Home Posts tagged V4News (Page 386)

ಮಂಗಳೂರು || ನಾಗುರಿಯಲ್ಲಿ ಗ್ಯಾರೇಜ್ ಕೆಫೆ ಉದ್ಘಾಟನೆ

ಗ್ಯಾರೇಜ್, ಕೆಫೆ, ಮತ್ತು ಆಟೋ ಪಾರ್ಟ್ಸ್ ಈ ಮೂರನ್ನೂ ಒಳಗೊಂಡ ಗ್ಯಾರೇಜ್ ಕೆಫೆ ಮಂಗಳೂರಿನ ನಾಗುರಿಯಲ್ಲಿ ಉದ್ಘಾಟನೆಗೊಂಡಿತು.ಎಲ್ಲವೂ ಒಂದೇ ಸೂರಿನಡಿಯಲ್ಲಿರುವ ಈ ನೂತನ ಸಂಸ್ಥೆಯನ್ನು ಅತಿಥಿಗಳು ಉದ್ಘಾಟಿಸಿದರು. ಉದ್ಘಾಟನಾ ಸಂದರ್ಭದಲ್ಲಿ ಹುಲಿನಲಿಕೆ ಆಕರ್ಷಣೀಯವಾಗಿತ್ತು. ನಾಗುರಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಮೋಟೋ ಕ್ಲೌನ್ಝ್, ಸ್ಲೈಸ್ ಆಫ್

ಧರ್ಮಸ್ಥಳ: ನೇತ್ರಾವತಿ ನದಿಯ ಅಂಬ್ಯ ದಡದಲ್ಲಿ ವ್ಯಕ್ತಿಯ ಶವ ಪತ್ತೆ

ಧರ್ಮಸ್ಥಳದ ನೇತ್ರಾವತಿ ನದಿಯ ತೀರದಲ್ಲಿ ಅನಾಥ ಶವ ಪತ್ತೆಯಾದ ಘಟನೆ ನಡೆದಿದೆ. ಸ್ಥಳೀಯ ವ್ಯಕ್ತಿಯೊಬ್ಬರು ನದಿಯಲ್ಲಿ ಮೃತದೇಹ ಕಂಡು ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಸದಸ್ಯರಿಗೆ ಮಾಹಿತಿಯನ್ನು ನೀಡಿದ್ದರು. ಸ್ಥಳಕ್ಕೆ ಬಂದ ತಂಡದವರು ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಮಾಹಿತಿಯನ್ನು ನೀಡಿದರು. ಧರ್ಮಸ್ಥಳ, ಬೆಳಾಲು, ಉಜಿರೆಯ ವಿಪತ್ತು ತಂಡದ ಸದಸ್ಯರು ಶವವನ್ನು ಮೇಲಕ್ಕೆತ್ತಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಿದರು. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲ್ಯಾಡಿ: ಬೈಕ್ ಮತ್ತು ಕಾರುಗಳ ಮಧ್ಯೆ ಅಪಘಾತ – ಗಂಭೀರ ಗಾಯಗೊಂಡ ಬೈಕ್ ಸವಾರ ತಾ.ಪಂ ಮಾಜಿ ಸದಸ್ಯ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಮಧ್ಯೆ ನೆಲ್ಯಾಡಿ ಎಚ್‍ಪಿ ಪೆಟ್ರೋಲ್ ಬಂಕ್ ನ ಬಳಿ ಆಲ್ಟೊ ಕಾರು ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ತಾಲೂಕು ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮೀನಾರಾಯಣ ಎಂದು ಗುರುತಿಸಲಾಗಿದ್ದು, ಅಪಘಾತದಲ್ಲಿ ಕಾಲಿಗೆ ತೀವ್ರವಾದ ಗಾಯವಾಗಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ನೆಲ್ಯಾಡಿಯಿಂದ ಮಂಗಳೂರಿಗೆ ತೆರಳುತ್ತಿರುವ ಆಲ್ಟೊ ಕಾರು ಹಾಗೂ ಪೆಟ್ರೋಲ್ ಬಂಕ್ ನಿಂದ ಪೆಟ್ರೋಲ್ ಅನ್ನು

