ ಹೊಳೆ ತುಂಬಿ ಹರಿಯುತ್ತಿದ್ದು‌,ಇದರಿಂದಾಗಿ ಶಿಥಿಲಗೊಂಡಿದ್ದ ಕಾಲು ಸೇತುವೆ ಒಂದು ಭಾಗ ಕುಸಿದು ಬಿದ್ದು ಸಂಪರ್ಕ ಕಡಿತಗೊಂಡಿದೆ. ಮಠದ ಬೆಟ್ಟು ,ಕೊಪ್ಪರ ತೋಟಕ್ಕೆ ಸಂಪರ್ಕಿಸುವ ಕಾಲು ಸಂಕವಾಗಿದ್ದು,ಹಲವು ಸಮಯಗಳಿಂದ‌ ಶಿಥಿಲವಸ್ಥೆಗೊಂಡಿತ್ತು.ಶನಿವಾರ ಮಧ್ಯಾಹ್ನ ಕಾಲು ಸೇತುವೆ ಯ ಒಂದು ಭಾಗ ಕುಸಿದು ಬಿದ್ದಿದ್ದು,ಸ್ಥಳೀಯ ಯುವಕರು ತಾತ್ಕಲಿಕವಾಗಿ ಮರದ ದಿಮ್ಮಿಗಳನ್ನು ಹಾಕಿ ಸರಿಪಡಿಸಲು ಹರಸಹಾಸ