ಪುತ್ತೂರು : ಮಣಿಪುರ ರಾಜ್ಯದಲ್ಲಿ ಮೀಸಲಾತಿ ಗಲಭೆ ಸೃಷ್ಠಿಸಿ ಚರ್ಚ್ ಮತ್ತು ಕ್ರಿಶ್ಚಿಯನರ ಮೇಲೆ ಮೇಲೆ ನಡೆಸಲಾಗಿರುವ ದಾಳಿಯನ್ನು ಖಂಡಿಸಿ ಮತ್ತು ಮಣಿಪುರದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವಂತೆ ಆಗ್ರಹಿಸಿ ಪುತ್ತೂರಿನ ಆಡಳಿತ ಸೌಧದ ಎದುರು ಸಿಐಟಿಯು ಬೆಂಬಲಿತ ತಾಲ್ಲೂಕು ಬೀಡಿ ಕೆಲಸಗಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಅದೆಷ್ಟೋ ವರ್ಷಗಳಿಂದ ತ್ಯಾಜ್ಯ ಸಮಸ್ಯೆಯಿಂದ ನಲುಗುತ್ತಿರುವ ಪಡುಬಿದ್ರಿಯ ಈ ಜಟಿಲ ಸಮಸ್ಯೆಗೆ ಮುಕ್ತಿಯಾರಿಂದ ಯಾವಾಗ ಎಂಬ ಪ್ರಶ್ನೆಗೆ ಎಲ್ಲೂ ಉತ್ತರವೇ ಸಿಗುತ್ತಿಲ್ಲ, ಪರಿಣಾಮ ಪಡುಬಿದ್ರಿ ಗ್ರಾ.ಪಂ. ಕಛೇರಿಯ ಮುಂಭಾಗದಲ್ಲೇ ರಾಶಿ ರಾಶಿ ದುರ್ನಾತ ಪ್ಲಾಸ್ಟಿಕ್ ತ್ಯಾಜ್ಯರಾಶಿ. ಬೃಹತ್ ಕಂಪನಿಗಳಿಗೆ ಸಾಹಸ್ರಾರು ಎಕ್ರೆ ಭೂಮಿ ನೀಡುವಾಗ, ಯಾವ ಅಧಿಕಾರಿ ಸಹಿತ ಯಾವೊಬ್ಬ ಜನಪ್ರತಿನಿಧಿಗೂ ಗ್ರಾಮದ ಉಪಯೋಗಕ್ಕೆ ಒಂದಿಷ್ಟು ಭೂಮಿಯನ್ನು ಉಳಿಸ ಬೇಕೆಂಬ ಅಲೋಚನೆಯೇ ಬಂದಿಲ್ಲ,
ಪುತ್ತೂರು ವಿಧಾನ ಸಭಾಕ್ಷೇತ್ರಕ್ಕೆ ಸಂಬಂಧಿಸಿದಂತೆ ಪುತ್ತೂರು ತಾಲೂಕಿನಲ್ಲಿ ಪೊಲೀಸ್ ಅಧೀಕ್ಷರ ಕಛೇರಿಯನ್ನು ಪ್ರಾರಂಭಿಸುವ ಬಗ್ಗೆ ಸರಕಾರದ ಹಂತದಲ್ಲಿ ಈಗಾಗಲೇ ಅನುಮೋದನೆಯಾಗಿದೆ. ಕಂದಾಯ ಇಲಾಖೆಯಿಂದಲೂ ಸ್ಥಳ ಕಾಯ್ದಿರಿಸಲಾಗಿದೆ. ಸರಕಾರವು ಈ ವಿಚಾರವನ್ನು ಪರಿಗಣಿಸಿ ಎಸ್‍ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರ ಮಾಡುವಂತೆ ಶಾಸಕ ಆಶೋಕ್ ಕುಮಾರ್ ರೈ ಅವರು ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ. ಪುತ್ತೂರಿಗೆ ಉಪವಿಭಾಗಕ್ಕೆ ಎಸ್‍ಪಿ ಕಚೇರಿಯನ್ನು
