ಮೈಸೂರು-ಬೆಂಗಳೂರು ಕೊರಗಜ್ಜನ ಸಾನಿಧ್ಯ ಸ್ಥಾಪನೆ : ದೈವಾರಾಧಕರಿಂದ ಕುತ್ತಾರು ಆದಿಸ್ಥಳದಲ್ಲಿ ಸಾಮೂಹಿಕ ಪ್ರಾರ್ಥನೆ
ಮೈಸೂರು-ಬೆಂಗಳೂರು ಕೊರಗಜ್ಜನ ಸಾನಿಧ್ಯ ಸ್ಥಾಪನೆ
ದೈವಾರಾಧಕರಿಂದ ಕುತ್ತಾರು ಆದಿಸ್ಥಳದಲ್ಲಿ ಸಾಮೂಹಿಕ ಪ್ರಾರ್ಥನೆಉಳ್ಳಾಲ: ಮೈಸೂರು, ಬೆಂಗಳೂರು ಭಾಗಗಳಲ್ಲಿ ಕೊರಗಜ್ಜನ ಕಟ್ಟೆ ಸ್ಥಾಪಿಸಿ ಹಣದ ದಂಧೆಗೆ ಇಳಿದವರ ವಿರುದ್ಧ ಇಂದು ತುಳುನಾಡಿನ ಹಲವು ಸಂಘಟನೆಗಳ ನೇತೃತ್ವದಲ್ಲಿ ದೈವಾರಾಧಕರು ಕುತ್ತಾರು ಕೊರಗಜ್ಜನ ಆದಿತಳದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಮುನ್ನೂರು ಪಂಜಂದಾಯ ಬಂಟ ವೈದ್ಯನಾಥ ದೈವಗಳ ಮೂಲ್ಯಣ್ಣ ಬಾಲಕೃಷ್ಣ ಸಾಲ್ಯಾನ್ ಮಾತನಾಡಿ, ಕೊರಗ ತನಿಯ ಕಾಯ ಹೋಗಿ ಮಾಯವಾದ ಶಕ್ತಿ. ಕೊರಗಜ್ಜನಿಗೆ ಕುತ್ತಾರು ಗ್ರಾಮದ ಪಂಜಂದಾಯ ದೈವ ಅಪ್ಪಣೆ ಕೊಟ್ಟಂತೆ ಕಾಡಿನಲ್ಲಿ ಕತ್ತಲೆಯಲ್ಲಿ ನಡೆಯುವ ಕೋಲ ಊರಿನಲ್ಲಿ ಅಡುಗೆ ಮಾಡಿ ಕೊಡುವ ಪ್ರತೀತಿ.. ಈಗಲೂ ಅಗೆಲು, ಕೋಲ ಕೊರಗಜ್ಜನ ಏಳು ತಳಗಳಲ್ಲಿ ನಡೆಯುತ್ತಿದೆ ಹೊರತು ಹೊರ ಊರಿಗೆ ಕೊಂಡು ಹೋಗಿ ಕಟ್ಟುಕಟ್ಟಲೆಗಳ ಮುರಿದು ಕ್ರಮವನ್ನು ಅನುಸರಿಸುವುದು ಸರಿಯಲ್ಲ. ಕುತ್ತಾರು ಭಾಗದಲ್ಲಿರುವ ಏಳು ತಳಗಳಲ್ಲಿ ಬೀಡ, ಶರಾಬು, ಶೇಂದಿ ಹರಕೆಯನ್ನು ಇಡಬಹುದು.ಮೈಸೂರು ಮೂಲದ ನಿಮಿಷ್ ರಾಜ್ ಮೈಸೂರು ಮಾತನಾಡಿ, ಮೈಸೂರು ಆಗಲಿ ಎಲ್ಲೇ ಆಗಲಿ ತುಳುನಾಡಿನ ದೈವ ಸ್ಥಾಪನೆಯಾಗಲು ಸಾಧ್ಯವಿಲ್ಲ. ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರಿನಲ್ಲಿ ಅಜ್ಜ ಆಗಲಿ ದೈವ ಶಕ್ತಿಯಾಗಲಿ ನೆಲೆಯೂರುವುದು ಅಸಾಧ್ಯ. ತುಳುನಾಡಿನ ಮಣ್ಣಲ್ಲಿ ಮಾತ್ರ ದೈವ ಕಾರ್ಣಿಕವಿರುವುದು. ಮೈಸೂರು ಮತ್ತು ಬೆಂಗಳೂರಿನಲ್ಲಿ ತಮ್ಮ ಸ್ವಾರ್ಥಕ್ಕಾಗಿ ದೈವದ ಆಚರಣೆಯನ್ನು ವ್ಯಾವಹಾರಿಕವಾಗಿ ನಡೆಸುತ್ತಾ ಬಂದಿದ್ದಾರೆ. ಭಕ್ತರು ಮೂಢನಂಬಿಕೆಗೆ, ಕೆಲವರ ಸ್ವಾರ್ಥಕ್ಕೆ ಒಳಗಾಗದೇ ದ.ಕ ಜಿಲ್ಲೆಯಲ್ಲಿರುವ ಕುತ್ತಾರು ಆದಿತಳಕ್ಕೆ ಭೇಟಿ ನೀಡಿ ಪ್ರಾರ್ಥನೆಯನ್ನು ನೆರವೇರಿಸಿರಿ ಎಂದರು.
ಬೆಳ್ತಂಗಡಿ ದೈವಾರಾಧನೆ ಸಮಿತಿಯ ಸೂರಜ್ ಕೆ.ಬಳ್ಳಾಲ್ ಬಾಗ್ ಮಾತನಾಡಿ, ತುಳುನಾಡಿನ ದೈವಾರಾಧನೆ ಕಟ್ಟಲ್ಲಿ ಜಾತಿ ಕಟ್ಟು, 16 ಕಟ್ಟು ನಿಯಮ ಕಳ ಅನ್ನುವುದು ಇದೆ. ಕೊರಗಜ್ಜನಿಗೂ ಅದರದ್ದೇ ಆದ ಜಾತಿ ಕಟ್ಟಿನ ಕುಲ ಅನ್ನುವುದು ಇದೆ. ಆದರೆ ಕೆಲವರು ಅಜ್ಜ ಕನಸ್ಸಲ್ಲಿ ಬಂದರು, ಮೈಯಲ್ಲಿ ಆವೇಶ ಬಂತು, ಅಜ್ಜನ ಜತೆಗೆ ನಗಾಡಿದೆ ಅನ್ನುವ ಕಟ್ಟು ಕತೆಗಳನ್ನು ಕಟ್ಟಿಕೊಂಡು ಲ್ಲಲ್ಲಿ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಕೋರ್ದಬ್ಬು, ಬೆಳಟಜಂಗಡಿ, ಕೋಟಿ ಚೆನ್ನಯ್ಯ ಜಾತಿ ವರ್ಗಕ್ಕೆ ಸೇರಿದ ದೈವಗಳಿವೆ. ತುಳುನಾಡಿನ ಮೂಲದಲ್ಲಿ ಒಂದು ದೈವ ಜಾತಿಕಟ್ಟಿನಲ್ಲಿ ಜನನವಿಟ್ಟು ಮನುಷ್ಯ ರೂಪ ತಾಳಿ ಸತ್ಯ ಧರ್ಮದಲ್ಲಿ ನಡೆದು ದೈವ ರೂಪ ಪಡೆಯುವಂಥದ್ದು, ಅದು ಅಂತದ್ದೇ ಜಾತಿಕಟ್ಟಿನವರ ಮೈಯಲ್ಲಿ ಬರುವುದೇ ಹೊರತು ಬೇರೆ ಯಾರಿಗೂ ಬರುವುದಿಲ್ಲ.
