ನೆಲ್ಯಾಡಿ: ಅರಣ್ಯ ಇಲಾಖೆ ವತಿಯಿಂದ ಚಿಣ್ಣರ ವನ್ಯ ದರ್ಶನಕ್ಕೆ ಕಳೆಂಜ ಗ್ರಾಮದ ಮರಕ್ಕಡ ಪ್ರೌಢ ಶಾಲೆಯಿಂದ ವಿದ್ಯಾರ್ಥಿಗಳು ಕುದುರೆಮುಖ, ಶೃಂಗೇರಿ, ಹೊರನಾಡು, ಇತರ ಪರಿಸರಗಳಿಗೆ ಅಧ್ಯಯನ ಪ್ರವಾಸ ಕೈಗೊಂಡರು. ಪ್ರಯಾಣಕ್ಕೆ ಕಳೆಂಜ ಅರಣ್ಯ ಸಮಿತಿ ಅಧ್ಯಕ್ಷ ಧನಂಜಯ ಗೌಡ ಹಸಿರು ನಿಶಾನೆ ತೋರಿಸಿ ಶುಭಕೋರಿದರು. ಈ ಸಂದರ್ಭದಲ್ಲಿ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ
ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿಯ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಾಮಗಾರಿಗಳಿಗೆ ಪರಿಶೀಲನೆ ನಡೆಸಿದರು. ಮಂಗಳೂರಿನ ನಗರದ ಪಂಪ್‍ವೆಲ್ ರಸ್ತೆ ಅಗಲೀಕರಣ ಮತ್ತು ಚರಂಡಿ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು. ನಂತರ ಸ್ಮಾರ್ಟ್ ಸಿಟಿಯಡಿಯಲ್ಲಿ ವೆನ್ಲಾಕ್ ಆಸ್ಪತ್ರೆಯ ಸರ್ಜಿಕಲ್ ಬ್ಲಾಕ್ ವೀಕ್ಷಣೆಯನ್ನು ಮಾಡಿದರು. ಬೋಳಾರದಲ್ಲಿ ನಿರ್ಮಾಣವಾದ ಈಜುಕೊಳ ಕಾಮಗಾರಿ ಪರಿಶೀಲನೆ ನಡೆಸಿದರು.
ಬಂಟ್ವಾಳ: ಬಿ.ಸಿ.ರೋಡಿನ ಉಪನೋಂದಾವಣೆ ಕಚೇರಿ ತಾಲೂಕು ಆಡಳಿತ ಸೌಧಕ್ಕೆ ಸ್ಥಳಾಂತರಗೊಂಡ ಬಳಿಕ ನ್ಯಾಯಾಲಯ ರಸ್ತೆಯಲ್ಲಿರುವ ಹಳೆ ಕಟ್ಟಡ ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಂತಿದೆ. ಕಟ್ಟಡದ ಸುತ್ತ ಪೆÇದೆಗಳು ಬೆಳೆದು ವಿಷ ಜಂತುಗಳ ಆವಸ ಸ್ಥಾನವಾಗಿದೆ. ಸಾರ್ವಜನಿಕರಿಗೆ, ಭಿಕ್ಷಕರಿಗೆ ಉಚಿತವಾಗಿ ಮಲಮೂತ್ರ ವಿಸರ್ಜನೆ ಮಾಡುವ ಸ್ಥಳವಾಗಿ ಮಾರ್ಪಟ್ಟಿದ್ದು, ನಗರ ಮಧ್ಯೆ ರೋಗವಾಹಕಗಳು ಸಂತಾನಾಭಿವೃದ್ದಿ ಮಾಡುವ ಸ್ಥಳವಾಗಿ ಪರಿವರ್ತನೆಗೊಂಡಿದೆ.
