ಬಂಟ್ವಾಳ: ವಿಷ ಜಂತುಗಳ ಆವಾಸ ಸ್ಥಾನವಾಗಿರುವ ಬಿ.ಸಿ ರೋಡ್‍ನಲ್ಲಿದ್ದ ಹಳೆಯ ಉಪನೋಂದಾವಣೆ ಕಚೇರಿ

ಬಂಟ್ವಾಳ: ಬಿ.ಸಿ.ರೋಡಿನ ಉಪನೋಂದಾವಣೆ ಕಚೇರಿ ತಾಲೂಕು ಆಡಳಿತ ಸೌಧಕ್ಕೆ ಸ್ಥಳಾಂತರಗೊಂಡ ಬಳಿಕ ನ್ಯಾಯಾಲಯ ರಸ್ತೆಯಲ್ಲಿರುವ ಹಳೆ ಕಟ್ಟಡ ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಂತಿದೆ. ಕಟ್ಟಡದ ಸುತ್ತ ಪೆÇದೆಗಳು ಬೆಳೆದು ವಿಷ ಜಂತುಗಳ ಆವಸ ಸ್ಥಾನವಾಗಿದೆ. ಸಾರ್ವಜನಿಕರಿಗೆ, ಭಿಕ್ಷಕರಿಗೆ ಉಚಿತವಾಗಿ ಮಲಮೂತ್ರ ವಿಸರ್ಜನೆ ಮಾಡುವ ಸ್ಥಳವಾಗಿ ಮಾರ್ಪಟ್ಟಿದ್ದು, ನಗರ ಮಧ್ಯೆ ರೋಗವಾಹಕಗಳು ಸಂತಾನಾಭಿವೃದ್ದಿ ಮಾಡುವ ಸ್ಥಳವಾಗಿ ಪರಿವರ್ತನೆಗೊಂಡಿದೆ.

ಸ್ವಾತಂತ್ರ್ಯಪೂರ್ವದಲ್ಲಿ ನಿರ್ಮಾಣಗೊಂಡು ಈಗಲೂ ಗಟ್ಟಿಮುಟ್ಟಾಗಿರುವ ಬಂಟ್ವಾಳ ತಾಲೂಕಿನ ಸಬ್ ರಿಜಿಸ್ಟ್ರರ್ ಕಚೇರಿಯ ಹಳೆ ಕಟ್ಟಡ ಹಿಂದೆ ನಿತ್ಯ ಜನಸಂದಣಿ ಇದ್ದ ಜಾಗ. ಜಮೀನು, ಮದುವೆ ಮತ್ತಿತರ ನೋಂದಾವಣಿಗಾಗಿ ಜನ ಬೆಳಗ್ಗಿನಿಂದ ಸಂಜೆಯವರೆಗೂ ಇಲ್ಲಿಗೆ ಭೇಟಿ ನೀಡುತ್ತಿದರು. ಈ ಕಟ್ಟಡದಿಂದ ಮಿನಿ ವಿಧಾನ ಸೌಧಕ್ಕೆ ಉಪನೋಂದಣಿ ಕಚೇರಿ ಸ್ಥಳಾಂತರಗೊಂಡ ಬಳಿಕ ಈ ಕಟ್ಟಡವನ್ನು ಯಾರು ಕೇಳುವವರಿಲ್ಲದಂತಾಗಿದೆ.

