ಎಂಎಫ್‍ಸಿ ಸಂಸ್ಥೆಯ 8ನೇ ಶಾಖೆ ಎಂಎಫ್‍ಸಿ ಚಾಯ್ ಸ್ಟೇಷನ್ ಉದ್ಘಾಟನೆ

ಈಗಾಗಲೇ ಗ್ರಾಹಕರ ಮನಗೆದ್ದಿರುವ ಎಂಎಫ್‍ಸಿ ಸಂಸ್ಥೆಯ ಎಂಟನೇ ಶಾಖೆಯಾಗಿರುವ ಎಂಎಫ್‍ಸಿ ಚಾಯ್ ಸ್ಟೇಷನ್‍ನ ನೂತನ ಶಾಖೆಯೂ ಮಂಗಳೂರಿನ ಅತ್ತಾವರದ ರೈಲ್ವೇ ನಿಲ್ದಾಣದ ಬಳಿ ಶುಭಾರಂಭಗೊಂಡಿತ್ತು. ಈಗಾಗಲೇ ನಗರದ ವಿವಿಧ ಕಡೆಗಳಲ್ಲಿ ತನ್ನ ಸಂಸ್ಥೆಯನ್ನ ತೆರೆದು ಗ್ರಾಹಕರ ಗ್ರಾಹಕರ ಮನಗೆದ್ದಿರುವ ಎಂಎಫ್‍ಸಿ ಸಂಸ್ಥೆಯ ಎಂಟನೇ ಶಾಖೆಯಾಗಿರುವ ಎಂಎಫ್‍ಸಿ ಚಾಯ್ ಸ್ಟೇಷನ್‍ನ ನೂತನ ಶಾಖೆ ಮಂಗಳೂರಲ್ಲಿ ಶುಭಾರಂಭಗೊಂಡಿತ್ತು. ನಗರದ ಅತ್ತಾವರದ ರೈಲ್ವೇ ನಿಲ್ದಾಣದ ಬಳಿ ನೂತನ ಶಾಖೆಯನ್ನು ಗಣ್ಯರು ರಿಬ್ಬನ್ ಕತ್ತರಿಸಿ, ಉದ್ಘಾಟಿಸಿದರು. ಸಮಾರಂಭದಲ್ಲಿ ಮಾತನಾಡಿದ ನಟ ಬೋಜರಾಜ್ ವಾಮಂಜೂರು ಮಾತನಾಡಿ ಈ ಸಂಸ್ಥೆ ಅಭಿವೃದ್ಧಿ ಪಥದತ್ತಸಾಗಲಿ, ಅಂದಿನ ಕಾಲದಿಂದ ಸಿಗುತ್ತಿದ್ದ ತಿಂಡಿ ತಿನಿಸುಗಳು ಜೊತೆಗೆ, ಇಂದಿನ ಯುವ ಜನಾಂಗಕ್ಕೆ ಬೇಕಾದ ತಿಂಡಿ ತಿನಿಸುಗಳು ಸಿಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

ಪತ್ರಕರ್ತ ವಾಲ್ಟರ್ ನಂದಳಿಕೆ ಮಾತನಾಡಿ,ಯುವಕರು ಉದ್ದಿಮೆಯನ್ನು ಪ್ರಾರಂಭಿಸಿದಾಗ ಅವರಿಗೆ ಪೆÇ್ರೀತ್ಸಾಹಿಸುವ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಸ್ಥೆಗಳು ಆರಂಭಗೊಳ್ಳಲಿ ಎಂದು ಶುಭಾ ಹಾರೈಸಿದರು. ಎಂಎಫ್ಸಿ ಸಂಸ್ಥೆಯ ಸಂಸ್ಥಾಪಕ ಸಿದ್ದೀಕ್ ಮಾತನಾಡಿ, ಈಗಾಗಲೇ ವಿವಿಧ ಕಡೆಗಳಲ್ಲಿ ಸಂಸ್ಥೆಯನ್ನು ಆರಂಭಿಸಲಾಗಿದೆ.ಗ್ರಾಹಕರ ಮೆಚ್ಚುಗೆಯನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ,ಮಾಜಿ ಎಂಎಲ್ಸಿ ಐವನ್ ಡಿಸೋಜ, ಮಾಜಿ ಮೇಯರ್ ಅಶ್ರಫ್, ಆಮ್ ಆದ್ಮಿ ಪಕ್ಷ ರಾಜ್ಯ ಸಹಕಾರ್ಯದರ್ಶಿ ಸಂತೋಷ್ ಕಾಮತ್,ಪಾಲಿಕೆ ಸದಸ್ಯ ಎ ಸಿ ವಿನಯ್ ರಾಜ್, ಮಾಜಿ ಕಾಪೆÇೀರೇಟರ್ ಅನೀಲ್ ಅತ್ತಾವರ, ಆಮ್ ಆದ್ಮಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅಝ್ಫರ್ ರಝಾಕ್ ಮತ್ತಿತರರು ಉಪಸ್ಥಿತರಿದ್ದರು. ಈಗಾಗಲೇ ಚಾ, ಕಾಫಿ, ಕೋಲ್ಡ್ ಡಿಕ್ಸ್, ವಿವಿಧ ಬಗೆ ಬಗೆಯ ತಿಂಡಿ, ತಿನಸುಗಳು ಇಲ್ಲಿ ಲಭ್ಯವಿದೆ.
