ಕ್ರೀಡಾರಂಗದ ಸಾಧಕ ವಿದ್ಯಾರ್ಥಿ ಆಕಾಶ್ ಗೆ ಶಾಲಾವತಿಯಿಂದ ಸನ್ಮಾನ

ಮಂಜೇಶ್ವರ: ಸರಕಾರಿ ವೃತ್ತಿಪರ ಉನ್ನತ ಪ್ರೌಢಶಾಲೆ ಕುಂಜತ್ತೂರು ಇಲ್ಲಿನ ವಿದ್ಯಾರ್ಥಿ ಆಕಾಶ್ ಕ್ರೀಡಾರಂಗದಲ್ಲಿ ಮಾಡಿದ ಸಾಧನೆಗೆ ಶಾಲಾವತಿಯಿಂದ ಸನ್ಮಾನ ಸಮಾರಂಭವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. 2022 -23ನೇ ಸಾಲಿನ ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡೋತ್ಸವದಲ್ಲಿ ನಡೆದ ಕಬಡ್ಡಿಯಲ್ಲಿ ಕಾಸರಗೋಡು ಜಿಲ್ಲೆಯ ತಂಡದ ನಾಯಕನಾಗಿ ಆಡಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ, ಹಾಗೂ ಇವರ ಸಾಧನೆಯನ್ನು ಪರಿಗಣಿಸಿ ಶಾಲಾವತಿಯಿಂದ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಪಿಟಿಎ ಅಧ್ಯಕ್ಷೆ ಶ್ರೀಮತಿ ಮೋಹಿನಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿ ಟಿ ಎ ಉಪಾಧ್ಯಕ್ಷೆ ಮುಮ್ತಾಝ್ ಹಾಗೂ Sಒಅ ಸದಸ್ಯ ಈಶ್ವರ ಮಾಸ್ತರ್ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಮುಖ್ಯೋಪಾಧ್ಯಾರಾದ ಬಾಲಕೃಷ್ಣ, ಜಿ ವಿ ಎಚ್ ಸಿ ವಿಭಾಗದ ಕಿಶೋರ್ ಕುಮಾರ್, ಹಿರಿಯ ಶಿಕ್ಷಕಿ ಶೈಲಜಾ ವಿ.ಆರ್, ದೈಹಿಕ ಶಿಕ್ಷಕಿ ಅನಿತಾ ಪಿ. ಜಿ ಮೊದಲಾದವರು ಶುಭ ಹಾರೈಸಿ ಮಾತನಾಡಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ಆಕಾಶ್ ಅವರನ್ನು ಸನ್ಮಾನಿಸಲಾಯಿತು. ಜೊತೆಯಾಗಿ ಈತನ ಸಾಧನೆಗೆ ಸ್ಪೂರ್ತಿ ನೀಡಿದ ದೈಹಿಕ ಶಿಕ್ಷಕಿ ಅನಿತಾ ಪಿ ಜಿ ಇವರನ್ನೂ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಆಕಾಶ್ ಅವರÀ ತಾಯಿ ವಿನೋದಿನಿ, ಶಿಕ್ಷಕರಾದ ದಿವಾಕರ ಬಲ್ಲಾಲ್ , ರವೀಂದ್ರ ರೈ ಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
