ಕಟಪಾಡಿ ಕೇಶವ ಭಂಡಾರಿ ನಿಧನ
ಉಡುಪಿ ತಾಲೂಕು ಸವಿತಾ ಸಮಾಜದ ಮಾಜಿ ಅಧ್ಯಕ್ಷರು, ಸಮಾಜ ಮುಖಿ ಹೋರಾಟಗಾರ, ಸಂಘಟಕ, ಸಮಾಜದ ಮುಖಂಡ ಕಟಪಾಡಿ ಕೇಶವ ಭಂಡಾರಿಯವರು ಅಸೌಖ್ಯದಿಂದ ನಿಧನರಾಗಿದ್ದಾರೆ.
ಕೇಶವ ಭಂಡಾರಿ ಅವರು, ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಸ್ಥಾಪಕ ನಿರ್ದೇಶಕರೂ, ಪ್ರಸ್ತುತ ಜಿಲ್ಲಾ ಸವಿತಾ ಸಮಾಜದ ಗೌರವ ಸಲಹೆಗಾರರಾಗಿ ಸೇವೆಯಲ್ಲಿ ಸಲ್ಲಿಸುತ್ತಿದ್ದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಕೇಶವ ಭಂಡಾರಿ ಅಂತ್ಯಕ್ರಿಯೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಕಟಪಾಡಿ, ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ವಿಶ್ವನಾಥ್ ಭಂಡಾರಿ ನಿಂಜೂರು, ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ಕೋಶಾಧಿಕಾರಿ ಶೇಖರ್ ಸಾಲಿಯಾನ್, ಸಂಚಾಲಕರಾದ ಸತೀಶ್ ಭಂಡಾರಿ ಕಾಪು, ಸವಿತಾ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ನವೀನ್ ಚಂದ್ರ ಭಂಡಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಾಲತಿ ಅಶೋಕ್, ಸಿಬ್ಬಂದಿ ವರ್ಗ, ಜಿಲ್ಲಾ ಪರಿಯಾಳ ಸಮಾಜದ ಅಧ್ಯಕ್ಷರಾದ ಶಂಕರ್ ಸಾಲಿಯಾನ್, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಸುಭಾಸ್ ಭಂಡಾರಿ, ಪೂಜಾ ಸಮಿತಿ ಸಂಚಾಲಕರಾದ ಅಶೋಕ್ ಭಂಡಾರಿ ಕುತ್ಪಾಡಿ, ಉಡುಪಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾದ ರಾಜು ಭಂಡಾರಿ ಕಿನ್ನಿಮುಲ್ಕಿ, ಪದಾಧಿಕಾರಿಗಳು, ಜಿಲ್ಲೆಯ ಸವಿತಾ ಬಂಧುಗಳು ಹಾಗೂ ಅವರ ಹಿತೈಷಿಗಳು ಭಾಗವಹಿಸಿದ್ದರು.