ಜ.17ರಂದು ಪದವಿನಂಗಡಿಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

ಆಶ್ರಯ ಬಳಗ ಪದವಿನಂಗಡಿ ಕಟ್ಟೆ ಮಂಗಳೂರು ಹಾಗೂ ಊರ ಹತ್ತು ಸಮಸ್ತರು ಇವರ ಆಶ್ರಯದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಯಕ್ಷಧ್ರುವ ಶ್ರೀ ಪಟ್ಲ ಸತೀಶ್ ಶೆಟ್ಟಿವರ ಸಾರಥ್ಯದಲ್ಲಿ ಯಕ್ಷಗಾನ ಬಯಲಾಟ ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗವನ್ನು ಆಡಿತೋರಿಸಲಿದ್ದಾರೆ.

ಪದವಿನಂಗಡಿಯ ಬೆನಕಾ ಸಭಾಂಗಣದಲ್ಲಿ ಜನವರಿ 17ರಂದು ಮಂಗಳವಾರ ಸಂಜೆ 6.30ಕ್ಕೆ ಚೌಕಿ ಪೂಜೆ ರಾತ್ರಿ 8 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರುವುದು. ಸಂಜೆ 4 ಗಂಟೆಯಿಂದ 5.30ರ ವರೆಗೆ ಸುಮಧುರ್ ಮ್ಯೂಸ್ಯಿಕ್ಸ್ ಪ್ರವೀಣ್ ಪ್ರಭು ಗುರುಪುರ ಮತ್ತು ಬಳಗದವರಿಂದ ಭಕ್ತಿಗಾನ ಸುಧೆ ಜರುಗಲಿರುವುದು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ದುರ್ಗಾಕಟ್ಟೆ ಪದವಿನಗಂಡಿ ಇವರ ಸಹಕಾರದೊಂದಿಗೆ ನಡೆಯಲಿರುವುದು. ಯಕ್ಷಗಾನ ಬಯಲಾಟವು ವಿ4 ನ್ಯೂಸ್ ನ ಯೂಟ್ಯೂಬ್‌ ಚಾನಲ್ ನಲ್ಲಿ ನೇರ ಪ್ರಸಾರ ಗೊಳ್ಳಲಿರುವುದು

Related Posts

Leave a Reply

Your email address will not be published.