Home Posts tagged V4News (Page 590)

ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ಕಲಾಸ್ತಕರ ಬಳಗ, ಕೊಡಿಯಾಲ್ ಬೈಲ್ ಮಂಗಳೂರು : ‘ಕೃಷ್ಣ ಗಾರುಡಿ’ ಮತ್ತು ‘ಜಾಂಬವತಿ’ ಎಂಬ ಕಥಾನಕ ಪ್ರದರ್ಶನ

ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ಕಲಾಸ್ತಕರ ಬಳಗ, ಕೊಡಿಯಾಲ್ ಬೈಲ್ ಮಂಗಳೂರು ಇವರ ಆಶ್ರಯದಲ್ಲಿ ಶ್ರೀಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನ ಮತ್ತು ರಂಗಸ್ಥಳ ಮಂಗಳೂರು ಇವರ ಪ್ರೊತ್ಸಾಹದೊಂದಿಗೆ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಇದೇ ಬರುವ ಜನವರಿ 22 ರಂದು ಸಂಜೆ 4 ರಿಂದ ರಾತ್ರಿ 10 ರವರೆಗೆ ಬಡಗು ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳವಾಗಿರುವ

ರೆನಾಲ್ಟ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ; ಗ್ರಾಹಕರಿಗೆ ಆಫರ್ ಗಳ ಸುರಿಮಳೆ

ನೀವು ಏನಾದ್ರೂ ಕಾರು ಖರೀದಿ ಮಾಡುವ ಪ್ಲಾನ್‍ನಲ್ಲಿದ್ದೀರಾ…. ಹಾಗಾದ್ರೆ ನಿಮಗೆ ರೆನಾಲ್ಟ್ ಒಳ್ಳೆಯ ಆಫರ್ ಕೊಡ್ತಾ ಇದೆ. ಈಗಾಗಲೇ ಹಲವಾರು ಆಫರ್‍ಗಳನ್ನ ನೀಡುತ್ತಾ ಬಂದಿರುವ ರೆನೋ ಮಂಗಳೂರು , ಇದೀಗ ಮತ್ತೊಮ್ಮೆ ಗ್ರಾಹಕರಿಗೆ ಆಫರ್ ಸುರಿಮಳೆ ನೀಡ್ತಾ ಇದೆ.ರೆನ್ಟಾಲ್ ಗ್ರಾಹಕರ ಅಚ್ಚುಮೆಚ್ಚಿನ ಕಾರು.. ಹೊಸ ವರ್ಷದ ಪ್ರಯುಕ್ತ ಗ್ರಾಹಕರಿಗೆ ರೆನಾಲ್ಟ್ ಭರ್ಜರಿ ಆಫರ್‍ಗಳನ್ನು ನೀಡಲು ಸಜ್ಜಾಗಿದೆ. ರೆನಾಲ್ಟ್ ಕಾರಿನ ಮೇಲೆ ಡಿಸ್ಕೌಂಟ್

ಮುದ್ರಣಕ್ಷೇತ್ರವು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗ – ಶೇಖರ್ ಟಿ

“ಮುದ್ರಣ ಕ್ಷೇತ್ರದಲ್ಲಿನ ಕಾರ್ಯ ಎರಡು ಮೂರು ದಿನಕ್ಕೆ ಸೀಮಿತವಾದದ್ದಲ್ಲ ನಿರಂತರ ಕೆಲಸವನ್ನು ಒಳಗೊಂಡಿದ್ದು ಜನರ ನಿರೀಕ್ಷೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುವುದು ಅತಿ ಮುಖ್ಯವಾಗುತ್ತದೆ “ಎಂದು ಉಜಿರೆಯ ಮಂಜುಶ್ರೀ ಪ್ರಿಂಟಿಂಗ್ ಪ್ರೆಸ್ ನ ವ್ಯವಸ್ಥಾಪಕ ಶೇಖರ್ ಟಿ ಹೇಳಿದರು.       ಉಜಿರೆ ಶ್ರೀ ಧ ಮಂ ಕಾಲೇಜಿನ ಕನ್ನಡ ವಿಭಾಗವು ಆಯೋಜಿಸಿದ “ಮುದ್ರಣ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು” ಎಂಬ ವಿಷಯದ ಕುರಿತಾದ

ಐತಿಹಾಸಿಕ ಪರಂಪರೆಯನ್ನು ಉಳಿಸಿದರೆ ಮಾತ್ರ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ: ಡಾ. ದಿವಾಕರ್ ಕೆ.

