Home Posts tagged #v4newskarnataka (Page 22)

ಅಧ್ಯಯ‌ನ ನಡೆಸಲು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹ. ಕೃಷಿ ಉತ್ಪಾದನೆಯ ಮೇಲೆ ಉಂಟಾಗುತ್ತಿರುವ ಕೆಟ್ಟ ಪರಿಣಾಮದ ಬಗ್ಗೆ ಸೂಕ್ತ ಕ್ರಮದ ಭರವಸೆ ನೀಡಿದ ಸಚಿವ ಚಲುವರಾಯ ಸ್ವಾಮಿ

*ಭತ್ತದ ಕೃಷಿ ಉತ್ತೇಜ‌ನಕ್ಕೆ ಸಮಗ್ರ ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಭತ್ತದ ಕೃಷಿ ವಿಸ್ತೀರ್ಣದಲ್ಲಾಗುತ್ತಿರುವ ಗಣನೀಯ ಇಳಿಕೆ, ಕೃಷಿ ಯೋಗ್ಯ ಹಡಿಲು ಭೂಮಿಯ ಹೆಚ್ಚಳ ಹಾಗೂ ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟಾರೆ ಕೃಷಿ ಉತ್ಪಾದನೆಯ ಮೇಲೆ ಉಂಟಾಗುತ್ತಿರುವ ಕೆಟ್ಟ ಪರಿಣಾಮದ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ತೀವ್ರ ಕಳವಳ ವ್ಯಕ್ತಪಡಿಸಿ,

ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ಅಯ್ಯಪ್ಪ ಮಾಲೆಧಾರಿ ಯುವಕ

ಕಲ್ಮಕಾರು : ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡ ಅಯ್ಯಪ್ಪ ಮಾಲೆಧಾರಿ ಯುವಕ,ಸ್ನಾನಕ್ಕೆ ತೆರಳಿದ ಅಯ್ಯಪ್ಪ ಮಾಲೆಧಾರಿಯೊಬ್ಬರ ಮೇಲೆ ಇಂದು ಮುಂಜಾನೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಕಲ್ಮಕಾರು ಗ್ರಾಮದ ಚರಿತ್ ಎಂಬವರು ಆನೆ ದಾಳಿಗೆ ಒಳಗಾದ ಯುವಕ. ಡಿ.17 ರ ಮುಂಜಾನೆ ಸ್ನಾನದ ಬಳಿಕ ನೀರಿನ ತೋಡಿನಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಈ ಘಟನೆ ನಡೆದಿದೆ.ಅಯ್ಯಪ್ಪ ವೃತಧಾರಿಗಳು ತಂಗುವ ಟೆಂಟ್

ಬೈಂದೂರು : ಸದನದಲ್ಲಿ ಕಾರ್ಮಿಕರ ಪರ ಧ್ವನಿ ಎತ್ತಿದ ಶಾಸಕ ಗುರುರಾಜ್ ಗಂಟಿಹೊಳೆ

ಬೈಂದೂರು: ಪ್ರಸ್ತುತ ರಾಜ್ಯದಲ್ಲಿ ಕೆಂಪು ಕಲ್ಲು ಲಭ್ಯತೆ ಇಲ್ಲದೆ ಅಥವಾ ಪೂರಕ ದಾಸ್ತಾನು ಇಲ್ಲದೇ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ತೊಡಕಾಗುತ್ತಿರುವುದು ಸರಕಾರದ ಗಮನದಲ್ಲಿದೆ. ಸಮರ್ಪಕವಾಗಿ ಜನಸಾಮಾನ್ಯರಿಗೆ ಕೆಂಪು ಕಲ್ಲು ಪೂರೈಕೆಗೆ ಸಹಕಾರಿ ಆಗುವಂತೆ ನಿಯಮದಲ್ಲಿ ಅಗತ್ಯ ತಿದ್ದುಪಡಿ ತರಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರು ತಿಳಿಸಿದ್ದಾರೆ.ಉಡುಪಿ‌ ಜಿಲ್ಲೆ ಸಹಿತ ಬೈಂದೂರು ವಿಧಾನಸಭಾ ಕ್ಷೇತ್ರ