ಪರಿಸರವನ್ನು ಅತ್ಯಂತ ಜೋಪಾನವಾಗಿ ಕಾಪಾಡಬೇಕಾದ ಮನುಷ್ಯರು ತಮ್ಮ ಉತ್ತಮ ಬದುಕಿಗಾಗಿ ಪರಿಸರವನ್ನೇ ಹಾಳು ಮಾಡುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ.ಪರಿಸರ ನಾಶಗೊಂಡರೆ ಮಾನವ ಕುಲಕ್ಕೆ ಉಳಿಗಾಲವಿಲ್ಲ.ನೆಲ ಜಲ ಗಾಳಿ ಗಿಡ ಮರ ಪ್ರಾಣಿ ಪಕ್ಷಿ ಸೇರಿದಂತೆ ಇಡೀ ಪರಿಸರವನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಮಾನವನ ಅಭಿವೃದ್ಧಿಯೂ ಆಗಬೇಕು. ಅದು ಪರಿಸರ ಸ್ನೇಹಿ ಅಭಿವೃದ್ಧಿಯಾಗುವತ್ತ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಯೆನೆಪೋಯ ಪದವಿ ಕಾಲೇಜ್ ನ ಉಪ
ನಿಟ್ಟೆ ವಿಶ್ವವಿದ್ಯಾಲಯವು ಮಂಗಳೂರಿನ ಭಾರತ್ ಸಿನಿಮಾಸ್‍ನಲ್ಲಿ ನಾಲ್ಕನೇ ಆವೃತ್ತಿಯ ನಿಟ್ಟೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಛಾಯಾಚಿತ್ರಗಳ ಪ್ರದರ್ಶನಗಳನ್ನು ಜೂನ್ 8 ರಿಂದ 11 ರ ವರೆಗೆ ಮಂಗಳೂರಿನ ಭಾರತ್ ಸಿನಿಮಾಸ್‍ನಲ್ಲಿ ಆಯೋಜಿಸಲಾಗಿದೆ ಎಂದು ನಿಟ್ಟೆ ಇನ್ಸ್ಟಿಟ್ಯೂಷನ್ ಆಫ್ ಕಮ್ಯುನಿಕೇಶನ್ ನ ಮುಖ್ಯಸ್ಥ ಪ್ರೊ. ರವಿರಾಜ್ ಅವರು ತಿಳಿಸಿದ್ದಾರೆ . ಅವರು ನಗರದ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ವಿಟ್ಲ: ಸಾರಡ್ಕ – ಪುಣಚ ರಸ್ತೆಯ ತೋರಣಕಟ್ಟೆಯ ಸೊಸೈಟಿಯ ಸಮೀಪ ಮಂಗಳವಾರ ದನ ರಸ್ತೆಯಲ್ಲಿ ಅಡ್ಡ ಬಂದ ಹಿನ್ನಲೆಯಲ್ಲಿ ರಿಕ್ಷಾವೊಂದು ಮಗುಚಿ ಬಿದ್ದು ಜಖಂಗೊಂಡಿದೆ. ಆಜೇರು ನಿವಾಸಿ ಶಾಂತಾರಾಮ ರಾವ್ ಅವರು ರಿಕ್ಷಾದಲ್ಲಿ ಮಂಗಳವಾರ ಬೆಳಗ್ಗೆ ತೋರಣಕಟ್ಟೆಯಿಂದ ಪರಿಯಲ್ತಡ್ಕಕ್ಕೆ ಹಾಲು ಸಾಗಾಟ ಮಾಡುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಘಟನೆಯಿಂದ ರಿಕ್ಷಾದಲ್ಲಿ ಇದ್ದ ಸುಮಾರು ೫೦ಲೀಟರ್ ಹಾಲು ರಸ್ತೆಗೆ ಚೆಲ್ಲಲ್ಪಟ್ಟಿದೆ. ರಿಕ್ಷಾ ಚಾಲನೆ ಮಾಡುತ್ತಿದ್ದ ಶಾಂತಾರಾಮ
ಚಿರತೆಯೊಂದು ಉರುಳಿಗೆ ಸಿಕ್ಕಿ ಒದ್ದಾಡಿ ಸಾವನ್ನಪ್ಪಿದ ಘಟನೆ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳೆಪಾಡಿ ಮಿತ್ತಬೆಟ್ಟು ಬಳಿಯ ಗುಡ್ಡೆಯಲ್ಲಿ ನಡೆದಿದೆ. ಕಾಡು ಪ್ರಾಣಿಗಳ ಹಾವಳಿ ತಡೆಯಲಾರದೆ ಸ್ಥಳೀಯರು ಮಿತ್ತಬೆಟ್ಟು ಬಳಿಯ ಗುಡ್ಡದಲ್ಲಿ ಇಟ್ಟಿದ್ದ ಉರುಳಿಗೆ ಚಿರತೆ ರಾತ್ರಿ ಹೊತ್ತು ಬಿದ್ದಿದೆ ಎನ್ನಲಾಗಿದೆ. ಬೆಳಗ್ಗೆ ಗುಡ್ಡದಲ್ಲಿ ನಾಯಿ ಬೊಗಳುವ ಶಬ್ದ ಕೇಳಿ ಭಯಭೀತರಾಗಿ ಸ್ಥಳೀಯರು ಸ್ಧಳಕ್ಕೆ ಧಾವಿಸಿದಾಗ ಚಿರತೆ ಉರುಳಿಗೆ ಬಿದ್ದು
