ಅಶೋಕ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ರಜತ ಮಹೋತ್ಸವದ ವಾರ್ಷಿಕೋತ್ಸವ
ಅಶೋಕ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದಿನಾಂಕ 13/12/2025 ರಂದು ರಜತ ಮಹೋತ್ಸವದ ವಾರ್ಷಿಕೋತ್ಸವವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀಯುತ ಪ್ರಕಾಶ್ ಕಲ್ಬಾವಿ , ಗೌರವಾನ್ವಿತ ಅತಿಥಿಯಾಗಿ ಡಿ. ಡಿ. ಪಿ .ಐ ಜಿ.ಎಸ್. ಶಶಿಧರ್ ಅವರು ಆಗಮಿಸಿದ್ದರು. ನಮ್ಮ ಶಾಲಾ ಅಧ್ಯಕ್ಷರಾದ ಶ್ರೀಯುತ ರಾಜೇಂದ್ರ ಕಲ್ಬಾವಿಯವರು ಸ್ವಾಗತ ಭಾಷಣವನ್ನು ಮಾಡಿದರು. ಅತಿಥಿಗಳು ನಮ್ಮ ಶಾಲೆಯ ಕುರಿತು ಮಾತನಾಡುತ್ತಾ ವಿದ್ಯಾರ್ಥಿಗಳು ಶಿಸ್ತು ಪಾಲನೆಯನ್ನು ಮಾಡಬೇಕೆಂದು ಹೇಳಿದರು. ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿನಿಯಾದ ಪ್ರಸ್ತುತ ಎಕ್ಸ್ ಪರ್ಟ ಕಾಲೇಜಿನ ಉಪನ್ಯಾಸಕಿಯಾಗಿರುವ ರಕ್ಷಿತಾ ಪ್ರಭು ಸ್ವಸ್ತಿ ವಾಚನವನ್ನು ಮಾಡಿದರು .ಈ ಸಂದರ್ಭದಲ್ಲಿ ಶಾಲೆಯ ಏಳಿಗೆಗೆ ಪರಿಶ್ರಮವಹಿಸಿದ ವ್ಯಕ್ತಿಗಳಿಗೆ ಸನ್ಮಾನ ಸಮಾರಂಭವನ್ನು ಮಾಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಅಶೋಕ್,ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಯವರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


