ವಿಟ್ಲ: ಯುವ ಪೀಳಿಗೆಯಲ್ಲಿ ಸಂಸ್ಕಾರವನ್ನು ತುಂಬುವ ಕಾರ್ಯವಾಗಬೇಕು- ಅವಧೂತ ಶ್ರೀವಿನಯ ಗುರೂಜಿ

ವಿಟ್ಲ: ಸಂಸ್ಕಾರ, ಸಂಸ್ಕೃತಿ ಹಳ್ಳಿಯಲ್ಲಿ ದೃಢವಾಗಿದ್ದು, ಗ್ರಾಮೀಣ ಭಾಗದಲ್ಲಿ ಇದು ವ್ಯತ್ಯಾಸವಾಗದಂತೆ ತಡೆಯುವ ಕಾರ್ಯವಾಗಬೇಕು. ಹಳ್ಳಿಯಲ್ಲಿ ಸಂಸ್ಕಾರದಲ್ಲಿ ವ್ಯತ್ಯಾಸವಾದ ಭಾರತ ಹಾಳಾಗುತ್ತದೆ. ಭಾವನೆಯಿಂದ ಕೂಡಿದ ರಥ ಭಾರತವಾಗಿದ್ದು, ಸನಾತನ ಧರ್ಮದ ರಕ್ಷಣೆಯ ಭಾವವನ್ನು ಎಲ್ಲರೂ ಹೊಂದಿದ್ದಾರೆ. ಹಬ್ಬಗಳ ಆಚರಣೆಯಿಂದ ಸಂಘಟನೆ ಬಲವಾಗುತ್ತದೆ ಎಂದು ಗೌರಿಗದ್ದೆ ಸ್ವರ್ಣ ಪೀಠಿಕಾವುರದ ಅವಧೂತ ಶ್ರೀ ವಿನಯ ಗುರೂಜಿ ಹೇಳಿದರು. ಅವರು ಮಾಣಿಲ ಶ್ರೀಧಾಮ ಶ್ರೀ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ, ಪೂಜೆ ಸಲ್ಲಿಕೆ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪೂರ ಅವರು ಭೇಟಿ ನೀಡಿದರು. ಶ್ರೀ ಮಂಜುನಾಥ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಶ್ರಾವಣ ಮಾಸದ ಶುಭ ಸೋಮವಾರದಂದು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಶ್ರೀ ಮಂಜುನಾಥ ದೇವರು ರಾಜ್ಯದ ಜನರಿಗೆ ಸುಭೀಕ್ಷೆಯನ್ನು ತರಲಿ ಎಂದರು.

ಬ್ರಹ್ಮಾವರ : ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದಲ್ಲಿ ಬೆಳಕಿಗಾಗಿ ಪರದಾಟ

ಬ್ರಹ್ಮಾವರ : ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ನಗರಭಾಗ ಸೇರಿದಂತೆ ಹೇರೂರಿನಿಂದ ಉಪ್ಪಿನಕೋಟೆ ತನಕ ಕೇಂದ್ರ ಭಾಗದಲ್ಲಿ ಚತುಷ್ಪಥ ರಸ್ತೆಗೆ ಹೆದ್ದಾರಿ ಇಲಾಖೆಯಿಂದ ಬೆಳಕಿನ ವ್ಯವಸ್ಥೆಯಿಲ್ಲ. ರಸ್ತೆ ಬದಿ ವಿದ್ಯುತ್ ಕಂಬಗಳು ಮಾತ್ರ ಕಂಡುಬರುತ್ತಿದ್ದು, ವಿದ್ಯುತ್ ದೀಪಗಳು ಮಾತ್ರ ಉರಿಯುತ್ತಿಲ್ಲ. ಬ್ರಹ್ಮಾವರ ಸರ್ವಿಸ್ ರಸ್ತೆ ಆರಂಭವಾಗುವ ಮಹೇಶ್ ಆಸ್ಪತ್ರೆಯಿಂದ ಧರ್ಮಾವರ ವೃತ್ತ ತನಕ ವಾಹನ ಸಂಚಾರಿ ಮತ್ತು ಪಾದಚಾರಿಗಳಿಗೆ ಸರಿಯಾದ ಬೆಳಕಿನ ವ್ಯವಸ್ಥೆ

ಮುಲ್ಕಿ : ಪದ್ಮಶಾಲಿ ಮಹಾಸಭಾ, ವಿದ್ಯಾವರ್ಧಕ ಸಂಘದಿಂದ ಸಾಧಕರಿಗೆ ಗೌರವ

ಮುಲ್ಕಿ : ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾ ಸಭಾದ 77ನೇ ವಾರ್ಷಿಕ ಮಹಾಸಭೆ ಮತ್ತು ವಿದ್ಯಾ ವರ್ಧಕ ಸಂಘದ 33ನೇ ವಾರ್ಷಿಕ ಮಹಾಸಭೆ ಕಿನ್ನಿಗೋಳಿಯ ನೇಕಾರ ಸೌಧದಲ್ಲಿ ನಡೆಯಿತು. ರಾಮದಾಸ್ ಶೆಟ್ಟಿಗಾರ್ ಮತ್ತು ಲಕ್ಷ್ಮಣ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಪದ್ಮಶಾಲಿ ಸಾಮಾಜಿಕ ನಾಯಕತ್ವ ಪ್ರಶಸ್ತಿಯನ್ನು ವಿ.ನಾರಾಯಣ ಶೆಟ್ಟಿಗಾರ್ ವಕ್ವಾಡಿ ಯವರಿಗೆ ನೀಡಲಾಯಿತು. ಸಮಾಜದ ವಿವಿಧ ಕ್ಷೇತ್ರದ ಸಾಧಕರು,ಪ್ರತಿಭಾವಂತರನ್ನು ಮತ್ತು

