Home Posts tagged V4News (Page 623)

ಡಿ.17ರಂದು ಬೆಳ್ತಂಗಡಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ

ಇದೇ ತಿಂಗಳ 17 ರಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೆಳ್ತಂಗಡಿ ಗೆ ಆಗಮಿಸಲಿದ್ದಾರೆ ಎಂದು ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರು ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಮಾದ್ಯಮದ ಜೊತೆ ಮಾತನಾಡಿ ಈ ತಿಂಗಳ 17ರಂದು ವಸಂತ ವಿನ್ಯಾಸ ಪುಸ್ತಕ ಬಿಡುಗಡೆ ಗೊಳಿಸಿ ನಂತರ ಕಾಂಗ್ರೆಸ್ ವತಿಯಿಂದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಉದ್ಘಾಟನೆ ಮಾಡಲಿದ್ದಾರೆ

ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತಾರೆ : ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಎಚ್ಚರಿಕೆ

ಕುಂದಾಪುರ : ಪಕ್ಷದ ಟಿಕೆಟ್ ಯಾರಿಗೆ ನೀಡಬೇಕು ಎನ್ನುವ ತೀರ್ಮಾನವನ್ನು ಪಕ್ಷ ಹಾಗೂ ವರಿಷ್ಠರು ತೀರ್ಮಾನಿಸಲಿದ್ದಾರೆ. ಪ್ರತಿ ಕಾರ್ಯಕರ್ತನಿಗೂ ಟಿಕೆಟ್ ಕೇಳುವ ಅವಕಾಶ ಇದೆ. ಆದರೆ ಎಲ್ಲಿ, ಯಾರನ್ನ ಕೇಳಬೇಕು ಅಲ್ಲಿಯೇ ಕೇಳಬೇಕೇ ಹೊರತು ನನಗೆ ಟಿಕೆಟ್ ಆಗಿದೆ ಎಂದು ಗೊಂದಲ ನಿರ್ಮಾಣ ಮಾಡುವುದು ಸರಿಯಲ್ಲ. ಪಕ್ಷದ ಹಿತಕ್ಕೆ ತೊಡಕಾಗುವ ಅನಧಿಕೃತ ಸಭೆ, ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸೋದಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್

ಜಾಂಬೂರಿಗೆ ಮೆರಗು ನೀಡಲಿರುವ ಕೃಷಿ ,ವಿಜ್ಞಾನ ಮೇಳ

ಮೂಡುಬಿದಿರೆ: ದೇಶಿಯ ಸಂಸ್ಕೃತಿಯನ್ನು ಆಳ್ವಾಸ್ ನುಡಿಸಿರಿ, ವಿರಾಸತ್ ಮುಖೇನ ಕಳೆದ ಎರಡುವರೆ ದಶಕಗಳಲ್ಲಿ ಸಾದರಪಡಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಈ ಬಾರಿ ಒಂದು ವಾರಗಳ ಅಂತಾರಾಷ್ಟ್ರೀಯ ಸ್ಕೌಟ್‍ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯನ್ನು ಆಯೋಜಿಸುತ್ತಿದೆ. ಈ ಬಾರಿ ಜಾಂಬೂರಿಗೆ ವಿಶೇಷವಾಗಿ ಕೃಷಿ ಮತ್ತು ವಿಜ್ಞಾನ ಮೇಳಗಳು ವಿಶೇಷ ಮೆರುಗು ನೀಡಲಿದೆ. ಕೃಷಿ ಮಹತ್ವವನ್ನು ಬಿಂಬಿಸುವ ನಿಟ್ಟಿನಲ್ಲಿ ಜಾಂಬೂರಿಯಂದು ಆಳ್ವಾಸ್ ಆವರಣದ ಸುಮಾರು 12 ಎಕರೆ

