ಇಸ್ರೋ ನೇತೃತ್ವದಲ್ಲಿ ಉಡಾವಣೆಯಾದ ಚಂದ್ರಯಾನ – 3 ಇದರ ಯಶಸ್ವಿ ಕಕ್ಷೆ ತಲುಪುವಿಕೆಗೆ ಆಶಿಸಿ ಮತ್ತು ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಪರ್ಯಾಯ ಉಡುಪಿ ಶ್ರೀ ಕೃಷ್ಣಾಪುರ ಮಠದ ಆಡಳಿತಕ್ಕೊಳಪಟ್ಟಿರುವ ಕಾಪು ದಂಡತೀರ್ಥ ಮಠದಲ್ಲಿ ನವಗ್ರಹ ಯಾಗ ಪುರಸ್ಸರ ಚಂದ್ರಶಾಂತಿ ನಡೆಯಿತು. ದಂಡತೀರ್ಥ ಮಠದ ಆಡಳಿತ ಮೊಕ್ತೇಸರ ಡಾ. ಸೀತಾರಾಮ್ ಭಟ್ ನೇತೃತ್ವದಲ್ಲಿ, ವೇದ
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಿಂದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮೂಲಕ ನೆಲ್ಯಾಡಿ ಪೇಟೆಯನ್ನು ಸಂಪರ್ಕಿಸುವ ಪುತ್ಯೆ ಪ್ರದೇಶದ 800 ಮೀಟರ್ ರಸ್ತೆಗೆ ಡಾಂಬರು ಅಥವಾ ಕಾಂಕ್ರೀಟ್ ಕಾಣದೆ ದಶಕಗಳ ಕಾಲವೇ ಸಂದಿದ್ದು ಸಂಚಾರಕ್ಕೆ ಆಯೋಗ್ಯವಾಗಿದೆ. ದಿನಂಪ್ರತಿ ನೂರಾರು ನೌಕರರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಶ್ರೀ ಕ್ಷೇತ್ರ ಕೊಕ್ಕಡ, ಸೌತಡ್ಕ, ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಪ್ರಯಾಣಿಸುವ ಭಕ್ತರೂ ಕೂಡ ಈ ರಸ್ತೆ ಮೂಲಕವೇ ಪ್ರಯಾಣಿಸುತ್ತಿದ್ದಾರೆ. ಆದರೆ
ಉಜಿರೆ, ಆ.18: ಕನ್ನಡ ಓದು ಕುರಿತಂತೆ ಸಂಕುಚಿತ ಮನೋಭಾವ ಹಾಗೂ ಕನ್ನಡ ಕಲಿಕೆ ಕಷ್ಟ ಎನ್ನುವ ಅಪಪ್ರಚಾರ ಸಲ್ಲದು ಎಂದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ, ಮೈಸೂರು ಇದರ ಯೋಜನಾ ನಿರ್ದೇಶಕ ಪ್ರೊ. ಎನ್. ಎಂ. ತಳವಾರ್ ಹೇಳಿದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದಲ್ಲಿ ಆ.18 ನಡೆದ ‘ಪ್ರಾಚೀನ ಕನ್ನಡ ಸಾಹಿತ್ಯ ಅಧ್ಯಯನ: ಪ್ರಾರಂಭಿಕ ಪ್ರಯತ್ನಗಳು’ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಅವರು
ಉಜಿರೆ, ಆ.18: ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಗಮನಿಸಿದಾಗ ಕಾವ್ಯ ಮತ್ತು ಶಾಸ್ತ್ರ ಎಂಬ ಎರಡು ಬಗೆಯ ಸ್ರೋತ (ಪ್ರವಾಹ) ಗಳನ್ನು ಕಾಣಬಹುದಾಗಿದ್ದು, ಈ ಎರಡೂ ನೆಲೆಗಳಲ್ಲಿ ಕನ್ನಡ ಭಾಷೆಯು ಪರಿಪುಷ್ಟವಾಗಿ ಬೆಳೆದಿದೆ. 19ನೆಯ ಶತಮಾನದಲ್ಲಿಯೇ ಕನ್ನಡದಲ್ಲಿ ಅತ್ಯದ್ಭುತ ಸಾಹಿತ್ಯಿಕ ಅಧ್ಯಯನದ ಕೆಲಸಗಳು ಪ್ರಾರಂಭವಾದವು ಎಂದು ಮುಂಬೈ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ತಾಳ್ತಜೆ ವಸಂತ ಕುಮಾರ ಅವರು ಹೇಳಿದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ
ನೆಲ್ಯಾಡಿ: ಕೌಕ್ರಾಡಿ ಗ್ರಾ.ಪಂ.ನ 2ನೇ ಅವಧಿಗೆ ಅಧ್ಯಕ್ಷರಾಗಿ ಲೋಕೇಶ್ ಬಾಣಜಾಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವನಿತಾ ಎಂ.ಆಯ್ಕೆಯಾಗಿದ್ದಾರೆ. ಇಬ್ಬರೂ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ.
