ಸಾಮಾಜಿಕವಾಗಿ ಗುರುತಿಸಿಕೊಂಡಿರುವ ಮಂಗಳೂರಿನ ಹೆಲ್ಪ್ ಲೈನ್ ಸೇವಾ ತಂಡವು ಮುಲ್ಕಿ ತಾಲೂಕಿನ ಐಕಲ ಗ್ರಾ.ಪಂ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ವಾಸಿಸುತ್ತಿದ್ದ ಬಡಕುಟುಂಬದ ಶಾಂತಿಯವರ ಅವ್ಯವಸ್ಥೆಯಲ್ಲಿದ ಮನೆಯನ್ನು ಸೇವಾ ಯೋಜನೆಯಲ್ಲಿ ವಿಶೇಷ ಮುತುವರ್ಜಿಯಲ್ಲಿ ನಿರ್ಮಿಸಿ ಕೊಟ್ಟಿದ್ದು, ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು. ನೂತನ ಗೃಹ
ದಯಾ ಕ್ರಿಯೇಷನ್ ಆರ್ಪಿಸುವ ಮೈಸೂರು ಚಾಮುಂಡೇಶ್ವರಿ ಅಮ್ಮನ ಬೆಟ್ಟದ ತಾಯಿ ಚಾಮುಂಡಿ ಕನ್ನಡ ಭಕ್ತಿ ಗೀತೆ ಪೋಸ್ಟರ್ ಬಿಡುಗಡೆಗೊಂಡಿದೆ. ಶೀಘ್ರದಲ್ಲಿ ಕನ್ನಡ ಭಕ್ತಿ ಗೀತೆ ನಿಮ್ಮ ಮುಂದೆ ಬರಲಿದೆ. ಈ ಹಾಡಿಗೆ ಸಾಹಿತ್ಯ ಗಡಿನಾಡ ಸಾಹಿತ್ಯ ಕುವರ ಬಿರುದಾಂಕಿತ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ ಸಾಹಿತ್ಯ ಬರೆದಿದ್ದಾರೆ. ತನುಷ ಎಸ್ ಕುಂದರ್ ಬ್ರಹ್ಮಾವರ ಗಾಯನ ಮತ್ತು ಬಾಲ ನಟಿ ಲಿಖಿತ ಶೇರ್ವಾನಿ ಅಭಿನಯದಲ್ಲಿ ಮೂಡಿಬರಲಿದೆ. ಈ ಹಾಡಿಗೆ ರವಿರಾಜ್ ಶೆಟ್ಟಿ. ಸಂಗೀತ
ಕರಾವಳಿಯ ಭದ್ರತೆಗೆ ಸವಾಲೊಡ್ಡುವ ಭಯೋತ್ಪಾದಕತೆಯ ವಿರುದ್ಧ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ದುರ್ಗಾ ವಾಹಿನಿ ವತಿಯಿಂದ ಜನಜಾಗೃತಿ ಅಭಿಯಾನ ಮಂಗಳೂರು ನಗರ ಹಾಗೂ ನಗರದ ಹೊರವಲಯದ ಪ್ರದೇಶಗಳಲ್ಲಿ ನಡೆಯಿತು.ಮಂಗಳೂರಿನ ಜ್ಯೋತಿ ವೃತ್ತ, ಉರ್ವಸ್ಟೋರ್, ಕಾವೂರು, ಮೂಡಬಿದ್ರೆ, ತೊಕ್ಕೊಟ್ಟು, ಗುರುಪುರ ಕೈಕಂಬ, ಸುರತ್ಕಲ್ ನಲ್ಲಿ ಅಭಿಯಾನ ನಡೆಯಿತು. ಇಸ್ಲಾಮಿಕ್ ಭಯೋತ್ಪಾದನೆ ವಿರುದ್ದ ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿದರು. ಮಂಗಳೂರಿನ ಜ್ಯೋತಿ ಬಳಿ ನಡೆದ
ಮೈಸೂರು-ಬೆಂಗಳೂರು ಕೊರಗಜ್ಜನ ಸಾನಿಧ್ಯ ಸ್ಥಾಪನೆದೈವಾರಾಧಕರಿಂದ ಕುತ್ತಾರು ಆದಿಸ್ಥಳದಲ್ಲಿ ಸಾಮೂಹಿಕ ಪ್ರಾರ್ಥನೆಉಳ್ಳಾಲ: ಮೈಸೂರು, ಬೆಂಗಳೂರು ಭಾಗಗಳಲ್ಲಿ ಕೊರಗಜ್ಜನ ಕಟ್ಟೆ ಸ್ಥಾಪಿಸಿ ಹಣದ ದಂಧೆಗೆ ಇಳಿದವರ ವಿರುದ್ಧ ಇಂದು ತುಳುನಾಡಿನ ಹಲವು ಸಂಘಟನೆಗಳ ನೇತೃತ್ವದಲ್ಲಿ ದೈವಾರಾಧಕರು ಕುತ್ತಾರು ಕೊರಗಜ್ಜನ ಆದಿತಳದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಮುನ್ನೂರು ಪಂಜಂದಾಯ ಬಂಟ ವೈದ್ಯನಾಥ ದೈವಗಳ ಮೂಲ್ಯಣ್ಣ ಬಾಲಕೃಷ್ಣ ಸಾಲ್ಯಾನ್ ಮಾತನಾಡಿ, ಕೊರಗ ತನಿಯ ಕಾಯ
