ಸುಳ್ಯ: ಮಾ.8 ರಂದು ಉಚಿತ ಕಿವಿ ಶ್ರವಣ ತಪಾಸಣೆ ಶಿಬಿರ

ಸುಳ್ಯ: ಇಲ್ಲಿನ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಹಾಗೂ ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ಉಚಿತ ಕಿವಿ ಶ್ರವಣ ತಪಾಸಣೆ ಶಿಬಿರ ಹಾಗೂ ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಕಾರ್ಯಕ್ರಮ ಮಾ.8 ರಂದು ಸುಳ್ಯ ಪ್ರೆಸ್ ಕ್ಲಬ್ ಆವರಣದಲ್ಲಿ ನಡೆಯಲಿದೆ ಎಂದು ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೋಕೇಶ್ ಪೆಲಂಪಾಡಿ ತಿಳಿಸಿದ್ದಾರೆ.
ಟೀಮ್ ಈಶ್ವರ್ ಮಲ್ಪೆ ಹಲವು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದು, ಈಗ ಶ್ರವಣ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೆರವಾಗುವ ಉದ್ದೇಶದಿಂದ ಈ ಉಚಿತ ಶಿಬಿರವನ್ನು ಆಯೋಜಿಸಲಾಗಿದೆ. ಶ್ರವಣದ ಸಮಸ್ಯೆ ಇರುವವರಿಗೆ ಅಗತ್ಯವಾದ ಶ್ರವಣ ಯಂತ್ರದ ವೆಚ್ಚದಲ್ಲಿ 40 ಶೇಕಡಾ ಮೊತ್ತವನ್ನು ಟೀಮ್ ಈಶ್ವರ್ ಮಲ್ಪೆ ದೇಣಿಗೆಯ ರೂಪದಲ್ಲಿ ಭರಿಸಲಿದ್ದಾರೆ.
ಶಿಬಿರದಲ್ಲಿ ಭಾಗವಹಿಸಲು ನೋಂದಣಿ ಕಡ್ಡಾಯವಾಗಿದ್ದು, ಹಿರಿಯ ನಾಗರಿಕರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಶ್ರವಣ ಪರೀಕ್ಷೆಯ ಹಳೆಯ ವರದಿ ಇದ್ದರೆ ಅದನ್ನು ಜೊತೆಗೆ ತರಲು ಸೂಚಿಸಲಾಗಿದೆ. ಮೊದಲು ನೋಂದಾಯಿಸುವ 30 ಮಂದಿಗೆ ಮಾತ್ರ ಈ ಸೌಲಭ್ಯ ಲಭ್ಯವಿರುತ್ತದೆ.
ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದ ವೈದ್ಯರು ಶಿಬಿರದಲ್ಲಿ ಭಾಗವಹಿಸಿ ಶ್ರವಣ ತಪಾಸಣೆ ನಡೆಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8951804399 ಸಂಖ್ಯೆಯನ್ನು ಸಂಪರ್ಕಿಸಬಹುದು. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

Related Posts

Leave a Reply

Your email address will not be published.