Home Posts tagged V4News (Page 446)

ವಿಟ್ಲ: ಬಸ್‌ ಡ್ರೈವರ್‌ ಹೃದಯಾಘಾತದಿಂದ ನಿಧನ

ವಿಟ್ಲ: ಖಾಸಗಿ ಬಸ್‌ನ ಡ್ರೈವರ್‌ ಹೃದಯಾಘಾತದಿಂದ ನಿಧನರಾದ ಘಟನೆ ಕನ್ಯಾನ ಬಂಡಿತ್ತಡ್ಕ ಸಮೀಪ ನಡೆದಿದೆ. ಕನ್ಯಾನ ಬಂಡಿತ್ತಡ್ಕ ನಿವಾಸಿ ರಮೇಶ್ (42) ಮೃತರು. ರಮೇಶ್ ರವರು ಖಾಸಗಿ ಬಸ್‌ನ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸೌಮ್ಯ ಸ್ವಭಾವದವರಾದ ರಮೇಶ್ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದ ರು. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು

ವಿಟ್ಲ: ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತ್ಯು

ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಮಾಣಿ ಸುರಿಕುಮೇರು ಬಳಿ ನಡೆದಿದೆ. ಇರ್ಷಾದ್ ಉಮರ್( 33)ಮೃತ ಯುವಕ.ಇವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆ ಊರಿಗೆ ಬಂದಿದ್ದರು. ಅವರಿಗೆ ಆಸ್ಪತ್ರಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಅವರಿಗೆ ರಕ್ತದ ಅವಶ್ಯಕತೆ ಇದ್ದಾಗ ಸಾಮಾಜಿಕ ಜಾಲತಾಣಗಳ ಮೂಲಕ‌ ಸಂಗ್ರಹಿಸಲಾಗಿತ್ತು. ಆದರೆ ನಿನ್ನೆ ಚಿಕಿತ್ಸೆ ಫಲಿಸದೆ

ಉಳ್ಳಾಲ : ಮನೆಯೊಳಗಡೆ ನೇಣುಬಿಗಿದು ಆತ್ಮಹತ್ಯೆ

ಉಳ್ಳಾಲ: ಯುವಕನೋರ್ವ ಮನೆಯೊಳಗಡೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ತಲಪಾಡಿ ಕೆ.ಸಿ.ನಗರದಲ್ಲಿ ಸಂಭವಿಸಿದೆ.ರಶೀದಾ ಭಾನು ಎಂಬವರ ಪುತ್ರ ಮೊಹಮ್ಮದ್‌ ನೂಹ್ಮನ್‌ (19) ಆತ್ಮಹತ್ಯೆಗೈದವರು. ಖಿನ್ನತೆಗೆ ಒಳಗಾಗಿದ್ದ ನೂಹ್ಮನ್‌ ಮನೆಯ ಒಳಗಡೆ ಕೊಠಡಿಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಮಂದಿ ಬಾಗಿಲು ಒಡೆದು ನೋಡಿದಾಗ ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಐವರು ಸಹೋದರಿಯರಿಗೆ ಓರ್ವನೇ

ಬಿ.ಸಿ ರೋಡ್ : ಆನಿಯಾ ದರ್ಬಾರ್ ಡಿಲಕ್ಸ್ ಮಲ್ಟಿ ಕುಷನ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

ಆನಿಯಾ ದರ್ಬಾರ್ ಗ್ರೂಪ್ ಆಫ್ ಹೊಟೇಲ್ ಇವರ ನೂತನ ಆನಿಯಾ ದರ್ಬಾರ್ ಡಿಲಾಕ್ಸ್ ಮಲ್ಟಿ ಕುಷನ್ ಫ್ಯಾಮಿಲಿ ರೆಸ್ಟೋರೆಂಟ್ ಬಿ.ಸಿ.ರೋಡಿನ ಸ್ಮಾರ್ಟ್‍ಸಿಟಿ ಕಟ್ಟಡದ ನೆಲ ಅಂತಸ್ತಿನಲ್ಲಿ ಶುಭಾರಂಭಗೊಂಡಿತು. ಬಿ.ಸಿ.ರೋಡಿನಲ್ಲಿ ಈಗಾಗಲೇ ಆನಿಯಾ ದರ್ಬಾರ್ ಹೋಟೇಲ್ ಕಾರ್ಯಚರಿಸುತ್ತಿದ್ದು ಶುಚಿ ರುಚಿಯಾದ ಊಟೋಪಚಾರ ಹಾಗೂ ಗ್ರಾಹಕ ಸ್ನೇಹಿ ಸೇವೆಯಿಂದಾಗಿ ತಾಲೂಕಿನಾದ್ಯಂತ ಮನೆಮಾತಾಗಿದೆ. ಇದೀಗ ಇದೇ ಸಂಸ್ಥೆಯ ಹವಾನಿಯಂತ್ರಿತ ಆನಿಯಾ ದರ್ಬಾರ್ ಡಿಲಾಕ್ಸ್ ಮಲ್ಟಿ

