Home Posts tagged V4News (Page 464)

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಅಭಿನಂದನೆ

ಬೈಂದೂರು ಶಾಸಕರಾದ ಗುರುರಾಜ್ ಗಂಟೆಹೊಳೆ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಶಕ್ತಿ ಕೇಂದ್ರ ಕಾರ್ಯಕರ್ತರ ಸಭೆ ಮರವಂತೆ ಸಾಧನ ಸಭಾಭವನದಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಮರವಂತೆ ಎನ್ನುವುದು ಬಿಜೆಪಿಯ ಭದ್ರಕೋಟೆ ಹಾಗೂ ನನ್ನನ್ನು ಅತಿ ಹೆಚ್ಚು ಮತದಿಂದ ಗೆಲ್ಲಿಸುವಲ್ಲಿ ಮರವಂತೆ ಕಾರ್ಯಕರ್ತರು ಶ್ರಮಿಸಿದ್ದಾರೆ.. ಈ ಕಾರಣದಿಂದ ಅತಿ

ಪ್ರಧಾನಿ ನರೇಂದ್ರ ಮೋದಿಯಿಂದ ನೂತನ ಸಂಸತ್ ಭವನ ಲೋಕಾರ್ಪಣೆ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನೂತನ ಸಂಸತ್ ಭವನವನ್ನು ಲೋಕಾರ್ಪಣೆಗೊಳಿಸಿದರು. ಉದ್ಘಾಟನೆಗೂ ಮುನ್ನ ಅವರು ಹೋಮ, ಪೂಜೆಗಳನ್ನು ನೆರವೇರಿಸಿದರು. ಅಧೀನಂ ಸ್ವಾಮೀಜಿಗಳಿಂದ ‘ಸೆಂಗೋಲ್’ ಸ್ವೀಕರಿಸಿದ ಮೋದಿ, ಅದನ್ನು ಸಂಸತ್ ಭವನದ ಒಳಗೆ ಪ್ರತಿಷ್ಠಾಪಿಸಿದರು. ಬಳಿಕ ಸರ್ವ ಧರ್ಮ ಪ್ರಾರ್ಥನ ಸಮಾರಂಭದಲ್ಲಿ ಅವರು ಭಾಗಿಯಾದರು. ಎಲ್ಲ ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡ ನಂತರ ನರೇಂದ್ರ ಮೋದಿ ಅವರು, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಸಂಸತ್ ಭವನವನ್ನು

ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಯಶೋಧರ್ , ಕಾರ್ಯದರ್ಶಿ ಪ್ರೇಮಶ್ರೀ ಕಲ್ಲಬೆಟ್ಟು ಆಯ್ಕೆ

ಮೂಡುಬಿದಿರೆ : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಮೂಡುಬಿದಿರೆ ಇದರ ನೂತನ ಅಧ್ಯಕ್ಷರಾಗಿ ವಿಜಯವಾಣಿ ಪತ್ರಿಕೆಯ ಪ್ರತಿನಿಧಿ ಯಶೋಧರ ವಿ. ಬಂಗೇರ, ಕಾರ್ಯದರ್ಶಿಯಾಗಿ ವಿ4 ನ್ಯೂಸ್ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ್ತಿ ಪ್ರೇಮಶ್ರೀ ಕಲ್ಲಬೆಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶನಿವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ವಿಜಯ ಕರ್ನಾಟಕ ಪ್ರತಿನಿಧಿ

ಆರಾಧ್ಯ ವಸ್ತ್ರಮಳಿಗೆ ಜೂನ್ 15ರವರೆಗೆ ವಿಶೇಷ ಆಫರ್

ಮಂಗಳೂರಿನ ಪ್ರಸಿದ್ಧ ವಸ್ತ್ರ ಮಳಿಗೆಯಾದ ಆರಾಧ್ಯ ಮಳಿಗೆಯಲ್ಲಿ ಶುಭ ಸಮಾರಂಭ ಹಾಗೂ ಹಬ್ಬಗಳ ಖರೀದಿಗಾಗಿ ಅಮೋಘ ಕೊಡುಗೆಗಳನ್ನು ನೀಡುತ್ತಿದ್ದಾರೆ. ನಗರದ ಕಾರ್ ಸ್ಟ್ರೀಟ್ ನಲ್ಲಿರುವ ಆರಾಧ್ಯ ವಸ್ತ್ರಮಳಿಗೆಯಲ್ಲಿ ವಿಶೇಷ ಆಫರ್ ಗಳನ್ನು ಘೋಷಿಸಿದ್ದಾರೆ. ವಿವಿಧ ವಿನ್ಯಾಸದ ಸಿಲ್ಕ್ ಸಾರೀಸ್, ಕಾಂಜಿವರಂ ಸಾರೀಸ್ ,ಫ್ಯಾನ್ಸಿ ಸಾರೀಸ್ ,ಬನಾರಸ್ ಸಿಲ್ಕ್ಸ್ ,ಹಾಗೂ ಕುರ್ತಿಸ್‍ಗಳಿಗೆ ಶೇ.15 ರಷ್ಟು ರಿಯಾಯಿತಿಯನ್ನು ಘೋಷಿಸಿದ್ದಾರೆ. ಈ ಆಫರ್ ಜೂನ್ 15ರ ವರೆಗೆ