ಮಂಗಳೂರು : ಡಿ.14ರಂದು ಉಚಿತ ವೃತ್ತಿ ಜಾಗೃತಿ ಕಾರ್ಯಾಗಾರ

ಭಾರತದ ಟ್ರೆಂಡಿಂಗ್ ಕೆರಿಯರ್ ಗೈಡೆನ್ಸ್ ಪ್ಲಾಟ್ಫಾರ್ಮ್ ಮತ್ತು ಮಂಗಳೂರಿನ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನ ಸಹಯೋಗದೊಂದಿಗೆ “ಡ್ರಾ ಮೈ ಕೆರಿಯರ್” ವೃತ್ತಿ ಜಾಗೃತಿ ಕಾರ್ಯಾಗಾರವು ಡಿ.14 ರಂದು ನಗರದ ಐಎಂಎ ಸಭಾಂಗಣದಲ್ಲಿ ನಡೆಸುತ್ತಿದೆ.ಕಾರ್ಯಾಗಾರವು 9,10, ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಅಭಿರುಚಿಯನ್ನು ಅರ್ಥಮಾಡಿಕೊಳ್ಳಲು ಮತ್ತು ವೃತ್ತಿ ಅವಕಾಶಗಳ ಬಗ್ಗೆ ಮಾರ್ಗದರ್ಶನ ನೀಡುವ ಗುರಿಯನ್ನು ಹೊಂದಿದೆ.ಐಐಎಂ

ಮೀನುಗಾರಿಕೆಗೂ ಅನುಕೂಲವಾಗುವಂತೆ ಜೆಟ್ಟಿ ನಿರ್ಮಾಣಕ್ಕೆ ಮನವಿ

ಕುಳಾಯಿ ಬಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಜೆಟ್ಟಿ ಕಾಮಗಾರಿಗೆ ಮೀನುಗಾರಿಕಾ ಸಚಿವ ಮಂಕಾಳ ವೈದ್ಯರವರು ಸ್ಥಳೀಯ ಶಾಸಕರೊಂದಿಗೆ ಇತ್ತೀಚೆಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು ಕುಳಾಯಿ:- ಕುಳಾಯಿ ಬಳಿ ನಿರ್ಮಾಣವಾಗುತ್ತಿರುವ ಮೀನುಗರಿಕಾ ಜೆಟ್ಟಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ನಾಡದೋಣಿ ಮೀನುಗಾರರಿಗೆ ಅನುಕೂಲಕರವಾಗಿಲ್ಲ. ತಕ್ಷಣ ಬ್ರೇಕ್ ವಾಟರ್ ವಿಸ್ತರಣೆ ಸಹಿತ ಸರ್ವ ಋತು ಬಂದರು ಮಾಡಲು ಬೇಕಾದ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹದ ಹಿನ್ನಲೆಯಲ್ಲಿ

Big Breaking: ಭಾರತದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ ಇನ್ನಿಲ್ಲ

ಭಾರತದ ಹೆಮ್ಮೆಯ ಹಾಗೂ ಮಧ್ಯಮ ವರ್ಗದ ಪ್ರೀತಿಯ ರತನ್‌ ಟಾಟಾ ಅವರು ಇನ್ನಿಲ್ಲ. ರತನ್‌ಟಾಟಾ ಅವರು ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ ಎಂದು ಬುಧವಾರ ಸಂಜೆಯಷ್ಟೇ ಸುದ್ದಿಯಾಗಿತ್ತು. ರಾತ್ರಿ ವೇಳೆಗೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ದೇಶದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಹಾಗೂ ಭಾರತೀಯರೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿರುವ ಟಾಟಾ ಸನ್ಸ್‌ನ ಅಧ್ಯಕ್ಷರಾದ ರತನ್ ಟಾಟಾ ಅವರ ಆರೋಗ್ಯ ಗಂಭೀರವಾಗಿದೆ ಎನ್ನುವ ಸುದ್ದಿಯನ್ನೇ

ಅತ್ತ್ಯುತ್ತಮ ತರಬೇತುದಾರ ಪ್ರಶಸ್ತಿ ಗೆ ಜೆಸಿಐ ರಾಷ್ಟ್ರೀಯ ತರಬೇತುದಾರ ಸುಧಾಕರ್ M ಪೂಜಾರಿ ಕಾರ್ಕಳ ರವರು ಭಾಜನರಾದರು

