ಚಂದ್ರಯಾನ-3 ಯಶಸ್ವಿ ಉಡಾವಣೆಗೆ, ಕೇಂದ್ರ ಸಚಿವೆ ಶೋಭಾ, ಶಾಸಕ ಯಶ್ಪಾಲ್ ಶುಭ ಹಾರೈಕೆ
ದೇಶದ ಹೆಮ್ಮೆಯ ಇಸ್ರೋದ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ-3 ಯಶಸ್ವೀಗೆ ದೇಶಾದ್ಯಂತ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಅವರು ಚಂದ್ರಯಾನ-3 ಯಶಸ್ವಿಗೆ ಶುಭ ಹಾರೈಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ ಅವರು, ಇಸ್ರೋ ಭಾರತದ ಹೆಮ್ಮೆಯ ಸಂಸ್ಥೆ. ಪ್ರಪಂಚದ ಹಲವಾರು ದೇಶಗಳ ಅಂತರಿಕ್ಷಾ ಉಡಾವಣೆಗೆ ಇಸ್ರೋ ಸಹಾಯ ಮಾಡಿದೆ. ಇತರ ದೇಶಗಳಿಗೂ ಕೂಡ ಇಸ್ರೋ ಸಹಾಯ ಮಾಡಿದೆ. ಇಸ್ರೋ ಸೌಲಭ್ಯ, ಸೌಕರ್ಯ ಇಲ್ಲ ಎನ್ನುವ ಕಾಲವೊಂದಿತ್ತು.
ಅಮೆರಿಕಾದ ನಾಸಾ, ರಷ್ಯಾದ ಬಗ್ಗೆ ಎಲ್ಲರೂ ಮಾತನಾಡುತ್ತಾ ಇದ್ದರು. ಭಾರತದ ಇಸ್ರೋವನ್ನು ಪ್ರಪಂಚ ಕೊಂಡಾಡುವ ರೀತಿ ಆಗಿದೆ.ಚಂದ್ರನ ಅಂಗಳವನ್ನು ಚುಂಬಿಸುತ್ತೆ ಎನ್ನುವುದು ಖುಷಿಯ ವಿಚಾರ. ಕೊನೆಯ ಪ್ರಕ್ರಿಯೆವರೆಗೂ ಯಶಸ್ಸು ಕಾಣಲಿ ಅಂತ ಶುಭ ಹಾರೈಸುತ್ತೇನೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.ಆನಂತರ ಶಾಸಕ ಯಶ್ಪಾಲ್ ಸುವರ್ಣ ಅವರು ಮಾತನಾಡಿ, ಚಂದ್ರಯಾನ-3 ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.