ಆಂಟಿ ಕಮ್ಯುನಲ್ ವಿಂಗ್ ಕಾರ್ಯವೈಖರಿಯನ್ನು ಸ್ಪಷ್ಟಪಡಿಸಲಿ: ಶಾಸಕ ಯಶ್ಪಾಲ್ ಸುವರ್ಣ

ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರವಾಗಿರಿಸಿ ಆಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಲು ಹೊರಟಿದೆ. ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲು ಮುಂದಾಗಿದೆ. ಇದರಿಂದ ಮಂಗಳೂರಿನಲ್ಲಿರುವ ಧಾರ್ಮಿಕ ಕೇಂದ್ರಗಳಿಗೆ ಬರುವ ಭಕ್ತರಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆರೋಪಿಸಿದರು. ವೈದ್ಯಕೀಯ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಪೋಷಕರಲ್ಲಿ ಈ ವಿಂಗ್ ಆತಂಕಕ್ಕೆ ಕಾರಣವಾಗಲಿದೆ. ತಮ್ಮ ಮಕ್ಕಳನ್ನ ಕಾಲೇಜುಗಳಿಗೆ ಕಳುಹಿಸಲು

ಕಟಪಾಡಿ ಕೇಶವ ಭಂಡಾರಿ ನಿಧನ

ಉಡುಪಿ ತಾಲೂಕು ಸವಿತಾ ಸಮಾಜದ ಮಾಜಿ ಅಧ್ಯಕ್ಷರು, ಸಮಾಜ ಮುಖಿ ಹೋರಾಟಗಾರ, ಸಂಘಟಕ, ಸಮಾಜದ ಮುಖಂಡ ಕಟಪಾಡಿ ಕೇಶವ ಭಂಡಾರಿಯವರು ಅಸೌಖ್ಯದಿಂದ ನಿಧನರಾಗಿದ್ದಾರೆ. ಕೇಶವ ಭಂಡಾರಿ ಅವರು, ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಸ್ಥಾಪಕ ನಿರ್ದೇಶಕರೂ, ಪ್ರಸ್ತುತ ಜಿಲ್ಲಾ ಸವಿತಾ ಸಮಾಜದ ಗೌರವ ಸಲಹೆಗಾರರಾಗಿ ಸೇವೆಯಲ್ಲಿ ಸಲ್ಲಿಸುತ್ತಿದ್ದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕೇಶವ ಭಂಡಾರಿ ಅಂತ್ಯಕ್ರಿಯೆಯಲ್ಲಿ ಉಡುಪಿ ಜಿಲ್ಲಾ

ಹೆಜಮಾಡಿ ಗ್ರಾ.ಪಂ. ವ್ಯಾಪ್ತಿಯ ರಸ್ತೆ ಕಾಮಗಾರಿ ಉದ್ಘಾಟನೆ

ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 3 ಕೋಟಿ 75 ಲಕ್ಷ ರೂಪಾಯಿ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳ ಉದ್ಘಾಟನೆಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಪಟ್ಟ ಬಳಿಯ ನಡಿದಂಡೆ ಸಂರಕ್ಷಣೆ – 2 ಕೋಟಿ, ಪರಪಟ್ಟ – ನದಿಕುದ್ರು ರಸ್ತೆಯ ಕಾಂಕ್ರೀಟಿಕರಣ – 40 ಲಕ್ಷ, ಗುಂಡಿ ರಸ್ತೆ ಕಾಂಕ್ರೀಟಿಕರಣ -50