ಮಂಜೇಶ್ವರದ ಕುನ್ನಿಲ್ ನೋಬಲ್ ಫೌಂಡೇಶನ್‍ನ 5ನೇ ವಾರ್ಷಿಕೋತ್ಸವದ ಪ್ರಯುಕ್ತ ಡ್ರಗ್ಸ್ ಜಾಗೃತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಉದ್ಯಾವರ ಗುಡ್ಡೆ ಸರಕಾರಿ ಶಾಲೆಯಲ್ಲಿ ಸಂಘಟನೆಯ ಅಧ್ಯಕ್ಷ ಝಕರಿಯ್ಯ ಶಾಲಿಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ರಾಜೇಶ್ ತೆರುವತ್ತ್ ಪೀಡಿಗಯಿಲ್ ಉದ್ಘಾಟಿಸಿದರು. ಮಂಜೇಶ್ವರ ಠಾಣೆಯ ಜನ ಮೈತ್ರಿ ಪೊಲೀಸ್ ಅಧಿಕಾರಿಗಳಾದ ಮಧು ಕರಕಡವತ್ ಹಾಗೂ ಅನೂಪ್
ಮಂಗಳೂರು : `ಬೆಂಗಳೂರಿನ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ 42 ಕೋಟಿ ರೂ. ಕಮಿಷನ್ ಹಣ ಎಂಬ ಮಾಹಿತಿ ಇದೆ. ರಾಜ್ಯದಲ್ಲಿ ಇವತ್ತು ಎಟಿಎಂ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು. ಅವರು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, `ಬೆಂಗಳೂರಿನಲ್ಲಿ ಅಂಬಿಕಾಪತಿ ಎಂಬ ಗುತ್ತಿಗೆದಾರನ ಮನೆಗೆ ಐಟಿ ದಾಳಿ ಆಗಿದೆ. ಕೆಲ ದಿನಗಳ ಹಿಂದೆ 600 ಕೋಟಿ ರೂ.ಬಾಕಿ ಹಣ ಸರ್ಕಾರ ಬಿಡುಗಡೆ
ನೆಲ್ಯಾಡಿ: ಕೊಣಾಲು ದಿಯುವಾಂಜಲಿಸ್ಟಿಕ್ ಅಸೋಸಿಯೇಷನ್ ಆಫ್ ದ ಈಸ್ಟ್ ಇದರ ಅದೀನದಲ್ಲಿರುವ ಸಂತ ತೋಮಸ್ ಯಾಕೋಬಾಯ ಸುರಿಯಾನಿ ಚರ್ಚಿನಲ್ಲಿ ತಾಯಂದಿರಿಗೋಸ್ಕರ ಕೊಯಿನೋನಿಯಾ ಮದರ್ಸ್ ಡಿವೋಷನಲ್ ಫೆಲೋಶಿಪ್ ಕಾರ್ಯಕ್ರಮ ಮರ್ತ ಮರಿಯಾಮ್ ಮಹಿಳಾ ಸಮಾಜದ ನಿರ್ದೇಶಕರಾಗಿರುವ ವೆರಿ.ರೇ. ಪಿ.ಕೆ ಅಬ್ರಹಾಂ ಕೋರ್ ಎಪಿಸ್ಕೋಪೋ ಅವರ ನಿರ್ದೇಶನದಲ್ಲಿ ಏರ್ಪಡಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ತೋಮೊಸರ ದೇವಾಲಯದ ವಿಕಾರ್ ಆಗಿರುವ ರೇ.ಫಾ.ಅನೀಶ್ ಪಾರಾಶೆರಿಲ್
ಉತ್ಕೃಷ್ಟ ಗುಣಮಟ್ಟದ ಕಾಮಗಾರಿ, ವಿಶಾಲ ಹಸಿರು ವಲಯ, ಸಮರ್ಪಕ ವಾಹನ ನಿಲುಗಡೆ ವ್ಯವಸ್ಥೆಯ ಜೊತೆಗೆ ಸುಸಜ್ಜಿತ ಸನ್‍ಶೈನ್ ಸ್ಯಾಪ್ಲಿಂಗ್ ವಸತಿ ಮತ್ತು ವಾಣಿಜ್ಯ ಸಂಕೀರ್ಣದ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಅಕ್ಟೋಬರ್ 15 ರಿಂದ 24ರ ಸೀಮಿತ ಅವಧಿಗೆ ಆದ್ಯತೆಯ ಮೇರೆಗೆ ಅಪಾರ್ಟ್‍ಮೆಂಟ್ ಖರೀದಿಯ ಮೇಲೆ 10% ವಿಶೇಷ ಹಬ್ಬದ ರಿಯಾಯತಿಯನ್ನು ಘೋಷಿಸಲಾಗಿದೆ ಎಂದು ಸನ್‍ಶೈನ್ ಮಲ್ಟಿವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಮಾಹಿತಿ ನೀಡಿದೆ.
ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಎನ್.ಎಚ್. 75ರ ಲಾವತ್ತಡ್ಕ ಎಂಬಲ್ಲಿ ಅಕ್ರಮವಾಗಿ ಅಕೇಶಿಯಾ ಉರುವಲು ಸಾಗಾಟ ಮಾಡುತ್ತಿದ್ದ ಕೆಎ21 ಬಿ 3478 ಸಂಖ್ಯೆಯ ಲಾರಿಯನ್ನು ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ ರವರ ಮಾರ್ಗದರ್ಶನದಲ್ಲಿ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಕೊಕ್ಕಡ ಸಾಹುಲ್ ಹಮೀದ್ ಪರಾರಿಯಾಗಿದ್ದಾನೆ. ರೆಖ್ಯ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ತದಲಗಿ, ಬೀಟ್ ಫಾರೆಸ್ಟರ್‌ಗಳಾದ ನಿಂಗಪ್ಪ ಅವರಿ, ಸುನೀಲ್ ನಾಯ್ಕ್ ಕಾರ್ಯಾಚರಣೆಯಲ್ಲಿದ್ದರು.
ಮಂಗಳೂರು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳೂರು ನಗರದ ಎಲ್ಲಾ ಪೆÇಲೀಸ್ ಠಾಣೆಗಳ ವ್ಯಾಪ್ತಿಯ ಸಕ್ರೀಯ ರೌಡಿಗಳ ಪರೇಡ್ ನಡೆಸಲಾಯಿತು. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರ ನೇತೃತ್ವದಲ್ಲಿ ನಡೆದ ಪರೇಡ್‍ನಲ್ಲಿ 262 ಸಕ್ರೀಯ ರೌಡಿಗಳನ್ನು ಸಂಬಂಧಪಟ್ಟ ಎಸಿಪಿರವರು ಪೆÇಲೀಸ್ ಆಯುಕ್ತರ ಮುಂದೆ ಹಾಜರುಪಡಿಸಿದರು. ಎಲ್ಲಾ ರೌಡಿಗಳಿಗೆ ತಮ್ಮ ಅಪರಾಧಿಕ ಚಟುವಟಿಕೆಗಳನ್ನು ಬಿಟ್ಟು ಕಾನೂನನ್ನು ಗೌರವಿಸುವ ಪ್ರಜೆಗಳಾಗಬೇಕೆಂದು ಪೆÇಲೀಸ್
ಮೂಡುಬಿದಿರೆ: ವಿವಿಧ ಇಲಾಖೆಗಳ ಅಧಿಕಾರಿಗಳಿಲ್ಲದೆ ಗ್ರಾಮಸಭೆ ನಡೆಸಬಾರದೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಗ್ರಾಮಸಭೆಯನ್ನು ರದ್ದುಗೊಳಿಸಿದ ಘಟನೆ ಇರುವೈಲಿನಲ್ಲಿ ನಡೆದಿದೆ. ಇರುವೈಲು ಗ್ರಾ.ಪಂನ ಎರಡನೇ ಸುತ್ತಿನ ಗ್ರಾಮಸಭೆಯು ಪಂಚಾಯತ್ ಅಧ್ಯಕ್ಷೆ ಲಲಿತಾ ಮೊಗೇರ ಅವರ ಅಧ್ಯಕ್ಷತೆಯಲ್ಲಿ ತೋಡಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ, ಅರಣ್ಯ ಇಲಾಖೆಯ




























