ಕೋಲ ಕಟ್ಟುವ ಸಮುದಾಯವರಿಗೆ ಇನ್ನೂ ಸಿಗದ ಮೀಸಲಿಟ್ಟ ಭೂಮಿ
ಕರಾವಳಿಯ ದೈವಾರಾಧನೆಯ ಭಾಗವಾಗಿರುವ ಕೋಲವನ್ನು ಕಟ್ಟುವ ಸಮುದಾಯದವರಿಗಾಗಿ ಮೀಸಲಿಟ್ಟ ಭೂಮಿ ಇದುವರೆಗೂ ಅವರಿಗೆ ದೊರೆತಿಲ್ಲ. ನಿವೇಶನರಹಿತರ ಹೆಸರಿನಲ್ಲಿ ಸರಕಾರದಿಂದ ಮಂಜೂರಾದ ಜಾಗದ ಅಭಿವೃದ್ಧಿಗಾಗಿ ಸರಕಾರ ಲಕ್ಷಾಂತರ ರೂಪಾಯಿ ವ್ಯಯಿಸಿದ್ದರೂ ಕೂಡ ಇದುವರೆಗೂ ಒಂದು ರೂಪಾಯಿ ಕೂಡ ಸೂಕ್ತ ವಿನಿಯೋಗವಾಗಿಲ್ಲ..

ಹೌದು ನಾವು ಹೇಳುತ್ತಿರುವುದು ಕಾಪು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬೊಮ್ಮಾರ ಬೆಟ್ಟು ಗ್ರಾಮ ಪಂಚಾಯಿತಿಯ ಕರ್ಮಕಾಂಡವನ್ನು. 2017ರಲ್ಲಿ ಕಾಂಗ್ರೆಸ್ ಮುಖಂಡ ವಿನಯಕುಮಾರ್ ಸೊರಕೆ ಅವರು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾಗ ಬೊಮ್ಮಾರ ಬಿಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂದುಳದ ಪಾಣಾರ ಸಮುದಾಯದವರಿಗಾಗಿ ನಿವೇಶನ ಬೇಕು ಎನ್ನುವ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಅಂದಿನ ಶಾಸಕ ವಿನಯ್ ಕುಮಾರ್ ಸೊರಕೆ ಅವರು ಸುಮಾರು 5 ಎಕರೆಯಷ್ಟು ಜಾಗವನ್ನು ಬೊಮ್ಮಾರ ಬಿಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರೈತರಿಗೆ ಮಂಜೂರು ಮಾಡಿದ್ದರು. ಆದರೆ ನಂತರ ವರ್ಷಗಳು ಉರುಳಿದ್ದು ಹೊರತುಪಡಿಸಿದರೆ, ಇದುವರೆಗೂ ಯಾರೊಬ್ಬ ಹಿಂದುಳಿದ ಸಮುದಾಯದವರಿಗೂ ಕೂಡ ನಿವೇಶನ ಹಂಚಿಕೆಯಾಗಿಲ್ಲ, ಅಲ್ಲದೆ ಮೀಸಲಿರಿಸಿದ ಜಾಗದ ಅಭಿವೃದ್ಧಿಗಾಗಿ ಸರಕಾರದಿಂದ ಬಂದ ಅನುದಾನವನ್ನ ಕೂಡ ಬಳಸದೆ ಪಂಚಾಯಿತಿನ ಮಾಜಿ ಅಧ್ಯಕ್ಷರು ಗುಳುಂ ಮಾಡಿರುವುದು ಸದ್ಯ ಬೆಳಕಿಗೆ ಬಂದಿದೆ.

ಬೊಮ್ಮಾರ ಬಿಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರೈತರಾಗಿ ಕೋಲ ಕಟ್ಟುವ ಪಾಣಾರ ಸಮುದಾಯದ ಹಲವು ಕುಟುಂಬಗಳಿವೆ. 2017ರಿಂದ ಇಂದು ಅಥವಾ ನಾಳೆ ನಮಗೆ ನಿವೇಶನದ ಪತ್ರ ಸಿಗಬಹುದು ಅನ್ನುವ ನೀರಿಕ್ಷೆಯಲ್ಲಿ ಪಾಣಾರ ಸಮುದಾಯ ಕಾತುರದಿಂದ ಎದುರು ನೋಡುತಿದೆ. ಆದರೆ ಕಾಂತಾರ ಸಿನಿಮಾದಲ್ಲಿ ತೋರಿಸಿದಂತೆ ಮೇಲ್ವರ್ಗದ ಆಡಳಿತ ವ್ಯವಸ್ಥೆಯಲ್ಲಿರುವ ವ್ಯಕ್ತಿ ಓರ್ವ ಕೆಲವರಿಗೆ ಮೀಸಲಿರಿಸಿದ ಜಾಗದ ಹೆಸರಿನಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಮೊತ್ತವನ್ನು ವಂಚಿಸಿರುವುದು ಮಾಹಿತಿ ಮೂಲಕ ತಿಳಿದು ಬಂದಿದೆ. ನಿವೇಶನರಹಿತರು ಪದೇ ಪದೇ ಹಕ್ಕು ಪತ್ರಕ್ಕಾಗಿ ಬೇಡಿಕೆ ಏರಿಸಿದ ಹಿನ್ನೆಲೆಯಲ್ಲಿ ಪಂಚಾಯತ್ ನ ಕೆಲವು ಸದಸ್ಯರು ಮಾಹಿತಿ ಹಕ್ಕು ಬಳಸಿಕೊಂಡು ಕಡತಗಳನ್ನು ಪಡೆದು ಪರಿಶೀಲಿಸಿದಾಗ ನಿಮಿಷ ರೈತರಿಗಾಗಿ ತೆಗೆದಿರಿಸಿದ ಜಾಗದ ಅಭಿವೃದ್ಧಿಗಾಗಿ ಸುಮಾರು 5.90 ಲಕ್ಷ ರೂಪಾಯಿ ಇದುವರೆಗೂ ವ್ಯಯಿಸಿರುವುದು ಪತ್ತೆಯಾಗಿದೆ. ಆದರೆ ಜಾಗ ಮಾತ್ರ ಇಂದಿಗೂ ಕೂಡ ಅದೇ ಹಾಳು ಬಿದ್ದ ಸ್ಥಿತಿಯಲ್ಲಿ ಇರುವುದು ಪಾಣಾದ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಾರೆಯಾಗಿ ನಿವೇಶನ ರೈತರಿಗೆ ಜಾಗ ಸರಕಾರ ಮಂಜೂರು ಮಾಡಿದರು ಕೂಡ ಇದುವರೆಗೂ ಯಾವುದೇ ಹಕ್ಕುಪತ್ರ ಹಂಚಿಕೆ ಆಗದೆ ಇರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ. ಆದಷ್ಟು ಶೀಘ್ರದಲ್ಲಿ ನಿವೇಶನ ಹಂಚಿಕೆ ಯಾಗದೆ ಇದ್ದಲ್ಲಿ ಹೋರಾಟಕ್ಕೆ ಇಳಿಯುವುದಾಗಿ ನಿವೇಶನ ರಹಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



















