Home Posts tagged V4News (Page 485)

ತಲಪಾಡಿ : ಜುಗಾರಿ ಅಡ್ಡೆಗೆ ದಾಳಿ, 10 ಮಂದಿ ಬಂಧನ

ಉಳ್ಳಾಲ: ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು 10 ಮಂದಿಯನ್ನು ಬಂಧಿಸಿ ವಾಹನಗಳನ್ನು ವಶಪಡಿಸಿಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಸಮೀಪದ ತಚ್ಚಣಿ ಎಂಬಲ್ಲಿ ನಡೆದಿದೆ. ಬಂಧಿತ ರನ್ನು, ಮಂಜೇಶ್ವರ ನಿವಾಸಿ ಅಶ್ವತ್, ಸುಂಕದಕಟ್ಟೆ ನಿವಾಸಿ ಅಕ್ಬರ್, ಬೀರಿ ನಿವಾಸಿ ಅಬ್ಬಾಸ್, ಮಾಡೂರು ನಿವಾಸಿ ಅಮೀನ್, ಮಾರಿಪಳ್ಳ ನಿವಾಸಿ ಶಂಶೀರ್, ಅಡ್ಯಾರ್

ಪೋಕ್ಸೊ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿರುವ ವಿಚಾರ: ವ್ಯಕ್ತಿಗೆ  ನಿಟ್ಟೆ ಮೂಲದ ತಂಡದಿಂದ ಹಲ್ಲೆ

ಈ ಹಿಂದೆ ನಡೆದ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ಹೇಳಲು ಕೋರ್ಟಿಗೆ ಬಂದಿದ್ದ ವ್ಯಕ್ತಿಯನ್ನು  ಮರಳಿ ಹೋಗುವಾಗ ತಂಡವೊಂದು ತಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಶಿರ್ವ ಠಾಣಾ ವ್ಯಾಪ್ತಿಯ ಪಂಜಿಮಾರ್ ಎಂಬಲ್ಲಿ ಪೊದೆಗೆ ಎಸೆದು ಪರಾರಿಯಾಗಿದ ಬಗ್ಗೆ ಸುಮಾರು ಹತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಮುಖವಾಗಿ  ಫಾರೂಕ್ ನಿಟ್ಟೆ, ಅನಿಲ್, ಶಾರೂಕ್, ಇಕ್ಬಾಲ್ ಸಾಣೂರು ಇತರರ ವಿರುದ್ಧ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ನಿಟ್ಟೆ

ದೈವ ದೇವಸ್ಥಾನಗಳು ಸುಸ್ಥಿತಿಯಲ್ಲಿದ್ದರೆ ಗ್ರಾಮ ಸುಭಿಕ್ಷೆ: ಶಿಬರೂರು ವೇದವ್ಯಾಸ ತಂತ್ರಿ

ಯಾವ ಗ್ರಾಮದಲ್ಲಿ ದೈವಸ್ಥಾನಗಳು ಜೀರ್ಣಾವಸ್ಥೆಯಲ್ಲಿ ಇರುತೋ ಆ ಗ್ರಾಮ ವಾಸಿಗಳು ಸುಖದಿಂದರಲು ಸಾಧ್ಯವಿಲ್ಲ…ಅದೇ ರೀತಿ ಗ್ರಾಮ ದೇಗುಲಗಳು  ಸುಸ್ಥಿತಿಯಲ್ಲಿ ಇದ್ದರೆ ಆ ಗ್ರಾಮ ಸುಭಿಕ್ಷೆಯಿಂದ ಇರುತ್ತೆ ಎಂಬುದಾಗಿ ಶಿಬರೂರು ವೇದವ್ಯಾಸ ತಂತ್ರಿಗಳು ಹೇಳಿದ್ದಾರೆ. ಅವರು ಪಡುಬಿದ್ರಿ ನಡ್ಸಾಲು ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಪುನಃ ಪ್ರತಿಷ್ಠೆ ಅಷ್ಠಬಂಧ ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶುಭಾಶಂಸನೆ ಮಾಡಿದ್ದಾರೆ. ಈ

ಪುಂಜಾಲಕಟ್ಟೆ : ಚುನಾವಣಾ ಪ್ರಚಾರ ವೇಳೆ ಬಿಜೆಪಿ ಕಾರ್ಯಕರ್ತ ಕುಸಿದು ಬಿದ್ದು ಸಾವು

ಪುಂಜಾಲಕಟ್ಟೆ: ಮನೆ, ಮನೆ ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದ ಬಿಜೆಪಿ ಕಾರ್ಯಕರ್ತರೋರ್ವರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ಬಂಟ್ವಾಳ ತಾಲೂಕಿನ ಕಾವಳ ಮೂಡೂರು ಗ್ರಾಮದ ಕಲಾಯಿ ಎಂಬಲ್ಲಿ ಸಂಭವಿಸಿದೆ. ವೃತ್ತಿ ಯಲ್ಲಿ ಛಾಯಾಗ್ರಾಹಕ ರಾಗಿರುವ ಇಲ್ಲಿನ ನಿವಾಸಿ ಪ್ರವೀಣ್ ನಾಯಕ್( 45) ಮೃತ ಪಟ್ಟವರಾಗಿದ್ದಾರೆ.ಪ್ರವೀಣ್ ಮತ್ತು ತಂಡ ಅವರ ನಿವಾಸದ ಪರಿಸರದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರ ಪರ ಮನೆ

ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ಶ್ರೀ ಡಿ.‌ವೇದವ್ಯಾಸ್ ಕಾಮತ್ ಮನೆ ಮನೆಗೆ ತೆರಳಿ ಮತಯಾಚನೆ

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಡಿ.‌ವೇದವ್ಯಾಸ್ ಕಾಮತ್ ಅವರು ಕೊಡಿಯಾಲ್ ಬೈಲ್, ಪೋರ್ಟ್ ವಾರ್ಡ್, ಅಳಪೆ ದಕ್ಷಿಣ, ಕಂಕನಾಡಿ, ಪದವು ಸೆಂಟ್ರಲ್ ವಾರ್ಡ್ ಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ಇದೇ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಜನಾಂಗಕ್ಕೆ ದೇಶ ಸಾಗುತ್ತಿರುವ ಹಾದಿಯ ಬಗ್ಗೆ ಹೆಮ್ಮೆ ಇದೆ. ಅವರ ಉನ್ನತ ಕಲ್ಪನೆಯ ದಿಕ್ಕಿನೆಡೆಗೆ ರಾಜ್ಯವನ್ನು ಕೊಂಡೊಯ್ಯುವುದು ನಮ್ಮೆಲ್ಲರ ಜವಾಬ್ದಾರಿ. ಇವೆಲ್ಲದರ ಜೊತೆಗೆ

ಮತವಿಭಜನೆ ಮಾಡದೆ ರಮಾನಾಥ ರೈ ಗೆಲ್ಲಿಸಬೇಕು : ಚಂದ್ರಶೇಖರ ಪೂಜಾರಿ

ಬಂಟ್ವಾಳ : ಬಂಟ್ವಾಳದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈಯವರನ್ನು ಗೆಲ್ಲಿಸಬೇಕು. ಕ್ಷೇತ್ರದ ಜನರು ಮತವಿಭಜನೆ ಮಾಡದೆ ಎಲ್ಲಾ ಮತಗಳನ್ನು ರೈಯವರಿಗೆ ನೀಡಬೇಕು ಎಂದು ನ್ಯಾಯವಾದಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಪೂಜಾರಿ ವಿನಂತಿಸಿದರು. ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಇಂತಹ ಸನ್ನಿವೇಶದಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಬೇಕು. ಇಲ್ಲವಾದರೆ ಕೋಮುವಾದಿ ಶಕ್ತಿಗಳು ವಿಜೃಂಭಿಸುತ್ತವೆ. ಎಸ್

ಕಾಸರಗೋಡು: ಸನ್‌ಡ್ರೋಪ್ಸ್ ಸಂಸ್ಥೆಯ ಕಂಪ್ಲೀಟ್ ಸೋಲಾರ್ ಆಂಡ್ ವಾಟರ್ ಸೊಲ್ಯೂಶನ್ಸ್ ಶುಭಾರಂಭ

ಕಾಸರಗೋಡಿನ ಶಾಂತಿನಗರದಲ್ಲಿ ಸನ್‌ಡ್ರೋಪ್ಸ್ ಸಂಸ್ಥೆಯ ಕಂಪ್ಲೀಟ್ ಸೋಲಾರ್ ಆಂಡ್ ವಾಟರ್ ಸೊಲ್ಯೂಶನ್ಸ್ ಶುಭಾರಂಭಗೊಂಡಿತು. ಸಂಸ್ಥೆಯ  ಮಾಲಕರಾದ ಅಜಯ್ ರೈ ಅವರ ತಾಯಿ, ನಿವೃತ್ತ ಮುಖ್ಯೋಪಾದ್ಯಾಯಿನಿ ವಿಮಲ ರೈ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ನಂತರ ಪೂಜಾ ಕಾರ್ಯಕ್ರಮಗಳು ನಡೆದವು. ಉದ್ಘಾಟನಾ ಕಾರ್ಯಕ್ರಮದಲ್ಲಿ ಅಜಯ್ ರೈ ಅವರ ಹೆತ್ತವರು, ಸ್ನೇಹಿತರು , ಹಿತೈಷಿಗಳು ಪಾಲ್ಗೊಂಡಿದ್ದರು. ಸನ್‌ಡ್ರೋಪ್ಸ್ ಕಂಪ್ಲೀಟ್ ಸೋಲಾರ್ ಆಂಡ್ ವಾಟರ್