ಉಜಿರೆ, ದಿ.19 : ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗ ಹಾಗೂ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇದರ ಸಹಯೋಗದೊಂದಿಗೆ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ‘ಪ್ರೇರಣಾ ದಿನ’ ಎಂಬ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶ್ರೀ ಸಿದ್ಧವನ ಗುರುಕುಲದಲ್ಲಿ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಜೀವಮಾನ ಸಾಧನೆಗಾಗಿ ಉಜಿರೆ ಶ್ರೀಧಮ ಕಾಲೇಜಿನ
ಬಲ್ಯ ರಕ್ಷಿತಾರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಿದ ಮೂವರು ಆರೋಪಿಗಳನ್ನು ಕಡಬ ಪೋಲೀಸರು ಕುಂತೂರು ಬಳಿ ಬಂಧಿಸಿದ್ದಾರೆ. ಬಂಧಿತರನ್ನು ನೆಲ್ಯಾಡಿ ಮೂಲದ ಬಿನು, ದಿನೇಶ್ ಹಾಗೂ ನವೀನ್ ಎಂದು ಗುರುತಿಸಲಾಗಿದೆ. ಕಡಬ ಎಸ್‍ಐ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಕುಂತೂರು ಬಳಿ ಬಂದಾಗ ಇನ್ನೋವ ಕಾರು ಅನುಮಾನಾಸ್ಪದವಾಗಿ ಚಲಾಯಿಸುತ್ತಿರುವುದು ಕಂಡು ವಾಹನ ನಿಲ್ಲಿಸಿ ತಪಾಸನೆ ಮಾಡಿದಾಗ ಕಾರಿನಲ್ಲಿ ಬೇಟೆಯಾಡಿದ ಪ್ರಾಣಿಗಳು ಕಂಡು ಬಂದಿದೆ. ಒಂದು ಮುಳ್ಳು
ಮಕ್ಕಳಲ್ಲಿ ಅಡಕವಾಗಿರುವ ಸೂಕ್ತ ಪ್ರತಿಭೆಯನ್ನು ಹೊರಗೆಡಹುವ ಉದ್ಧೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಎರ್ಮಾಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಹಳೆ ವಿದ್ಯಾರ್ಥಿಗಳು ಸಹಿತ ದಾನಿಗಳ ಸಹಕಾರದಿಂದ ಎರ್ಮಾಳು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂಬುದಾಗಿ ಮುಖ್ಯ ಶಿಕ್ಷಕಿ ವಿನೋದ ಹೇಳಿದ್ದಾರೆ. ಅವರು ಎರ್ಮಾಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕ್ಲಸ್ಟರ್ ನ
ಹಾಸನ ಜಿಲ್ಲೆಯ ಸಕಲೇಶಪುರ ಹೆಬ್ಬನಹಳ್ಳಿ ಸಮೀಪ ಇರುವ ಎತ್ತಿನಹೊಳೆ ಯೋಜನೆಯ ಕಚೇರಿಗೆ ಇಂದು ಭೇಟಿ ನೀಡಿದ ಉಪ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರಾದ ಡಿ.ಕೆ ಶಿವಕುಮಾರ್ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿದರು. ಸಭೆಯಲ್ಲಿ ಯೋಜನೆ ಪ್ರಾರಂಭಕ್ಕೆ ಇರುವ ತೊಂದರೆಗಳ ಕುರಿತಾಗಿ ಚರ್ಚಿಸಿದ ಸಚಿವರು, ವಿದ್ಯುತ್ ಇಲಾಖೆ ಮತ್ತು ಭೂ ಸ್ವಾದೀನ ಪಡಿಸಿಕೊಳ್ಳಲು ಕಂದಾಯ ಇಲಾಖೆಯಿಂದ ಇರುವ ತೊಂದರೆ ಕುರಿತಾಗಿ ಚರ್ಚಿಸಿ ಭೂಮಿ ಯೋಜನೆಗಾಗಿ ಭೂಮಿ
ದೇಶದ ಹೆಮ್ಮೆಯ ಇಸ್ರೋದ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ-3 ಯಶಸ್ವೀಗೆ ದೇಶಾದ್ಯಂತ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಅವರು ಚಂದ್ರಯಾನ-3 ಯಶಸ್ವಿಗೆ ಶುಭ ಹಾರೈಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ ಅವರು, ಇಸ್ರೋ ಭಾರತದ ಹೆಮ್ಮೆಯ ಸಂಸ್ಥೆ.




