ಬ್ರಹ್ಮಾವರ ಠಾಣೆ : ಮುಟ್ಟುಗೋಲು ಹಾಕಿದ ದೋಣಿಗಳು – ಸಾಂಕ್ರಾಮಿಕ ರೋಗದ ಭೀತಿ

ಬ್ರಹ್ಮಾವರ ಪೊಲೀಸ್ ಠಾಣೆಯ ಬಳಿ 6 ವರ್ಷದಿಂದ ಅನಾಥವಾಗಿ ಬಿದ್ದ ಮರಳುಗಾರಿಕೆಗೆ ಬಳಸಲಾದ ಮುಟ್ಟುಗೋಲು ಹಾಕಲಾದ ದೋಣಿಗಳು ಇಲ್ಲಿನ ಪರಿಸರ ಸ್ವಾಸ್ಯ ಹಾಳುಮಾಡುವಂತಿದೆ. ಸೀತಾನದಿಯಲ್ಲಿ ಬ್ರಹ್ಮಾವರ ಬಳಿಯ ಹಂದಾಡಿ ಮರ್ಬು ಎನ್ನುವಲ್ಲಿ 6 ವರ್ಷದ ಹಿಂದೆ ಆಕ್ರಮ ಮರಳುಗಾರಿಕೆ ಬಳಸಲಾದ ದೋಣಿ ಎಂದು ಕುಂದಾಪುರ ಅಸಿಸ್ಟೆಂಟ್ ಕಮಿಷನರ್ ಭೂಭಾಲನ್ ನೇತೃತ್ವದಲ್ಲಿ 21 ದೋಣಿಗಳನ್ನು ಮುಟ್ಟುಗೋಲು ಹಾಕಿ ಬ್ರಹ್ಮಾವರ ಪೆÇಲೀಸ್ ಠಾಣೆ ಬಳಿ ಇರಿಸಲಾಗಿತ್ತು. 6 ವರ್ಷದಿಂದ ದೋಣಿಗಳು

ಬಂಟ್ವಾಳ :ನೇತ್ರಾವತಿ ನದಿ ಸೇತುವೆ ಕಾಮಗಾರಿ – ಫಿಲ್ಲರ್ ನಿರ್ಮಾಣ ಕಾರ್ಯ ಪೂರ್ಣ

ಬಂಟ್ವಾಳ : ನದಿಯಲ್ಲಿ ನೀರು ಕಡಿಮೆಯಾಗಿರುವ ಕಾರಣ ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಗೆ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ಸಾಂಗವಾಗಿ ಸಾಗುತ್ತಿದೆ. ಈಗಾಗಲೇ ಎಲ್ಲಾ ಫಿಲ್ಲರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಎರಡು ಫಿಲ್ಲರ್‍ಗಳ ಮಧ್ಯೆ ಬೀಮ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಬಿ.ಸಿ.ರೋಡು ಅಡ್ಡಹೊಳೆ ಚತುಷ್ಪಥ ಹೆದ್ದಾರಿಯ ಭಾಗವಾಗಿ ಪಾಣೆಮಂಗಳೂರಿನಲ್ಲಿ ಹೊಸ ಸೇತುವೆ ಕಾಮಗಾರಿ ನಡೆಯುತ್ತಿದೆ. ನದಿಗೆ ಮಣ್ಣನ್ನು ತುಂಬಿ ಯಂತ್ರಗಳ ಮೂಲಕ

ಉಳ್ಳಾಲ. ಕಾರು ಮತ್ತು ಬೈಕ್ ನಡುವೆ ಅಪಘಾತ – ಸವಾರರಿಬ್ಬರಿಗೆ ಗಾಯ

ಉಳ್ಳಾಲ : ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಉಳ್ಳಾಲದ ಮಾಸ್ತಿಕಟ್ಟೆ ಬಳಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.ತೊಕ್ಕೊಟ್ಟು ಕಡೆಯಿಂದ ಬರುತ್ತಿದ್ದ ಕಾರು ಎಡಬದಿಗೆ ತಿರುಗಿಸುವ ಸಂದರ್ಭ ಅದೇ ದಾರಿಯಲ್ಲಿ ಅಮಿತ ವೇಗದಲ್ಲಿ ಬಂದಿರುವ ಬೈಕ್ ಕಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರರಿಬ್ಬರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಗಾಯಾಳುಗಳಿಬ್ಬರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು

ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕದ ಉದ್ಘಾಟನಾ ಸಮಾರಂಭ

ಬಂಟ್ವಾಳ,: ಕಲಾವಿದರು ಯಾವ ರೀತಿ ಬದುಕಬೇಕು ಎನ್ನುವುದಕ್ಕೆ ಆದರ್ಶ ಪಟ್ಲ ಸತೀಶ್ ಶೆಟ್ಟಿ. ಕಲಾವಿದರ ಕಷ್ಟ ತಿಳಿದು ಅವರ ಕಷ್ಟದಲ್ಲಿ ತಾನು ಭಾಗಿಯಾಗುವ ನಿಟ್ಟಿನಲ್ಲಿ ಇಂತಹ ಫೌಂಡೇಷನ್ ಹಾಕಿ ಕೊಂಡು ವಿಶ್ವವ್ಯಾಪಿಯಾಗಿ ಕೆಲಸ ನಿರ್ವಹಿಸುವ ಈ ಫೌಂಡೇಶನ್ ಇನ್ನಷ್ಟು ಸಮಾಜ ಮುಖಿ ಸೇವೆ ನೀಡಲಿ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕದ ಉದ್ಘಾಟನೆ

ಕ್ರಿಯಾತ್ಮಕ ಚಿಂತನೆಗಳ ಮೂಲಕ ಬೈಂದೂರಿನ ಅಭಿವೃದ್ಧಿಗೆ ಪ್ರಯತ್ನಿಸಿ : ಶಾಸಕ ಗುರುರಾಜ್ ಗಂಟಿಹೊಳೆ

ಸರಕಾರಿ ಸೇವೆಯಲ್ಲಿದ್ದಾಗ ಕರ್ತವ್ಯ ಮತ್ತು ಜವಾಬ್ದಾರಿಗಳು ಸಹಜ. ಅದರ ಜೊತೆಗೆ ತಾವಿರುವ ಇಲಾಖೆಯಿಂದ ಯಾವ ರೀತಿಯ ಹೊಸ ಮಾರ್ಪಡುಗಳ ಮೂಲಕ ಜನರಿಗೆ ಇನ್ನಷ್ಟು ಸೇವೆ ನೀಡಲು ಸಾಧ್ಯ ಎನ್ನುವ ಚಿಂತನೆ ಮತ್ತು ಕ್ರಿಯಾತ್ಮಕ ಯೋಜನೆಗಳ ಮೂಲಕ ಬೈಂದೂರಿನ ಅಭಿವೃದ್ಧಿಗೆ ಅಧಿಕಾರಿಗಳು ಸಹಕರಿಸಿ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. ಅವರು ಬೈಂದೂರು ಪಟ್ಟಣ ಪಂಚಾಯತ್ ಸಭಾಭವನದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿದ್ದರು. ಈ

ಉಚ್ಚಿಲ ಕಡಲ್ಕೊರೆತ ಪ್ರದೇಶಕ್ಕೆ ಸ್ಪೀಕರ್ ಖಾದರ್ ಭೇಟಿ

ಕಡಲ್ಕೊರೆತಕ್ಕೆ ವಿಪರೀತ ಹಾನಿಗೊಳಗಾಗುತ್ತಿದ್ದ ಉಚ್ಚಿಲ, ಬಟ್ಟಂಪಾಡಿ, ಸೀಗ್ರೌಂಡ್ ಪ್ರದೇಶಗಳಿಗೆ ರಾಜ್ಯ ವಿಧಾನ ಸಭೆಯ ಸ್ಪೀಕರ್, ಮಂಗಳೂರು ಶಾಸಕ ಯು. ಟಿ. ಖಾದರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅವರು ಜಿಲ್ಲಾಧಿಕಾರಿ ರವಿ ಕುಮಾರ್ ಎಮ್.ಆರ್ ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಯು.ಟಿ. ಖಾದರ್ ಅವರು, ಅವರು ಈ ಹಿಂದೆ ಉಳ್ಳಾಲದ ಕೋಡಿ,ಕೋಟೆಪುರ,ಮೊಗವೀರಪಟ್ಣ,ಸುಭಾಷ್ ನಗರ, ಹಿಲೇರಿಯ ಮೊದಲಾದ