ಆಟೋ ಮತ್ತು ಸ್ಕೂಟರ್ ಢಿಕ್ಕಿ-ಪ್ರಗತಿಪರ ಕೃಷಿಕ ದಾರುಣ ಅಂತ್ಯ – belthangady

ಬೆಳ್ತಂಗಡಿ: ಆಟೋ ಮತ್ತು ಸ್ಕೂಟರ್ ಪರಸ್ಪರ ಢಿಕ್ಕಿ ಹೊಡೆದು ಪ್ರಗತಿಪರ ಕೃಷಿಕರೋರ್ವರು ಮೃತಪಟ್ಟ ಘಟನೆ ಬೆಳ್ತಂಗಡಿಯ ಕಾಶಿಪಟ್ಟ ಗ್ರಾಮದಲ್ಲಿ ನಡೆದಿದೆ.ಕೊಕ್ರಾಡಿ- ಶಿರ್ತಾಡಿ ರಸ್ತೆಯ ಪೆರಂದಡ್ಕ ಎಂಬಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದ ಹಂಬಡ ನಿವಾಸಿ,ನಿತ್ಯಾನಂದ ಪೂಜಾರಿ (48) ಮೃತಪಟ್ಟ ದುರ್ದೈವಿ. ನಿತ್ಯಾನಂದ ಪೂಜಾರಿ ಅವರು ಶಿರ್ತಾಡಿ ಕಡೆಯಿಂದ ಪೆರಾಡಿಯತ್ತ ಸ್ಕೂಟರ್‌ನಲ್ಲಿ ಸಾಗುತ್ತಿದ್ದರು. ವಿರುದ್ಧ

ಮಂಗಳೂರು: ಮ್ಯಾಂಡಸ್ ಚಂಡಮಾರುತ – ಮೀನುಗಾರಿಕೆ ದೋಣಿಗಳು ದಡ ಸೇರಲು ಸೂಚನೆ

ಡಿ.16ರವರೆಗೆ ಮ್ಯಾಂಡಸ್ ಚಂಡಮಾರುತದಿಂದ ಅರಬ್ಬಿ ಸಮುದ್ರವು ಪ್ರಕ್ಷುಬ್ಧವಾಗಿರುತ್ತದೆ, ಈ ವೇಳೆ ಸಂಭವಿಸುವ ಅನಾಹುತವನ್ನು ತಡೆಗಟ್ಟಲು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರಿಕೆ ದೋಣಿಗಳು ಕೂಡಲೇ ದಡ ಸೇರುವಂತೆ ಮೀನುಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಂಗಳೂರು ಕೋಸ್ಟ್‍ಗಾರ್ಡ್ ನೀಡಿರುವ ಹವಾಮಾನ ಮುನ್ಸೂಚನೆ ಆಧರಿಸಿ ಅವರು ಎಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿ ಡಿ.18ರಂದು ಶಕ್ತಿಸಂಗಮ

ರಾಜ್ಯ ಬಿಜೆಪಿಯ 24 ಪ್ರಕೋಷ್ಟಗಳ ರಾಜ್ಯ ಸಮಾವೇಶ ಶಕ್ತಿಸಂಗಮವು ಡಿಸೆಂಬರ್ 18ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ ಎಂದು ರಾಜ್ಯ ಸಂಚಾಲಕರಾದ ಕೆ. ಪ್ರತಾಪ ಸಿಂಹ ನಾಯಕ್ ಹೇಳಿದರು.ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಮಂಡಲ, ಜಿಲ್ಲೆ ಹಾಗೂ ರಾಜ್ಯ ಸಮಿತಿ ಸಂಚಾಲಕ, ಸಹ ಸಂಚಾಲರು, ಜಿಲ್ಲಾ ಸಂಯೋಜಕರು, ಸಂಕುಲ ಪ್ರಮುಖರು ಇದಕ್ಕೆ ಅಪೇಕ್ಷಿತರು. ದಕ್ಷಿಣ ಕನ್ನಡ ಜಿಲ್ಲೆಯಿಂದ 1,500 ಕ್ರಿಯಾಶೀಲಾ ಕಾರ್ಯಕರ್ತರು

