ತತ್ರಪತಿಗಳೆಲ್ಲ ಛತ್ರಪತಿಗಳಾದ ಕೊಡೆಗಿಹುದು ಚರಿತೆ

ಮಳೆಗಾಲದಲ್ಲಿ ನನೆಯದಿರಲು ನಾನಾ ದಾರಿ ಇದೆ. ಕೊರಂಬು, ತತ್ರ ಇಳಿವಣಿಗೆಯಲ್ಲೂ ಕೊಡೆಯರಳಿ ಹೊಸ ಹೂಲೋಕ ತೆರೆದುಕೊಳ್ಳುತ್ತದೆ.ಮರ, ಲೋಹದ ಕೋಲಿನ ಸುತ್ತ ಮಡಚುವ ಮಾಡು ಇರುವುದೇ ಕೊಡೆ. ಅದು ಮಳೆ, ಬಿಸಿಲಿನಲ್ಲಿ ರಕ್ಷಣೆಗೆ. ಗೌರವ ಸೂಚಕವಾಗಿಯೂ ಅದು ಇತ್ತು. ಗ್ರೀಸ್ ಒಂಬ್ರಿಯೊ, ಲ್ಯಾಟಿನ್‌ನ ಉಂಬ್ರಾ ಆಗಿ ಅಂಬ್ರೆಲ್ಲಾ ಆಗಿದೆ. ಕ್ರಿ. ಶ1610 ರಲ್ಲಿ ಈ ನುಡಿ ಬಳಕೆಗೆ ಬಂದುದಾಗಿ ಆಕ್ಸ್ಫರ್ಡ್ ಪದನೆರಕೆ ಹೇಳುತ್ತದೆ.ಕ್ರಿ. ಪೂ2450 ರ ಈಜಿಪ್ತ್ ಗೋಡೆ ಚಿತ್ರದಲ್ಲಿ ಕೊಡೆ ಇವೆ. ಉದ್ದ ಕೋಲಿಗೆ ಅಗಲದ ಬಟ್ಟೆಯ, ಓಲಿಯ ತುದಿಯವು ಆ ಕೊಡೆಗಳು. ಚೀನಾದಲ್ಲೂ ಕ್ರಿ. ಪೂ. 2400 ರ ಕೊಡೆ ಚಿತ್ರ ಕಂಡಿದೆ. ಪರ್ಶಿಯನ್ ಅಕ್ಕಡಿಯನರಲ್ಲಿ ಕ್ರಿ. ಪೂ 2310 ರಲ್ಲಿ ಕೊಡೆ ಕಾಣಿಸಿದೆ. ಪರ್ಶಿಯನ್ ರಾಜ ಕ್ಸೆರೆಕ್ಸ್ನಿಗೆ ಕ್ರಿ. ಪೂ. 465 ರಲ್ಲಿ ಹಿಡಿದ ಕೊಡೆ ಈಗಿನ ಮಾದರಿಯದು.

ತುಳುವರ ತತ್ರ ಬಿದಿರು ಕೋಲಿನ ಸುತ್ತ ಓಲಿ ಉರುಟಿಗೆ ಹೆಣೆದುದಾಗಿದೆ. ಈ ತತ್ರವು ಚತ್ರ> ಛತ್ರಿ ಶಬ್ದಗಳಿಗೆ ಜನ್ಮ ನೀಡಿದೆ.
ನೇರ ಮಡಚುವ ಕೊಡೆ ಉದ್ದಕ್ಕಿತ್ತು, ಈಗಲೂ ಇವೆ. ಇದು ಊರುಗೋಲು ಸಹ ಆಗುತ್ತದೆ. ಕೊಡೆ ಹಿಂದೆ ದುಬಾರಿ ಆದುದರಿಂದ ಹಲವು ವರುಷ ರಿಪೇರಿ ಮಾಡಿ ಬಳಸುತ್ತಿದ್ದರು; ಹಲವು ವರುಷ ರಿಪೇರಿ ಮಾಡುತ್ತಿದ್ದರು. ಇಂದು ಮೂರ್ನಾಲ್ಕು ತಿಂಗಳು ಬಳಸಿ ಬಿಸಾಡುವ ಅಗ್ಗದ ಕೊಡೆಗಳು ಹೆಚ್ಚು. ಎರಡು ಒಳಮಡಚು, ಮೂರು ಒಳಮಡಚು, ಚೀಲದಲ್ಲಿ ಇಡುವ ಕೊಡೆಗಳು ಇಂಗ್ಲೆಂಡ್
, ಫ್ರಾನ್ಸ್ಗಳಲ್ಲಿ ಮೊದಲು ಬಂದವು.

Related Posts

Leave a Reply

Your email address will not be published.