ಜೈನ ಸಂಪ್ರದಾಯದಂತೆ, ಸೂರ್ಯಾಸ್ತಕ್ಕೂ ಮುನ್ನವೇ ಗುರುವಾರ ಸಂಜೆ 6.05ಕ್ಕೆ ಬೆಟ್ಟದ ತಪ್ಪಲಿನಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಂತ್ಯಕ್ರಿಯೆ ನಡೆಯಿತು. ಮೂರು ಕುಶಾಲು ತೋಪುಗಳನ್ನು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವವನ್ನು ಸಲ್ಲಿಸಲಾಯಿತು. ಸಂಜೆಯ ವೇಳೆಗೆ ಚಾವುಂಡರಾಯ ಮಂಟಪದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ನಂತರ ನಮೋಕಾರ
ಬಡ ರೋಗಿಗಳಿಗೆ ಅನುಕೂಲವಾಗಲೆಂದು ಸುಮಾರು ಎಂಟು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾರ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ಕರ್ತವ್ಯ ಲೋಪದ ಆರೋಪ ಕೇಳಿ ಬಂದಿದೆ. ತುಂಬು ಗರ್ಭಿಣಿಯೊಬ್ಬರು ಸರಕಾರಿ ಆಸ್ಪತ್ರೆಗೆ ಬಂದರು ಸಕಾಲದಲ್ಲಿ ವೈದ್ಯರ ನೆರವು ಸಿಗದೆ ಮಂಗಳೂರಿನಲ್ಲಿ ಮೃತಪಟ್ಟಿದ್ದು ಇದಕ್ಕೆ ಕಾರ್ಕಳ ವೈದ್ಯಾಧಿಕಾರಿಗಳ ನಿರ್ಲಕ್ಷ ಹಾಗೂ ಕರ್ತವ್ಯ ಲೋಪ ಕಾರಣವೆಂದು ಮಹಿಳೆಯ ಸಂಬಂಧಿಕರು ದೂರಿದ್ದಾರೆ. ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮಠದಕೆರೆ
ಸ್ವಾತಂತ್ರ್ಯ ಹೋರಾಟಗಾರ, ಅಪ್ರತಿಮ ಕ್ರಾಂತಿಕಾರಿ ಭಗತ್ ಸಿಂಗ್ ಮತ್ತಾತನ ಸಂಗಾತಿ ರಾಜ್ ಗುರು, ಸುಖದೇವರಂತಹ ಕ್ರಾಂತಿಕಾರಗಳ ಆಶಯ ಇವತ್ತಿಗೂ ಈಡೇರಲಿಲ್ಲ. ಸ್ವಾತಂತ್ರ್ಯ ಅಂದರೆ ಕೇವಲ ಯಜಮಾನರ ಬದಲಾವಣೆಯಲ್ಲ ಬದಲಾಗಿ ಶೋಷಣೆರಹಿತ ಸಮಾಜ ಕಟ್ಟುವುದು ಭಗತ್ ಸಿಂಗರ ಕನಸಾಗಿತ್ತು ಎಂದು ಡಿವೈಎಫ್ಐ ದ.ಕ ಜಿಲ್ಲಾ ಮುಖಂಡರಾದ ಶ್ರೀನಾಥ್ ಕುಲಾಲ್ ಇಂದು 23-3-2023 ಡಿವೈಎಫ್ಐ ಮಂಗಳೂರು ನಗರ ಸಮಿತಿ ಭಗತ್ ಸಿಂಗರ ಹುತಾತ್ಮ ದಿನದ ಅಂಗವಾಗಿ ನಿರುದ್ಯೋಗದ ವಿರುದ್ಧ ಸೌಹಾರ್ದ
ದಕ್ಷಿಣಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಕಚೇರಿಯಲ್ಲಿ ಶಹೀದ್ ಭಗತ್ ಸಿಂಗ್ ಹುತಾತ್ಮ ದಿನದ ಸ್ಮರಣೆ ಕಾರ್ಯಕ್ರಮ ನಡೆಯಿತು.ಸಂಘದ ಗೌರವಧ್ಯಕ್ಷ ಬಿ.ಕೆ ಇಮ್ತಿಯಾಝ್, ಅಧ್ಯಕ್ಷರಾದ ಮೊಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಮುಖಂಡರಾದ ಆಸೀಫ್ ಬಾವ ಉರುಮನೆ, ಶ್ರೀಧರ್, ನೌಷಾದ್ ಉಳ್ಳಾಲ, ಇಸ್ಮಾಯಿಲ್ ಉಳ್ಳಾಲ, ರಹಿಮಾನ್ ಅಡ್ಯಾರ್, ಆದಂ ಬಜಾಲ್, ರಿಯಾಜ್ ಎಲ್ಯರ್ ಪದವು, ವಿಲ್ಲಿ ವಿಲ್ಸನ್ ಮುಂತಾದವರು ಉಪಸ್ಥಿತರಿದ್ದರು.
ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ಸ್ಪರ್ಧಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಯುವ ರೈತ ಘಟಕ – ರಾಜ್ಯ ಸಂಚಾಲಕ ಮತ್ತು ಜಿಲ್ಲಾಧ್ಯಕ್ಷ – ಆದಿತ್ಯ ಕೊಲ್ಲಾಜೆ ಮತ್ತು ಅವರ ತಂಡ ಬಜಿರೆ, ಗ್ರಾಮಕ್ಕೆ ಸಹಿ ಅಭಿಯಾನ ಮತ್ತು ಜನರ ಸಮಸ್ಯೆಗಳನ್ನು ಅರಿಯಲು ನಡೆಸಿದ್ದರು. ಗ್ರಾಮಕ್ಕೆ ಭೇಟಿ ನೀಡಿದ ಗ್ರಾಮಸ್ಥರು, ಕಳೆದ 5 ವರ್ಷಗಳಿಂದ ಹಲವೆಡೆ ನೀರಿಲ್ಲದೆ, ಕೆಲವೆಡೆ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ ಎಂದು ದೂರಿದರು. ಇದಲ್ಲದೇ, ಇಲ್ಲಿನ ಜನರು ಹಿಂದಿನ
ಸ್ವಾತಂತ್ರ್ಯ ಚಳುವಳಿಯ ಧ್ರುವತಾರೆಗಳಾದ ಶಹೀದ್ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳಾದ ರಾಜ್ ಗುರು, ಸುಖದೇವ್ ಅವರು ಬ್ರಿಟಿಷರ ನೇಣುಗಂಬಕ್ಕೆ ನಗು ನಗುತ್ತಲೇ ಏರಿದ ಹುತಾತ್ಮರಾದ ಕ್ರಾಂತಿಕಾರಿಗಳ ಬಲಿದಾನವನ್ನು ನೆನಪಿಸಿ ಡಿವೈಎಫ್ಐ ಸುರತ್ಕಲ್ ಘಟಕದ ಆಶ್ರಯದಲ್ಲಿ ಕಾನ ಜಂಕ್ಷನ್ ಬಳಿ ಕ್ಯಾಂಡಲ್ ದೀಪ ಬೆಳಗಿ ಹುತಾತ್ಮರಾದ ಧೀರ ಸಂಗಾತಿಗಳಿಗೆ ಕೆಂಪು ವಂದನೆ ಸಲ್ಲಿಸಲಾಯಿತು.ಈ ಸಂಧರ್ಭದಲ್ಲಿ ಭಾಗವಹಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್
ಉಳ್ಳಾಲ: ರೈತರ ತಾಳ್ಮೆಯನ್ನು ಪರೀಕ್ಷಿಸುವ ಕೆಲಸ ಉಳ್ಳಾಲದಲ್ಲಿ ಆಗುತ್ತಿದೆ, ಬಡ ರೈತರ ಕುಮ್ಕಿ ಜಾಗದ ಹಕ್ಕನ್ನು ಒತ್ತಾಯಪೂರ್ವಕವಾಗಿ ಕಸಿಯಲಾಗುತ್ತಿದೆ. ಈ ನಿಟ್ಟಿನಲ್ಲಿ ಉಳ್ಳಾಲದ ರೈತರು ಒಗ್ಗಟ್ಟಾಗಿ ತಮ್ಮ ಹಕ್ಕುಗಳನ್ನು ಪಡೆಯುವ ಹೋರಾಟಕ್ಕೆ ಮುಂದಾಗಬೇಕಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಹೇಳಿದರು. ಅವರು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉಳ್ಳಾಲ ತಾಲೂಕು ಘಟಕದ ವತಿಯಿಂದ ಸರಕಾರದ ರೈತ ವಿರೋಧಿ ಧೋರಣೆ ವಿರೋಧಿಸಿ
ವಿಟ್ಲ ತ್ರಿಕಾಲ ಪೂಜಾ ಸಮಿತಿ ವತಿಯಿಂದ ವಿಟ್ಲದ ಅರಮನೆಯಲ್ಲಿ ಏಪ್ರಿಲ್ 11 ರಂದು ನಡೆಯಲಿರುವ ತ್ರಿಕಾಲ ಪೂಜೆಯ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ವಿಟ್ಲ ಅರಮನೆಯಲ್ಲಿ ನಡೆಯಿತು. ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಏಪ್ರಿಲ್ 11 ರಂದು ವಿಟ್ಲ ಸೀಮೆಯ ಡೊಂಬ ಹೆಗ್ಗಡೆ ಮನೆತನದ ಅರಮನೆಯಲ್ಲಿ ಶ್ರೀದೇವಿಯ ಪ್ರೀತ್ಯರ್ಥವಾಗಿ ಸಮಸ್ತ ಸಮಾಜದ ಒಳಿತಿಗಾಗಿ ಅರಮನೆಯ ಮಠದಲ್ಲಿ ಶ್ರೀದೇವಿಗೆ ತ್ರಿಕಾಲ ಪೂಜೆ ನಡೆಯಲಿದೆ.