ಪಡುಬಿದ್ರಿ: ಮಾನಸಿಕವಾಗಿ ನೊಂದ ವ್ಯಕ್ತಿ ನೇಣಿಗೆ ಶರಣಪತ್ನಿಯನ್ನು ಕಳೆದುಕೊಂಡ ಬಳಿಕ ಕಿನ್ನತೆ ಅನುಭವಿಸುತ್ತಿದ್ದ ವ್ಯಕ್ತಿಯೊರ್ವರು ತನ್ನ ವಾಸದ ಮನೆಯಲ್ಲೇ ನೇಣಿಗೆ ಶರಣಾದ ಘಟನೆ ಅವರಾಲು ಮಟ್ಟುವಿನಲ್ಲಿ ಘಟಿಸಿದೆ.ಮೃತ ವ್ಯಕ್ತಿ ಅವರಾಲು ಮಟ್ಟು ಕರಿಯ ಹೌಸ್ ನಿವಾಸಿ ಅಶೋಕ್ ಪೂಜಾರಿ (48), ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು ಇವರಿಗೆ ಇಬ್ಬರು ಮಕ್ಕಳು, ಪತ್ನಿ ಕಳೆದ ನಾಲ್ಕು ವರ್ಷಗಳ ಹಿಂದೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಆತ್ಮಹತ್ಯೆ
ಪತ್ನಿಯನ್ನು ಆರೋಪಿ ಪತಿ ರೀಪಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕ ಎಕ್ಕಾರು ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿರುವುದು ವರದಿಯಾಗಿದೆ. ಆರೋಪಿ ಪತಿಯ ಬಂಧನವಾಗಿದೆ. ತೆಂಕ ಎಕ್ಕಾರು ಗ್ರಾಮದ ಪಲ್ಲದಕೋಡಿ ನಿವಾಸಿ ಸರಿತಾ(35) ಕೊಲೆಯಾದ ಮಹಿಳೆ. ಆರೋಪಿ ಪತಿ ದುರ್ಗೇಶ ಎಂಬಾತ ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ಪತ್ನಿ ಸರಿತಾ ಜತೆ ಜಗಳವಾಡಿದ್ದನೆನ್ನಲಾಗಿದೆ. ಈ ವೇಳೆ ಮರದ ರೀಪಿನಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ
ನೇತ್ರಾವತಿ ಬಚಾವೋ ಆಂದೋಲನ ಸಮಿತಿ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸಮಾವೇಶವು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಶನಿವಾರ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಪ್ರಧಾನ ಸಂಚಾಲಕ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಿತ್ ಶಿವರಾಂ ರವರು ” ನಮ್ಮ ಜಿಲ್ಲೆಯ ಜೀವನದಿ ನೇತ್ರಾವತಿ ನದಿಯ ಮೇಲೆ ವ್ಯವಸ್ಥಿತವಾಗಿ ಅತ್ಯಾಚಾರ ನಡೆಯುತ್ತಿದ್ದಾಗ ಸುಮ್ಮನಿರುವುದು ಸರಿಯಲ್ಲ , ಇದರ