ಮೈಸೂರಿನಲ್ಲಿ ಪಾರ್ಕಿಂಗ್ ಶುಲ್ಕವನ್ನು ಪಡೆದುಕೊಳ್ಳುವುದನ್ನು ಪ್ರಶ್ನಿಸಿದಾಗ ಕೊರಗಜ್ಜ ಸಾನಿಧ್ಯ ಸ್ಥಾಪನೆಗೆ ಜಾಗ ಖರೀದಿಸುವ ಉದ್ದೇಶದಿಂದ ಸಂಗ್ರಹಿಸುವ ಪ್ರತಿಕ್ರಿಯೆ ನೀಡಲಾಗುತ್ತಿದೆ. ತುಳುನಾಡಿನ ಎಲ್ಲಿಯೂ ದೈವ ಸಾನಿಧ್ಯಕ್ಕೆ ಹಣ ಕೊಟ್ಟು ಜಾಗ ಖರೀದಿಸಿರುವ ವಿಚಾರವೇ ಇಲ್ಲ. ದೈವಕ್ಕೆ ಸಾನಿಧ್ಯ ಬೇಕಾದರೆ ಅದುವೇ ಮನುಷ್ಯನಿಗೆ ತಿಳುವಳಿಕೆ ಕೊಟ್ಟು ಆತನೇ ಬಿಟ್ಟುಕೊಟ್ಟಿರುವ ಇತಿಹಾಸವಿದೆ. ಲಿಂಬೆಹಣ್ಣು ಹಿಡಿದು ದೃಷ್ಟಿ ತೆಗೆಯುವುದು, ತೆಂಗಿನ ಕಾಯಿ ಒಡೆಯುವುದು ವಿಚಾರವೇ ಇಲ್ಲ. ಗುಳಿಗನನ್ನು ನಂಬುತ್ತೇವೆ ಅನ್ನುವುದನ್ನು ಹೇಳುತ್ತಿದ್ದಾರೆ. ತುಳುನಾಡಿನ ಗಾದೆಯಲ್ಲಿ ಘಳಿಗೆ ತತ್ತುಂಢ ಗುಳಿಗೆ ಬುಡಾಯೆ ‘ ಅನ್ನುವ ಮಾತಿದೆ. ತುಳುನಾಡಿನ ದೈವವನ್ನು ತಮ್ಮ ವ್ಯವಹಾರಕ್ಕೆ ಉಪಯೋಗಿಸಿದರೆ, ಕಾಲಕ್ಕೆ ತಕ್ಕ ಉತ್ತರ ದೈವವೇ ನೀಡುತ್ತದೆ. ದೈವದ ಕೊಡಿಯಡಿಯಲ್ಲಿ ಅಪ್ಪಣೆ ಸಿಕ್ಕಲ್ಲಿ ಮಾತ್ರ ಆರಾಧನೆಯೇ ಹೊರತು ಹಣವುಂಟು, ಅಧಿಕಾರವುಂಟು, ಭಕ್ತಿಯುಂಟು ಹೇಳಿ ಆರಾಧನೆ ಸರಿಯಲ್ಲ ಎಂದರು.