ಕಾಪು ಪುರಸಭೆ ಘನತ್ಯಾಜ್ಯ ಘಟಕದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಪ್ಲಾಸ್ಟಿಕ್ ತ್ಯಾಜ್ಯ ದ ದುರ್ನಾತ ಪರಿಸರವೆಲ್ಲಾ ಪಸರಿಸಿದ್ದು ಜನ ರೋಗ ಭೀತಿಯ ಆತಂಕದಲ್ಲಿದ್ದಾರೆ.ಮೇಲ್ನೋಟಕ್ಕೆ ವಿದ್ಯುತ್ ಅವಘಢದಿಂದ ಬೆಂಕಿ ಹತ್ತಿಕೊಂಡಿರ ಬಹುದೆಂದು ಅಂದಾಜಿಸಲಾಗುತ್ತಿದೆ ಯಾದರೂ. ಮಾರಿಪೂಜೆಯ ಹಿನ್ನಲೆಯಲ್ಲಿ ಬಾರೀ ತ್ಯಾಜ್ಯಗಳು ಶೇಖರಣೆ ಗೊಳ್ಳುವ ಆತಂಕವಿದ್ದು, ಉದ್ದೇಶ ಪೂರ್ವಕವಾಗಿಯೇ ಯಾರೋ ಬೆಂಕಿ ಹಾಕಿದ್ದಾರೆಂಬ ಸಂಶಯ ಜನ ವ್ಯಕ್ತ ಪಡಿಸುತ್ತಿದ್ದಾರೆ. ಬೆಂಕಿಯ
ಉಳ್ಳಾಲ: ವೈದ್ಯಕೀಯ ಕಾಲೇಜು ಜೊತೆಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯೊಂದಿಗೆ ಕೇರಳ ಗಡಿಭಾಗದ ನರಿಂಗಾನ ಗ್ರಾಮ ಸಾಕಷ್ಟು ಅಭಿವೃದ್ಧಿಯನ್ನು ಶಾಸಕರ ಮುತುವರ್ಜಿಯೊಂದಿಗೆ ನಡೆಯುತ್ತಿದ್ದು, ಶೀಘ್ರವೇ ತುಳು ಗ್ರಾಮ ಸ್ಥಾಪನೆಯೊಂದಿಗೆ ಇತಿಹಾಸದ ಪುಟಗಳಲ್ಲಿ ಗ್ರಾಮ ಅಚ್ಚಳಿಯದೆ ನೆಲೆ ನಿಲ್ಲಲಿದೆ ಎಂದು ಜಿ.ಪಂ ಮಾಜಿ ಸದಸ್ಯೆ ಮಮತಾ ಡಿ.ಯಸ್ ಗಟ್ಟಿ ಹೇಳಿದ್ದಾರೆ. ಅವರು ನರಿಂಗಾನ ಗ್ರಾಮದ ನೆತ್ತಿಲಕೋಡಿ ರಸ್ತೆ ಕಾಂಕ್ರೀಟಿಕರಣದ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.ಶಾಸಕರ




