ಜೆಸಿಐ ಭಾರತದ ವಲಯ 15 ರ 2024 ರ ಸಾಲಿನಲ್ಲಿ ಕೊಡಮಾಡುವ ಈ ವರ್ಷದ ಅತ್ತ್ಯುತ್ತಮ ತರಬೇತುದಾರ ಪ್ರಶಸ್ತಿ ಗೆ ಜೆಸಿಐ ರಾಷ್ಟ್ರೀಯ ತರಬೇತುದಾರ ಸುಧಾಕರ್ M ಪೂಜಾರಿ ಕಾರ್ಕಳ ರವರು ಭಾಜನರಾದರು ಜೇಸಿ ಸುಧಾಕರ್ ಪೂಜಾರಿ ಯವರು 2007 ರಿಂದ ವ್ಯಕ್ತಿತ್ವ ವಿಕಸನ ತರಬೇತುಧಾರರಾಗಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ, ಉದ್ಯಮಿಗಳಿಗೆ ಜೇಸಿ loins ರೋಟರಿ ಸದಸ್ಯರಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ವ್ಯಕ್ತಿತ್ವ ವಿಕಸನ, ಉಧ್ಯಮ ವಿಕಾಸನಕ್ಕೆ ಪೂರಕ ತರಬೇತಿಗಳನ್ನು ನೀಡುತಾ

ನೀಟ್ ಫಲಿತಾಂಶ, ರಾಜಸ್ತಾನ, ಗುಜರಾತ್, ತಮಿಳುನಾಡು ಉತ್ತಮ ಸಾಧನೆ

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ವಲಯವಾರು ನೀಟ್ ಫಲಿತಾಂಶ ಪ್ರಕಟವಾಗಿದ್ದು ರಾಜಸ್ತಾನ, ಗುಜರಾತ್ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳು ಉತ್ತಮ ಸಾಧನೆ ಮಾಡಿವೆ. ಹರಿಯಾಣದ 720ಕ್ಕೆ 720 ಪಡೆದಿದ್ದ ಒಬ್ಬರು ಕೂಡ ಮತ್ತೆ ಆ ಸಾಧನೆ ಪಡೆದಿಲ್ಲ. 700ಕ್ಕೆ ಮೇಲೆ ಅಂಕ ಗಳಿಸಿದವರಿಗೆ ಮರು ಪರೀಕ್ಷೆ ನಡೆಸಲಾಗಿತ್ತು. ನೀಟ್ ಫಲಿತಾಂಶದಂತೆ 2,250 ಮಂದಿ ಸೊನ್ನೆ ಅಂಕ ಪಡೆದಿದ್ದಾರೆ ಮತ್ತು 9,400 ವಿದ್ಯಾರ್ಥಿಗಳು ನಕಾರಾತ್ಮಕ ಅಂಕ ಪಡೆದಿದ್ದಾರೆ. ಪ್ರಶ್ನೆಪತ್ರಿಕೆ

ವಿಜಯ ಅಮೃತರಾಜ್, ಲಿಯಾಂಡರ್‌ರಿಗೆ ಸಾಧನೆಗೆ ಪುರಸ್ಕಾರ

ಭಾರತದ ಪ್ರಸಿದ್ಧ ಟೆನ್ನಿಸ್ ಆಟಗಾರರಾದ ವಿಜಯ ಅಮೃತರಾಜ್ ಮತ್ತು ಲಿಯಾಂಡರ್ ಪಯಸ್‌ರಿಗೆ ಅಂತರರಾಷ್ಟ್ರೀಯ ಟೆನ್ನಿಸ್ ಹಾಲ್ ಆಫ್ ಫೇಮ್ ಗೌರವ ಸಂದಿದೆ. ಟೆನ್ನಿಸ್ ಆಟಗಾರರಾಗಿ ಲಿಯಾಂಡರ್ ಪಯಸ್ ಮತ್ತು ಟೆನ್ನಿಸ್‌ಗೆ ನೀಡಿರುವ ಕೊಡುಗೆಗಾಗಿ ವಿಜಯ ಅಮೃತ್‌ರಾಜ್ ಅವರುಗಳಿಗೆ ಈ ಗೌರವ ಸಲ್ಲುತ್ತಿದೆ. ಇಲ್ಲಿಗೆ ೨೮ ದೇಶಗಳ ೨೬೭ ಜನರು ಟೆನ್ನಿಸ್ ಹಾಲ್ ಆಫ್ ಫೇಮ್ ಗೌರವ ಪಡೆದಂತಾಯಿತು ಎಂದು ಇಂಟರ್ನ್ಯಾಶನಲ್ ಟೆನ್ನಿಸ್ ಹಾಲ್ ಆಫ್ ಫೇಮ್ ಒಕ್ಕೂಟವು ತಿಳಿಸಿದೆ.ಟೆನ್ನಿಸ್