ಒಡಿಶಾ ದಲ್ಲಿ ನಡೆಯಲಿರುವ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ – 2026 ಹೆಜಮಾಡಿಯಲ್ಲಿ ಯುವ ಕರ್ನಾಟಕ ವಾಲಿಬಾಲ್ ತಂಡದ ತರಬೇತಿ ಶಿಬಿರದ ಉದ್ಘಾಟನೆ
ಹೆಜಮಾಡಿ:
ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ (ರಿ.) ಬೆಂಗಳೂರು (ಭಾರತ ವಾಲಿಬಾಲ್ ಫೆಡರೇಶನ್ ಸಂಯೋಜಿತ )
ಮಾರ್ಚ್ ತಿಂಗಳಲ್ಲಿ ಒಡಿಶಾ ರಾಜ್ಯದಲ್ಲಿ ನಡೆಯಲಿರುವ `ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ – 2026 ರಲ್ಲಿ ಭಾಗವಹಿಸಲಿರುವ
ಯುವ ಕರ್ನಾಟಕ ವಾಲಿಬಾಲ್ ತಂಡದ ತರಬೇತಿ ಶಿಬಿರದ
ಉದ್ಘಾಟನಾ ಸಮಾರಂಭವು
ಫೆಬ್ರವರಿ 01 ಭಾನುವಾರದಂದು
ಪ್ರಾಥಮಿಕ ಶಾಲಾ ಮೈದಾನ, ಹೆಜಮಾಡಿಯಲ್ಲಿ
ಸಂಜೆ 4 ಗಂಟೆಗೆ ನಡೆಯಲಿದೆ.
ತರಬೇತಿ ಶಿಬಿರವು ಫೆಬ್ರವರಿ 01 ರಿಂದ 15 ರವರೆಗೆ ನಡೆಯಲಿದ್ದು,
ಕಾರ್ಯಕ್ರಮದ
ಉದ್ಘಾಟನೆಯನ್ನು
ಶ್ರೀ ಡಾ. ಎಂ. ಮೋಹನ್ ಆಳ್ವ ಅಧ್ಯಕ್ಷರು, ಅಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರಿ ನಡೆಸಿಕೊಡಲಿದ್ದಾರೆ.
ಅಧ್ಯಕ್ಷತೆಯನ್ನು
ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಶಾಸಕರು, ಕಾಪು ವಿಧಾನ ಸಭಾ ಕ್ಷೇತ್ರ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ
ಶ್ರೀ ಯಶ್‌ಪಾಲ್ ಎ. ಸುವರ್ಣ ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ,
ಶ್ರೀ ಎಂ ಎ ಗಫೂರ್ ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಮಂಡಳಿ, ಮಂಗಳೂರು,
ಶ್ರೀಮತಿ ರೇಶ್ಯಾ ಎ. ಮೆಂಡನ್ ಅಧ್ಯಕ್ಷರು, ಗ್ರಾಮ ಪಂಚಾಯತ್ ಹೆಜಮಾಡಿ,
ಶ್ರೀ ಹರ್ಷ ಆರ್. ಅಧ್ಯಕ್ಷರು, ಕರ್ನಾಟಕ ವಾಲಿಬಾಲ್ ಅಸೋಸಿಯೇಶನ್ (ರಿ) ಬೆಂಗಳೂರು,

ಶ್ರೀ ಆಂಥೋನಿ ಜೋಸೆಫ್ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ವಾಲಿಬಾಲ್ ಅಸೋಸಿಯೇಶನ್ (ರಿ) ಬೆಂಗಳೂರು,
ಶ್ರಿ ಗಣೇಶ್, DYSP ಕರಾವಳಿ ಕಾವಲು ಪಡೆ, ಉಡುಪಿ ಜಿಲ್ಲೆ,
ಶ್ರೀ ಶಶಿಕಾಂತ್ ಪಡುಬಿದ್ರೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಉಡುಪಿ, ಹೆಜಮಾಡಿ,
ಶ್ರೀ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಉಪಾಧ್ಯಕ್ಷರು, ಉಡುಪಿ ಜಿಲ್ಲಾ ಬಿಜೆಪಿ,
ಶ್ರೀ ದಯಾನಂದ ಹೆಜಮಾಡಿ ಆಡಳಿತ ಮೊತ್ತೇಸರರು, ಮಹಾಲಿಂಗೇಶ್ವರ ದೇವಸ್ಥಾನ ಹೆಜಮಾಡಿ,
ಶ್ರೀ ಶೇಕ್ ಸಿರಾಜ್ ಉದ್ಯಮಿ, ತೈಬಾ ಸೆಂಟರ್, ಹೆಜಮಾಡಿ,
ಶ್ರೀ ದಾಮೋದರ ಶೆಟ್ಟಿ, ಬೆಂಗಳೂರು ರಾಷ್ಟ್ರೀಯ ವಾಲಿಬಾಲ್ ಆಟಗಾರರು,
ಹಾಗೂ ಶ್ರೀ ಪ್ರಕಾಶ್ ಶೆಟ್ಟಿ ಹೆಜಮಾಡಿ ಅಧ್ಯಕ್ಷರು, ಹೆಜಮಾಡಿ ಫ್ರೆಂಡ್ಸ್ (ರಿ)ಹೆಜಮಾಡಿ,
ಮತ್ತು ಶ್ರೀ ಎಚ್. ರವಿ ಕುಂದರ್ ಅಧ್ಯಕ್ಷರು, ವಿಶ್ವ ಹಿಂದೂ ಪರಿಷತ್,ಹೆಜಮಾಡಿ ಇವರುಗಳು ಭಾಗವಹಿಸಲಿದ್ದಾರೆ ಹಾಗೂ
ರಾಷ್ಟ್ರೀಯ ವಾಲಿಬಾಲ್ ಆಟಗಾರ ಶ್ರೀ ಪ್ರಕಾಶ್ ಶೆಟ್ಟಿ ನೇತೃತ್ವದ ಹೆಜಮಾಡಿ ಫ್ರೆಂಡ್ಸ್ (ರಿ), ಹೆಜಮಾಡಿ ಇವರು ಆಯೋಜನೆ ಮಾಡಲಿದ್ದಾರೆ.
ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


