ಉಜಿರೆ: ನಮ್ಮ ಪರಂಪರೆ ಶ್ರೇಷ್ಠ ಇತಿಹಾಸದ ಸಂರಕ್ಷಣೆ ಅತ್ಯಗತ್ಯ. ವಿದ್ಯಾರ್ಥಿಗಳು ಈಗಿನಿಂದಲೇ ಈ ದಿಶೆಯಲ್ಲಿ ಜಾಗೃತರಾಗಿರಬೇಕೆಂದು ಮುಖ್ಯ ಅತಿಥಿಗಳಾದ ಡಾ. ದಿವಾಕರ್ ಕೆ ರವರು ತಿಳಿಸಿದರು.         ಇತ್ತೀಚೆಗೆ ಉಜಿರೆ ಎಸ್ ಡಿ ಎಂ. ಪದವಿ ಕಾಲೇಜಿನಲ್ಲಿ “ಐತಿಹಾಸಿಕ ಪರಂಪರೆ ಉಳಿಸಿ” ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭವು ನೆರವೇರಿತು. ಇದರ ಅಭ್ಯಾಗತರಾಗಿ ಆಗಮಿಸಿದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.

ಬೆಂಗಳೂರಿನ ಚಿಕ್ಕಬಳ್ಳಾಪುರದಲ್ಲಿ 112 ಅಡಿಯ ಆದಿಯೋಗಿಯ ಮೂರ್ತಿ ಅನಾವರಣ

ಯೋಗದ ಮೂಲವಾದ ಆದಿಯೋಗಿಯ 112 ಅಡಿ ಮೂರ್ತಿಯನ್ನು ಬೆಂಗಳೂರಿನ ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರುಗಳ ಸಮ್ಮುಖದಲ್ಲಿ ಭಾನುವಾರ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬೊಮ್ಮಾಯಿ, “ನಾನು ಕೊಯಮತ್ತೂರಿಗೆ ಹೋಗಿದ್ದೇನೆ. ಆದಿಯೋಗಿ ಬಹಳ ಸಮಯದಿಂದ ಜನರನ್ನು ಪ್ರೇರೇಪಿಸಿದ್ದಾರೆ. ಕೆಲವು ಸೆಕೆಂಡುಗಳ ಕಾಲ ಆದಿಯೋಗಿಯನ್ನು ನೋಡಿ ನಾವು ಅನೇಕ ವಿಷಯಗಳನ್ನು

ಭಜಕರ ಹಾಗೂ ಹಿಂದೂ ಸಂಘಟನೆಗಳ ನಿಂದನೆ ಆರೋಪ, ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅಮಾನತು

ಭಜಕರ ಹಾಗೂ ಹಿಂದೂ ಸಂಘಟನೆಗಳ ನಿಂದನೆ ಹಾಗೂ ಗ್ರಾಮ ಸಭೆಯಲ್ಲಿ ಉಡಾಫೆ ಉತ್ತರ ಆರೋಪ – ಪುತ್ತೂರು ಶಾಸಕ ಸಂಜೀವ ಮಠಂದೂರು ಶಿಫಾರಸ್ಸಿನ ಮೆರೆಗೆ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅಮಾನತು. ಗ್ರಾಮ ಸಭೆಯಲ್ಲಿ ಉಡಾಫೆ ಉತ್ತರ, ಸಾಮಾಜಿಕ ಜಾಲತಾಣದಲ್ಲಿ ಭಜಕರ ನಿಂದನೆ ಹಾಗೂ ಹಿಂದೂ ಸಂಘಟನೆಯನ್ನು ಗುರಿಯಾಗಿಸಿ ಪೋಸ್ಟ್ ಹಾಕುತ್ತಿದ್ದ ಆರೋಪ ಎದುರಿಸುತಿದ್ದ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಶಿಫಾರಸ್ಸಿನ ಮೆರೆಗೆ