ಬೆಂಗಳೂರು, ನ, 26; ಭಾರತ ಜಿ-20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿಕೊಂಡಿದ್ದು, ಬರುವ ಫ್ರಬ್ರವರಿಯಲ್ಲಿ ಬೆಂಗಳೂರಿನಲ್ಲಿ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗಳ ಗೌರ್ನರ್ ಗಳ ಮಹತ್ವದ ಸಭೆ ನಡೆಯಲಿದ್ದು, ಈ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವಂತೆ ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ನವೋದ್ಯಮಗಳಿಗೆ ಸೂಚಿಸಿದ್ದಾರೆ. ಕೋರ್ ಡಿಸ್ಕವರಿ ಯುವರ್ ಕೋರ್, ವನನಂ ಹಾಗೂ ಟೆನ್ ಥೌಸಂಡ್ ಎಕೋ ಸಿಸ್ಟಮ್ ಪಾರ್ಟರ್
ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಹತ್ತನೇ ವರ್ಷದ ಪಾದಯಾತ್ರೆಗೆಇಪ್ಪತೈದು ಸಾವಿರಕ್ಕೂಅಧಿಕ ಭಕ್ತರು ಪಾಲ್ಗೊಂಡಿದ್ದರು. ಶ್ರೀ ಜನಾರ್ಧನ ಸ್ವಾಮಿದೇವಾಲಯದಿಂದಆರoಭಗೊoಡ ಪಾದಯಾತ್ರೆಗೆ ದೀಪ ಬೆಳಗಿಸುವುದರ ಮೂಲಕ ದೇವಾಲಯದ ಮುಖ್ಯಸ್ಥ ಶರತ್‌ಕೃಷ್ಣ ಪಡುವೆಟ್ನಾಯ ಚಾಲನೆ ನೀಡಿದರು. ಕೊರೋನಾಕಾರಣದಿಂದ ಸರಳವಾಗಿ ನಡೆದಿದ್ದ ಪಾದಯಾತ್ರೆ ಈ ಬಾರಿ ವಿಜೃಂಭಣೆಯಿoದ ನಡೆದಿದ್ದು ಸಾಗರೋಪಾದಿಯಲ್ಲಿಜನರು ಮಂಜುನಾಥ ಸ್ವಾಮಿಯ ಸನ್ನಿಧಿಗೆ ಭಕ್ತಿ ಭಾವದೊಂದಿಗೆ
ಎ.ಎಸ್. ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಆಶೀಕಾ ಸುವರ್ಣ ನಿರ್ಮಾಣದಲ್ಲಿ ಪ್ರಧಾನ್ ಎಂಪಿ ನಿರ್ದೇಶನದಲ್ಲಿ ತಯಾರಾದ ವಿಐಪೀಸ್ ಲಾಸ್ಟ್ ಬೆಂಚ್ ತುಳು-ಕನ್ನಡ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣಲಿದ್ದು, ಸಿನಿಮಾದ ಆಂಥಮ್ ಸಾಂಗ್ ನವೆಂಬರ್ 27ರ ಭಾನುವಾರದಂದು ಬೆಳಿಗ್ಗೆ 11.11 ನಿಮಿಷಕ್ಕೆ ಬಿಡುಗಡೆಗೊಳ್ಳಲಿದೆ. ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್‍ನಲ್ಲಿ ಸಿನಿಮಾದ ಆಂಥಮ್ ಸಾಂಗ್ ಬಿಡುಗಡೆಗೊಳ್ಳಲಿದೆ. ನಟ ಬೋಜರಾಜ ವಾಮಂಜೂರು ಈ




























