ವೆಲ್ಪೇರ್ ಅಸೋಸಿಯೇಷನ್ ರಾಣಿಪುರ ವಾರ್ಷಿಕೋತ್ಸವ : ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ
ಉಳ್ಳಾಲ: ವೆಲ್ಫೇರ್ ಅಸೋಸಿಯೇಷನ್ ರಾಣಿ ಪುರ (ರಿ)ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಮುನ್ನೂರು ಗ್ರಾಮ ಪಂಚಾಯತ್ ಮುನ್ನೂರು ಮತ್ತು ಮಂಗಳೂರಿನ ಫಾದರ್ ಮುಲ್ಲರ್ ಅಸ್ಪತ್ರೆ ಇವರ ಸಹಯೋಗದಲ್ಲಿ ಉಚಿತ ವೈದ್ಯಕೀಯಾ ತಪಾಸಣಾ ಶಿಬಿರ ರಾಣಿ ಪುರ ಶಾಲಾ ವಠಾರದಲ್ಲಿ ನಡೆಯಿತು. ರಾಣಿಪುರ ಮೇರಿ ವಿಶ್ವ ಮಾತೆ ದೇವಾಲಯ ಧರ್ಮಗುರು ಫಾದರ್ ಜಯಪ್ರಕಾಶ್ ಡಿ ಸೋಜ ಉಚಿತ ವೈದ್ಯಕೀಯಾ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ದೇಶದ ಜನರು ಪರಸ್ಪರ ಇತರರ ಆರೋಗ್ಯದ ಬಗ್ಗೆ ಜಾಗೃತಿವಹಿಸಿದಾಗ ಆರೋಗ್ಯಕರ ದೇಶವಾಗಿ ಬದಲಾಗಲು ಸಾಧ್ಯ. ಇಂತಹ ಕಾರ್ಯವನ್ನು ವೆಲ್ಫೇರ್ ಅಸೋಸಿಯೇಷನ್ ಸಂಸ್ಥೆ ವರ್ಷಗಳಿಂದ ಮಾಡುತ್ತ ಬಂದಿದೆ
ಎಂದು ಹೇಳಿದರು.
ರಾಣ ಪುರ ಋಷಿವನದ ಆಡಳಿತಾಧಿಕಾರಿ ಫಾ. ವಿಲ್ಫ್ರೆಡ್ ರೊಡ್ರಿಗಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವೆಲ್ಫೇರ್ ಅಸೋಸಿಯೇಷನ್ ಕಳೆದ ಒಂದು ವರ್ಷಗಳಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ಸೇವೆಯನ್ನು ನೀಡುವಂತೆಯಾಗಲಿ ಹೇಳಿದರು. ರಾಣಿಪುರ ಕಾನ್ವೆಂಟ್ ನ ಭಗಿನಿ ಲೀನಾ ಪಿಂಟೊ, ಮುನ್ನೂರು ಗ್ರಾಮಪಂಚಾಯತ್ ಅಧ್ಯಕ್ಷ ವಿಲ್ಫ್ರೆಡ್ ಡಿ ಸೋಜ, ಪಂಚಾಯತ್ ಅಭಿವೃಧ್ಧಿ ಅಧಿಕಾರಿ ರವೀಂದ್ರ ನಾಯ್ಕ್, ಕನ್ನಡಿಗ ಪತ್ರಕರ್ತರ ಸಂಘ ಮಹರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಜೋಸೆಫ್ ಪಾವ್ಲ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಫಾದರ್ ಮುಲ್ಲರ್ ಆಸ್ಪತ್ರೆಯ ಡಾ.ದೀಪಾ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಪದ್ಮಾ ವೇಣೂರು ಅಗಾಂಗಾ ದಾನ ಹಾಗೂ ನೇತ್ರದಾನದ ಬಗ್ಗೆ ಮಾಹಿತಿ ನೀಡಿದರು.