ಬಿಜೆಪಿ ಯುವಮೋರ್ಚಾ ದಕ್ಷಿಣ ಮಂಡಲದ ಪದಾಧಿಕಾರಿಗಳ ಸಭೆ

ಬಿಜೆಪಿ ಯುವಮೋರ್ಚಾ ದಕ್ಷಿಣ ಮಂಡಲದ ಪದಾಧಿಕಾರಿಗಳ ಸಭೆಯು ಬಿಜೆಪಿ ಯುವಮೋರ್ಚಾ ದಕ್ಷಿಣ ಮಂಡಲದ ಅಧ್ಯಕ್ಷರಾದ ಸಚಿನ್ ರಾಜ್ ರೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಬಿಜೆಪಿ ಯುವಮೋರ್ಚಾ ದಕ್ಷಿಣ ಮಂಡಲದ ಹೊಸ ಸದಸ್ಯರಾಗಿ ಕಾರ್ತಿಕ್, ಆಶೀಶ್, ಆಕಾಶ್, ಅಕ್ಷಯ್ ಇವರನ್ನು ಮಂಡಲದ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿಯವರು ಪಕ್ಷದ ಶಾಲು ಹೊದಿಸಿ ಸ್ವಾಗತಿಸಿದರು. ನಂತರ ಮಾತಾನಾಡಿದ ಅವರು ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಯುವಮೋರ್ಚಾದ

ದೇಶವನ್ನು ಅಭ್ಯುದಯದ ಪಥದಲ್ಲಿ ಮುನ್ನಡೆಸಲು ಯುವ ಸಮೂಹದಿಂದ ಸಾಧ್ಯ: ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್

ಧಾರವಾಡ, ಜ, 16; ಭಾರತ ಯುವ ಸಮೂಹದ ದೇಶವಾಗಿದ್ದು, ಯುವ ಜನಾಂಗವೇ ಭಾರತದ ಭವಿಷ್ಯ. ದೇಶವನ್ನು ಅಭ್ಯುದಯದ ಪಥದಲ್ಲಿ ಕೊಂಡೊಯ್ದು, ಉಜ್ವಲಗೊಳಿಸುವ ಸಾಮರ್ಥ್ಯ ಯುವ ಜನರ ಕೈಯಲ್ಲಿದೆ ಎಂದು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ. ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ 26 ನೇ ರಾಷ್ಟ್ರೀಯ ಯುವಜನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯುವ ಜನಾಂಗ ಉತ್ತಮವಾಗಿ ಕೆಲಸ ಮಾಡಿದರೆ ಭಾರತ ಇನ್ನಷ್ಟು ಉತ್ತಮ ಸ್ಥಾನಕ್ಕೆ

ಬೈತುರ್ಲಿ : 32 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಭೂಮಿಪೂಜೆ

ನಗರ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ವಾರ್ಡುಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ಸಾರ್ವಜನಿಕರ ಬೇಡಿಕೆಯ ಕಾಮಗಾರಿಗಳಿಗೆ ನನ್ನ ಅವಧಿಯಲ್ಲಿ ದಾಖಲೆ ಪ್ರಮಾಣದ ಅನುದಾನ ಬಿಡುಗಡೆಗೊಳಿಸಲಾಗಿದೆ. ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೆ ಸಮಾನವಾಗಿ ಅನುದಾನ ಬಿಡುಗಡೆಗೊಳಿಸಿದ್ದೇನೆ ಎಂದು ಶಾಸಕ ಕಾಮತ್ ಹೇಳಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಪದವಿಪೂರ್ವ ವಾರ್ಡಿನ ಬೈತುರ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ 32 ಲಕ್ಷ ರೂಪಾಯಿ ವೆಚ್ಚದಲ್ಲಿ

ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ನೂತನ ಠಾಣಾ ಕಟ್ಟಡ ನಿರ್ಮಾಣಕ್ಕೆ ಸಚಿವ ಎಸ್. ಅಂಗಾರರಿಂದ ಶಂಕುಸ್ಥಾಪನೆ

ಕಡಬ : ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ನೂತನ ಠಾಣಾ ಕಟ್ಟಡ ನಿರ್ಮಾಣಕ್ಕೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಶಂಕುಸ್ಥಾಪನೆ ನೆರವೇರಿಸಿದರು. ಕರ್ನಾಟಕ ರಾಜ್ಯ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯ 1.20 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶಿ ಭಗವಾನ್ ಸೋಣವಾಣೆ, ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ್, ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಎಸೈ ಮಂಜುನಾಥ್,