ಬಾರಕೂರಿನಲ್ಲಿ ಸರಣಿ ಕಳ್ಳತನ : ಪೆಟ್ರೋಲ್ ಬಂಕ್, ಟಯರ್ ಅಂಗಡಿ, ಹಾಲು ಅಂಗಡಿಗಳಲ್ಲಿ ನಗದು ಕಳವು

ಬಾರಕೂರು ಮುಖ್ಯ ರಸ್ತೆಯ ಪೆಟ್ರೋಲ್ ಬಂಕ್, ಟಯರ್ ಅಂಗಡಿ, ಹಾಲು ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದೆ. ಅಜಿತ್ ಕುಮಾರ್ ಶೆಟ್ಟಿಯವರ ಮಾಲಕತ್ವದ ಶ್ರೀ ಗಣೇಶ್ ಇಂಡಿಯನ್ ಆಯಿಲ್‍ನಲ್ಲಿ 8 ಸಿಸಿ ಕ್ಯಾಮರಾ ಇದ್ದು ಕಛೇರಿ ಹಿಂಭಾಗದಲ್ಲಿರುವ ಕ್ಯಾಮರಾಕ್ಕೆ ಸೊಪ್ಪು ಮತ್ತು ಬಟ್ಟೆ ಮುಚ್ಚಿ ಬಳಿಕ ಬೀಗವನ್ನು ಒಡೆದು ಕಪಾಟಿನಲ್ಲಿದ್ದ 20 ಸಾವಿರದಷ್ಟು ನಗದು, ಅಲ್ಲೇ ಪಕ್ಕದಲ್ಲಿದ್ದ ಟಯರ್ ಅಂಗಡಿಯ 3 ರಾಡ್, ನಂದಿನಿ ಹಾಲು ಅಂಗಡಿಯ ಬಾಗಿಲು ಮುರಿದು ನಗದು

ದ.ಕ : ನೂತನ ಜಿಲ್ಲಾಧಿಕಾರಿಯಾಗಿ ಮುಲೈ ಮುಹಿಲನ್

ಮಂಗಳೂರು, ದ.ಕ.ಜಿಲ್ಲಾಧಿಕಾರಿ ರವಿ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ. ನೂತನ ಜಿಲ್ಲಾಧಿಕಾರಿಯಾಗಿ ಸ್ಮಾರ್ಟ್ ಗವರ್ನೆನ್ಸ್ ಬೆಂಗಳೂರು ಇದರ ಕಾರ್ಯನಿರ್ವಾಹಕ ನಿರ್ದೇಶಕ ಮುಲೈ ಮುಹಿಲನ್ ಎಂ.ಪಿ. ನೇಮಕಗೊಂಡಿದ್ದಾರೆ. ಮುಲ್ಲೈ ಮುಹಿಲನ್ ತಮಿಳುನಾಡು ಮೂಲದವರಾಗಿದ್ದು, ದಿಂಡಿಗಲ್ ಅಣ್ಣಾ ವಿಶ್ವವಿದ್ಯಾಲಯದ ಪಿಎಸ್‍ಎನ್‍ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿನಲ್ಲಿ ಓದಿ ಕಂಪ್ಯೂಟರ್

ಸುರತ್ಕಲ್‍ : ಕ್ಷುಲ್ಲಕ ಕಾರಣಕ್ಕೆ ಯುವಕನಿಂದ ಚೂರಿ ಇರಿತ

ಸುರತ್ಕಲ್‍ನ ಜನತಾ ಕಾಲನಿಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದಿರುವ ಘಟನೆ ಗುರುವಾರ ರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಇಲ್ಲಿನ ಕಾನ ಕಾಲನಿ ನಿವಾಸಿ ಮುಹಮ್ಮದ್ ಶಾಫಿ(35) ಚೂರಿ ಇರಿತಕ್ಕೊಳಗಾದವರು. ಅದೇ ಪರಿಸರದ ಯುವಕ ತ್ವಾಹಿರ್ (24) ಚೂರಿಯಿಂದ ಇರಿದ ಆರೋಪಿ ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ ಕಾನಕಾಲನಿ ಮಸೀದಿಯ ಬಳಿ ಇಬ್ಬರ ನಡುವೆ ಜಗಳವಾಗಿದ್ದು, ತಾಹಿರ್ ಚೂರಿಯಲ್ಲಿ ಇರಿದು ಪರಾರಿಯಾಗಿದ್ದಾನೆ. ಮಸೀದಿಯಲ್ಲಿನ