ದೆಹಲಿ:  ಸೇನಾಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿರುವ ಇಬ್ಬರು ಸಹಪಾಠಿಗಳು

ದೇಶದ ಸೇನಾ ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ಸಹಪಾಠಿಗಳು ಅಂದರೆ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಅಡ್ಮಿರಲ್ ದಿನೇಶ್ ತ್ರಿಪಾಠಿ ಕ್ರಮವಾಗಿ ಭಾರತದ ಸೇನಾಪಡೆ ಹಾಗೂ ನೌಕಾಪಡೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.

ನೌಕಾಪಡೆಯ ಮುಖ್ಯ ಅಡ್ಮಿರಲ್ ದಿನೇಶ್ ತ್ರಿಪಾಠಿ ಹಾಗೂ ಸೇನಾಪಡೆಯ ನಿಯೋಜಿತ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮಧ್ಯಪ್ರದೇಶದ ರೇವಾ ಪಟ್ಟಣದ ಸೈನಿಕಶಾಲೆಯಲ್ಲಿ ಓದಿದ್ದರು. 1970ರ ದಶಕದಲ್ಲಿ ಇವರು ಆ ಶಾಲೆಯ 5ನೇ ತರಗತಿಯ ಎ ಸೆಕ್ಷನ್ನಲ್ಲಿ ಸಹಪಾಠಿಗಳಾಗಿದ್ದರು. ಶಾಲೆಯಲ್ಲಿ ಇವರ ಕ್ರಮಾಂಕ ಕೂಡಾ ಸನಿಹದಲ್ಲಿತ್ತು. ದ್ವಿವೇದಿಯವರ ಕ್ರಮಸಂಖ್ಯೆ 931 ಆಗಿದ್ದರೆ, ತ್ರಿಪಾಠಿ 938 ಕ್ರಮಸಂಖ್ಯೆ ಹೊಂದಿದ್ದರು.

ಇಬ್ಬರು ಅಧಿಕಾರಿಗಳ ನೇಮಕ ಕೂಡಾ ಕೇವಲ ಎರಡು ತಿಂಗಳ ಅಂತರದಲ್ಲಿ ಆಗಿರುವುದು ವಿಶೇಷ. ಅಡ್ಮಿರಲ್ ತ್ರಿಪಾಠಿ ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ಮೇ 1ರಂದು ಅಧಿಕಾರ ವಹಿಸಿಕೊಂಡರೆ, ಲೆಫ್ಟಿನೆಂಟ್ ಜನರಲ್ ದ್ವಿವೇದಿ ನಾಳೆ ಹೊಸ ಹುದ್ದೆ ಅಲಂಕರಿಸಲಿದ್ದಾರೆ.

Related Posts

Leave a Reply

Your email address will not be published.