ತುಳುನಾಡು ದೈವಾರಾಧನೆ ಸಂರಕ್ಷಣಾ ವೇದಿಕೆ, ಮಂಗಳೂರು ಇದರ ಭರತ್ ಬಳ್ಳಾಲ್ ಬಾಗ್ ಮಾತನಾಡಿ , ಹಾವೇರಿ, ಬಳ್ಳಾರಿ, ಹುಬ್ಬಳ್ಳಿ, ಬೆಂಗಳೂರು, ಮೈಸೂರಿನಲ್ಲಿ ಸ್ವಾರ್ಥಕ್ಕಾಗಿ ಅಜ್ಜನನ್ನು ಆರಾಧನೆ ನಡೆಸಲಾಗುತ್ತಿದೆ. 16 ಕಟ್ಟಳೆಯನ್ನು ಪಾಲಿಸಿಕೊಂಡು, ತುಳುನಾಡಿನವರಿಗೆ ಮಾತ್ರ ಆಚರಿಸಲು ಸಾಧ್ಯ. ಹೊರಜಿಲ್ಲೆಗಳಲ್ಲಿ ದೈವಿಕ ಕಲೆಯನ್ನು ಆಡಂಭರ ಮಾಡಿ ಮಾರಾಟ ಮಾಡಲಾಗುತ್ತಿದೆ. ಕೆಲ ಚಲನಚಿತ್ರಗಳು ಬಂದಿದೆ. ಅವರು ಯಾರೂ ಪ್ರತಿಕ್ರಿಯಿಸುತ್ತಿಲ್ಲ. ಹೊಸ ಚಲನಚಿತ್ರ ` ಕರಿಯಡಿತ ಕೊರಗಜ್ಜ’ ಅನ್ನುವುದು ಸಿದ್ಧವಾಗಿದೆ. ಅದರ ವಿರುದ್ಧ ದೈವ ನಿಂದನೆ ಆರೋಪದಡಿ ಪ್ರಕರಣ ದಾಖಲಿಸುತ್ತಿದ್ದೇವೆ. ತುಳುನಾಡಿನ ದೈವದ ಹೆಸರನ್ನಿಟ್ಟುಕೊಂಡು ಪೇಜ್ ಗಳನ್ನು ರಚಿಸಿಕೊಂಡು ದೈವನಿಂದನೆಗಳನ್ನು ನಿರಂತರ ಮಾಡಲಾಗುತ್ತಿದೆ. ಅವೆಲ್ಲದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಹಿಂದೆ ದೈವ ನಿಂದನೆಯಾಗುವಂತಹ ಲೇಖನಗಳು ಬಂದಿಲ್ಲ. ಆದರೆ ಮೊಬೈಲ್ ಬಂದ ನಂತರ ದೈವಾರಾಧನೆಯನ್ನು ಅವಮಾನಿಸಲಾಗುತ್ತಿದೆ. ಇವೆಲ್ಲದಕ್ಕೆ ಮೂಲಕಕಾರಣ ತುಳುವರೇ ಆಗುತ್ತಿದ್ದಾರೆ. ಮೊಬೈಲ್ ಮೂಲಕ ದಾಖಲಿಸಿ ಸಾಮಾಜಿಕ ಜಾ¯ತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಬೆಂಗಳೂರಿನ ಕರಗವನ್ನು ಯಾರೂ ಕೂಡ ಮುಟ್ಟಲು ಹೋಗುವುದಿಲ್ಲ. ಹಾಗೆಯೇ ದೈವಾರಾಧನೆ ಕೂಡಾ. ಅಜ್ಜನ ಕಟ್ಟೆಯನ್ನು ಮಾಡಿದವರು ಕೂಡಲೇ ಅದನ್ನು ನಿಲ್ಲಿಸಬೇಕಾಗಿದೆ. ಇಲ್ಲವಾದಲ್ಲಿ ಕಾನೂನು ರೀತಿಯಲ್ಲಿ ಪ್ರಕರಣ ದಾಖಲಿಸಿ ಹೋರಾಟ ಮಾಡುತ್ತೇವೆ.
ಈ ಸಂದರ್ಭಬೆಳ್ತಂಗಡಿ ದೈವಾರಾಧನಾ ಸಮಿತಿಯ ಪ್ರಭಾಕರ್ ಓಡಿಲ್ನಾಳ, ಹಿಂದೂ ಸಂರಕ್ಷಣಾ ಸಮಿತಿಯ ಕೆ.ಆರ್ ಶೆಟ್ಟಿ ಅಡ್ಯಾರ್ ಪದವು, ಚರಿತ್ ಪೂಜಾರಿ, ರೋಷನ್ ರೊನಾಲ್ಡ್ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.