ನಿರ್ವಹಣೆ ಇಲ್ಲದೆ ನಗರ ಮಧ್ಯ ಇರುವ ಕಟ್ಟಡ ಅನಾಥ ಸ್ಥಿತಿಯಲ್ಲಿದೆ. ಕಟ್ಟಡದ ಆಸುಪಾಸಿನಲ್ಲಿ ದೊಡ್ಡ ಮರಗಳು ಬೆಳೆದು ನಿಂತು ಮಿನಿ ಕಾಡು ನಿರ್ಮಾಣಗೊಂಡಿದೆ. ಆವರಣದೊಳಗೆ ಪೊದಗಳು ತುಂಬಿಕೊಂಡು ಮುಂಗುಸಿ, ಉಡ, ಹಾವು ಮೊದಲಾದ ಜಂತುಗಳು ಓಡಾಡಿಕೊಂಡಿರುತ್ತವೆ. ಬಿ.ಸಿ.ರೋಡಿಗೆ ಬರುವ ಸಾರ್ವಜನಿಕರಿಗೆ ಉಚಿತವಾಗಿ ಮಲ-ಮೂತ್ರ ವಿಸರ್ಜಿಸಲು ಸ್ಥಳವಕಾಶ ಮಾಡಿಕೊಟ್ಟಂತಿದ್ದು ದುರ್ವಾಸನೆಯಿಂದ ಒಳ ಪ್ರವೇಶಿಸಿಲು ಸಾಧ್ಯವಿಲ್ಲ. ಬಿಯರ್, ಮದ್ಯದ ಬಾಟಲು, ಕಾಂಡಮ್ ಕಚೇರಿ ಆವರಣದೊಳಗೆ ಕಂಡು ಬಂದಿದ್ದು ರಾತ್ರಿ ವೇಳೆ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎನ್ನುವುದಕ್ಕೆ ಸಾಕ್ಷಿ ನೀಡುತ್ತದೆ. ಜನರೇಟರ್ ಇಡಲು ನಿರ್ಮಿಸಿದ ಶೆಡ್‍ನಲ್ಲಿ ಹಳೆ ಬಟ್ಟೆ ಬರೆಗಳು ತುಂಬಿಕೊಂಡಿದೆ. ಈ ಶೆಡ್ ನಿರಾಶ್ರಿತರ ಸೂರಾಗಿದೆ. ಹಗಲಿನಲ್ಲಿಯೇ ಸೊಳ್ಳೆಗಳು ಗುಂಯ್‍ಗುಟ್ಟುತ್ತಿದ್ದು ಡೆಂಘೆ, ಮಲೇರಿಯಾದಂತ ಮಾರಣಾಂತಿಕ ರೋಗ ಹರಡಲು ಈ ಸ್ಥಳ ಪ್ರಶಸ್ತವಾಗಿದೆ. ಇದರ ಪಕ್ಕದಲ್ಲಿ ತಾತ್ಕಲಿಕವಾಗಿ ನಿರ್ಮಾಣಗೊಂಡ ತಾಲೂಕು ಕಚೇರಿ ಕಟ್ಟಡವೂ ಉಪಯೋಗಕ್ಕಿಲ್ಲದೆ ಅನಾಥವಾಗಿದೆ. ನಗರದ ಮಧ್ಯೆ ಕೊಳಚೆ ತುಂಬಿ ಕೊಂಡು ಈ ಪ್ರದೇಶ ಉಪಯೋಗಿಲ್ಲದೆ ವ್ಯರ್ಥವಾಗುತ್ತಿದೆ.

ಸಬ್ ರಿಜಿಸ್ಟ್ರರ್ಡ್ ಹಳೆ ಕಚೇರಿ ಸ್ವಾತಂತ್ರ್ಯಪೂರ್ವದಲ್ಲಿ ನಿರ್ಮಾಣಗೊಂಡಿದ್ದರೂ ಕೂಡ ಈಗಲೂ ಗಟ್ಟಿಮುಟ್ಟಾಗಿದ್ದು ಸೂಕ್ತ ನಿರ್ವಹಣೆ ಇದ್ದಲ್ಲಿ ಇನ್ನೂ ಹಲವು ವರ್ಷಗಳ ಕಾಲ ಬಾಳಿಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಪೆÇಲೀಸ್ ಇಲಾಖೆ ಸಹಿತ ಕೆಲವೊಂದು ಸಂಘಟನೆಗಳು ಕಟ್ಟಡ ವ್ಯರ್ಥವಾಗುವ ಬದಲು ತಾತ್ಕಲಿಕ ಬಳಕೆಗೆ ತಮಗೆ ನೀಡುವಂತೆ ಕೇಳಿಕೊಂಡರೂ ಯಾರಿಗೂ ನೀಡುತ್ತಿಲ್ಲ. ಅದರ ನಿರ್ವಹಣೆಯನ್ನೂ ಮಾಡುತ್ತಿಲ್ಲ. ಇದರಿಂದಾಗಿ ನಗರ ಮಧ್ಯೆ ಸುಸಜ್ಜಿತ ಕಟ್ಟಡವೊಂದು ಪಾಳು ಬೀಳುತ್ತಿದೆ. ದುರ್ವಾಸನೆ ಬೀರುತ್ತ ಅಕ್ರಮಗಳ ಅಡ್ಡೆಯಾಗಿ ಮಾರ್ಪಾಡಾಗುತ್ತಿದೆ.

Related Posts

Leave a Reply

Your email address will not be published.