ಉಜಿರೆ, ಜೂ. 3 : ಸಂಶೋಧನೆಯೆಂಬುವುದು ವೈಜ್ಞಾನಿಕವಾಗಿ, ಸಾಮಾಜಿಕ ಅಭಿವೃದ್ಧಿ ಮತ್ತು ಸುಸ್ಥಿರತೆಗೆ ಪೂರಕವಾಗಿ ಇರುವುದು ಅಗತ್ಯ ಎಂದು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎ. ಜಯಕುಮಾರ್ ಶೆಟ್ಟಿ ಹೇಳಿದರು.ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ‘ಸಂಶೋಧನಾ ವಿನ್ಯಾಸ: ಲೇಖನ ಬರವಣ ಗೆ ಮತ್ತು ಪ್ರಕಟಣೆ- ಭವಿಷ್ಯದ ಹಾದಿ’ ಎಂಬ ರಾಜ್ಯ
ಉಜಿರೆ: ಶ್ರೇಷ್ಠ ಹವ್ಯಾಸಗಳು ಮಾನವನ ಅಭಿವೃದ್ಧಿಗೆ ಪೂರಕ ಎಂದು ರುಡ್ ಸೆಟಿ ಸಂಸ್ಥೆಯ ತರಬೇತುದಾರೆ ಅನಸೂಯಾ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಇತ್ತೀಚೆಗೆ ಹಾಬಿ ಸರ್ಕಲ್ ವತಿಯಿಂದ ಆಯೋಜಿಸಲಾಗಿದ್ದ ಒಂದು ದಿನದ ‘ಸಂಚಯ’ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತಮ ಹವ್ಯಾಸಗಳಲ್ಲಿ ತೊಡಗುವುದರಿಂದ ಸಂತೋಷ ಲಭಿಸುತ್ತದೆ. ಮನುಷ್ಯನ ಜೀವನವನ್ನು ಹಸನುಗೊಳಿಸುವ ಶಕ್ತಿ ಉತ್ತಮ ಹವ್ಯಾಸಗಳಿಗಿದೆ ಎಂದು ಅವರು ತಿಳಿಸಿದರು.
ಉಜಿರೆ, ಜೂನ್ 6: ಪರಿಸರಕ್ಕೆ ಸಂಬಂಧಿಸಿದಂತೆ ಉಂಟಾಗುತ್ತಿರುವ ನೈಸರ್ಗಿಕ ಬಿಕ್ಕಟ್ಟುಗಳಿಗೆ ಶಾಶ್ವತ ಪರಿಹಾರ ಹೊಳೆಸುವ ಆಲೋಚನಾ ಕ್ರಮಗಳು ಭೌತಶಾಸ್ತ್ರ ಮತ್ತು ಜೀವವಿಜ್ಞಾನದ ಸಂಶೋಧನಾತ್ಮಕ ಪ್ರಜ್ಞೆಯಿಂದ ನಿರೂಪಿತವಾಗುತ್ತವೆ ಎಂದು ಉಜಿರೆ ಎಸ್‍ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಬಿ.ಎ. ಅಭಿಪ್ರಾಯಪಟ್ಟರು. ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರದ ಭೌತಶಾಸ್ತ್ರ ವಿಭಾಗ ಮತ್ತು ಫಿಜಿಕಾ ಸಂಘದ ಸಹಯೋಗದಲ್ಲಿ ‘ಇವೆಂಟ್ ಹಾರಿಜಾನ್’




