ಬುಡಾಪೆಸ್ಟ್: ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‍ಶಿಪ್ – ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾಗೆ ಚಿನ್ನ

ವಿಶ್ವ ಆತ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಚಿನ್ನ ಮುಡಿಗೇರಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದು ವಿಶ್ವ ಆತ್ಲೆಟಿಕ್ಸ್‍ನಲ್ಲಿ ಭಾರತ ಜಯಿಸಿರುವ ಪ್ರಪ್ರಥಮ ಚಿನ್ನವಾಗಿದೆ. ರವಿವಾರ ರಾತ್ರಿ ನಡೆದ ಫೈನಲ್‍ನಲ್ಲಿ ನೀರಜ್ ಚೋಪ್ರಾ 88.17 ಮೀ. ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದರು. ಪಾಕಿಸ್ಥಾನದ ಅರ್ಷದ್ ನದೀಮ್ 87.82 ಮೀ. ದೂರಕ್ಕೆ ಎಸೆದು ದ್ವಿತೀಯ

ಮಂಗಳೂರು: ಎಂಡಿಎಂಎ’ ಮಾರಾಟ ಮಾಡುತ್ತಿದ್ದ ಡ್ರಗ್ಸ್ ಪೆಡ್ಲರ್ ಗಳ ಬಂಧನ

ಮಾದಕ ವಸ್ತು `ಸಿಂಥೆಟಿಕ್ ಡ್ರಗ್ಸ್ ಎಂಡಿಎಂಎ’ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ಸ್ ಪೆಡ್ಲರ್ ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಸುರತ್ಕಲ್ ಕಾಟಿಪಳ್ಳ 2ನೇ ಬ್ಲಾಕ್‍ನ ಶಾಕೀಬ್ ಯಾನೆ ಶಬ್ಬು (33), ಚೊಕ್ಕಬೆಟ್ಟು 8ನೆ ಬ್ಲಾಕ್‍ನ ನಿಸಾರ್ ಹುಸೈನ್ ಯಾನೆ ನಿಚ್ಚು (34) ಬಂಧಿತ ಆರೋಪಿಗಳು. ಇವರಿಂದ ಒಟ್ಟು 52 ಗ್ರಾಂ ತೂಕದ 2,60,000 ರೂ.ಮೌಲ್ಯದ ಎಂಡಿಎಂಎ ಮಾದಕ ವಸ್ತು, ಕಾರು, 2 ಮೊಬೈಲ್ ಫೆÇೀನು, ನಗದು 1,800 ರೂ.,

ಮುಲ್ಕಿ: ಅಯ್ಯಪ್ಪ ಮಂದಿರದಲ್ಲಿ ಪಡಿಪೂಜೆ ಸೇವೆ

ಪ್ರತೀ ವರ್ಷದಂತೆ ಈ ವರ್ಷವೂ ಓಣಂ ಸಂದರ್ಭ ಅಯ್ಯಪ್ಪ ಸ್ವಾಮಿ ಮಾಲೆಧರಿಸಿ ಯಾತ್ರೆಗೆ ಹೊರಟ ಸ್ಬಾಮಿಗಳ ಮೂಲಕ ಅಯ್ಯಪ್ಪನಿಗೆ ಬಹಳ ಪ್ರಿಯವಾದ ಪಡಿಪೂಜೆಯು ಮುಲ್ಕಿ ಅಯ್ಯಪ್ಪ ಮಂದಿರದಲ್ಲಿ ನಡೆಯಿತು. ಪೂಜೆಯ ಬಳಿಕ ಮಾತನಾಡಿದ ಗುರುಸ್ವಾಮಿ ಗಿರೀಶ್ ಪಲಿಮಾರು, ಜ್ಯೋತಿ ಸ್ವರೂಪನಾದ ಅಯ್ಯಪ್ಪನನ್ನು ಸಾಕ್ಷಾತ್ಕಾರಗೊಳಿಸುವ ನಿಟ್ಟಿನಲ್ಲಿ ಈ ದೀಪಾರಾಧನೆ ಅಂದರೆ ಪಡಿಪೂಜೆ ನಡೆಸಲಾಗಿದ್ದು, ಮಾಲೆಧಾರಿಗಳು ವೃತ ನೇಮ ನಿಷ್ಠೆಯಿಂದ ಓಣಂ ಪರ್ವಕಾಲದಲ್ಲಿ ಶಬರಿ ಸನ್ನಿಧಾನಕ್ಕೆ