ಮೀನುಗಾರರಿಗೆ ಬಜೆಟ್‍ನಲ್ಲಿ ಪ್ರಕಟಿಸಿದ ಯೋಜನೆ ಕಾರ್ಯಗತಗೊಂಡಿಲ್ಲ : ಐವನ್ ಡಿಸೋಜಾ

ರಾಜ್ಯ ಸರಕಾರ ಮೀನುಗಾರರಿಗಾಗಿ ಬಜೆಟ್‍ನಲ್ಲಿ ಪ್ರಕಟಿಸಿದ ಒಂದು ಯೋಜನೆಯೂ ಜಾರಿಗೆ ತರದೆ ಮೀನುಗಾರ ಸಮುದಾಯವನ್ನು ಕಡೆಗಣಿಸಿದೆ. ಈಗಾಗಲೇ ಮೀನುಗಾರ ಮುಖಂಡರು ಬೆಂಗಳೂರಿಗೆ ತೆರಳಿ ತಮ್ಮ ಸಮಸ್ಯೆಯನ್ನು ಸರಕಾರ ಮುಂದೆ ಇಟ್ಟಿದ್ದಾರೆ. ಇದಕ್ಕೆ ಸ್ಪಂದಿಸದಿದ್ದರೆ ಮೀನುಗಾರರ ಜತೆ ಸೇರಿ ಕಾಂಗ್ರೆಸ್ ಪಕ್ಷವೂ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಉಪಾಕ್ಷ ಐವನ್ ಡಿಸೋಜಾ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು: ಲಾಡ್ಜ್‌ನಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬ ಆತ್ಮಹತ್ಯೆ- Pumpwell Suicide

ಮಂಗಳೂರು: ಮಂಗಳೂರಿನ ಪಂಪ್‌ವೆಲ್ ಬಳಿ ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ಇರುವ ಖಾಸಗಿ ಲಾಡ್ಜ್‌ನಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಲಾಡ್ಜ್‌ನ 129ನೇ ನಂಬ್ರದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವ್ಯಕ್ತಿಯನ್ನು ಕೇರಳ ಕಾಸರಗೋಡಿನ ಉಪ್ಪಳದ ಚಿಪ್ಪಾರು ನಿವಾಸಿ 55ರ ಹರೆಯದ ಅಬ್ದುಲ್‌ ಕರೀಂ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಸಂಪೂರ್ಣವಾಗಿ ಬೆತ್ತಲಾಗಿ ಬಿದ್ದಿರುವುದು ನಿಗೂಢವಾಗಿದೆ. ಸಾವಿಗೆ

ಹವಾಮಾನ ವೈಪರೀತ್ಯ; ಆರೋಗ್ಯ ಇಲಾಖೆಯಿಂದ ರಾಜ್ಯದ ಜನತೆಗೆ ಮಾರ್ಗಸೂಚಿ ಪ್ರಕಟ

ಮಾಂಡೋಸ್ ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಪ್ರಮಾಣದಲ್ಲಿ ಮಳೆ, ಶೀತ ಗಾಳಿ ಮತ್ತು ಅತಿ ಕಡಿಮೆ ತಾಪಮಾನವು ವರದಿಯಾಗಿದೆ.ಚಳಿಗಾಲವೂ ಆಗಿರುವುದರಿಂದ ಎಲ್ಲ ಸಾರ್ವಜನಿಕರು ಆರೋಗ್ಯವನ್ನು ಕಾಪಾಡಿಕೊಳ್ಳಲು ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಆರೋಗ್ಯ ಇಲಾಖೆ ಸೂಚಿಸಿದೆ. ಈ ರೀತಿಯ ವಾತಾವರಣದಲ್ಲಿ ಹೆಚ್ಚಾಗಿ ಕೆಮ್ಮು, ಜ್ವರ, ನೆಗಡಿ ಕಾಣಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಚಳಿಯ ವಾತಾವರಣ ಹಿನ್ನೆಲೆ ಆರೋಗ್ಯ

ಸುಳ್ಯದಲ್ಲಿ 26ನೇ ಕನ್ನಡ ಸಾಹಿತ್ಯ ಸಮ್ಮೇಳನ

ಸುಳ್ಯ: ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮೂಡಿಸುವ ಅವಶ್ಯಕತೆ ಇದೆ.ಮಕ್ಕಳಿಗೆ ನಾವು ಸಾಹಿತ್ಯವನ್ನು ಓದುವ ಮೂಲಕ ಸಾಹಿತ್ಯವನ್ನು ಸಾಹಿತ್ಯದ ವಿಚಾರವನ್ನು ಅವರಿಗೆ ಹೇಳಬೇಕೆಂದು ಸುಳ್ಯ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೆ.ಆರ್ ಗಂಗಾಧರ ಹೇಳಿದರು. ಅವರು ಗೂನಡ್ಕ ಸಜ್ಜನ ಸಭಾಭವನದಲ್ಲಿ ನಡೆದ ಸುಳ್ಯ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ವಿಮರ್ಶಕ ವಿಜಯಶಂಕರ ಸಮ್ಮೇಳನವನ್ನು ಉದ್ಘಾಟಿಸಿದರು.