ಕಾಸರಗೋಡು : ಸನ್‍ಡ್ರೋಪ್ಸ್ ಕಂಪ್ಲೀಟ್ ಸೋಲಾರ್ ಆಂಡ್ ವಾಟರ್ ಮಳಿಗೆ ಶುಭಾರಂಭ

ಕಾಸರಗೋಡಿನ ಶಾಂತಿನಗರದಲ್ಲಿ ಸನ್‌ಡ್ರೋಪ್ಸ್ ಸಂಸ್ಥೆಯ ಕಂಪ್ಲೀಟ್ ಸೋಲಾರ್ ಆಂಡ್ ವಾಟರ್ ಸೊಲ್ಯೂಶನ್ಸ್ ಶುಭಾರಂಭಗೊಂಡಿತು.ಸಂಸ್ಥೆಯ ಮಾಲಕರಾದ ಅಜಯ್ ರೈ ಅವರ ತಾಯಿ, ನಿವೃತ್ತ ಮುಖ್ಯೋಪಾದ್ಯಾಯಿನಿ ವಿಮಲ ರೈ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ನಂತರ ಪೂಜಾ ಕಾರ್ಯಕ್ರಮಗಳು ನಡೆದವು.ಉದ್ಘಾಟನಾ ಕಾರ್ಯಕ್ರಮದಲ್ಲಿ ಅಜಯ್ ರೈ ಅವರ ಹೆತ್ತವರು, ಸ್ನೇಹಿತರು , ಹಿತೈಷಿಗಳು ಪಾಲ್ಗೊಂಡಿದ್ದರು. ಸನ್‌ಡ್ರೋಪ್ಸ್ ಕಂಪ್ಲೀಟ್ ಸೋಲಾರ್ ಆಂಡ್ ವಾಟರ್

ಕಾಪು ಕ್ಷೇತ್ರದಲ್ಲಿ ಸುಸಜ್ಜಿತ ಗೋ ರುದ್ರಭೂಮಿ: ಗುರ್ಮೆ ಸುರೇಶ್ ಶೆಟ್ಟಿ ಭರವಸೆ

ಗೋ ಪ್ರೇಮಿ ಆಗಿರುವ ಗುರ್ಮೆ ಈಗಾಗಲೇ ಗೋ ವಿಹಾರಧಾಮ ಸ್ಥಾಪಿಸಿ ನೂರಾರು ಗೋವುಗಳನ್ನು ಸಾಕುತ್ತಿದ್ದಾರೆ. ಅವರೀಗ ತಮ್ಮ ಪ್ರಣಾಳಿಕೆಯಲ್ಲಿ ಗೋವುಗಳಿಗೆ ಗೌರವಯುತ ಅಂತ್ಯಸಂಸ್ಕಾರಕ್ಕಾಗಿ ಸುಸಜ್ಜಿತ ರುದ್ರಭೂಮಿ ನಿರ್ಮಾಣ ಮಾಡುವುದಾಗಿ ವಚನ ನೀಡಿದ್ದಾರೆ.ಇದಕ್ಕೆ ತಮಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಪ್ರೇರಣೆ ಎಂದು ಹೇಳಿರುವ ಅವರು  ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ನೀಡಲಾಗಿರುವ ಉನ್ನತ ಮತ್ತು ಪೂಜ್ಯ ಸ್ಥಾನಮಾನವನ್ನು ಅನುಸರಿಸಿ ತಾವು ಈ ಕಾರ್ಯಕ್ಕೆ

ಕಡಬ: ಮದ್ಯ ಮುಕ್ತ ಮತದಾನದ ಸಂಕಲ್ಪ ಗ್ರಾಮಾಭಿವೃಧ್ಧಿ ಯೋಜನೆಯ ಧ್ಶೇಯ: ರವಿಪ್ರಸಾದ್ ಆಲಾಜೆ

 ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಕಡಬ ವಲಯ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಮದ್ಯ ಮುಕ್ತ ಮತದಾನ ದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕುರಿತು ದೊಡ್ಡಕೊಪ್ಪ ಒಕ್ಕೂಟದ ಸದಸ್ಶರಿಗೆ ತಿಳುವಳಿಕೆ ನೀಡಿ ಕರಪತ್ರ ಹಂಚಲಾಯಿತು. ವಿಧಾನ ಸಭಾ ಚುನಾವಣಾ ವೇಳೆ ಮದ್ಯಪಾನದ ಆಮಿಷಕ್ಕೆ ಒಳಗಾಗಿ ಮತದಾನವನ್ನು ಮಾಡುವುದು ಹಾಗೂ ಮದ್ಯ ಪಾನದ ಆಸೆಯನ್ನು ತೋರಿಸಿ ಮತಕೇಳುವುದು ಇವೆರಡೂ ಸಮಾಜ ಘಾತುಕ ಚಟುವಟಿಕೆಗಳೇ ಆಗಿದ್ದು, ಇಂತಹ