ನರಿಂಗಾನದ ಕಲ್ಲರಕೋಡಿಯಲ್ಲಿ ಅಂಗನವಾಡಿ ಕೇಂದ್ರದ ಡಿಜಿಟಲ್ ವ್ಯವಸ್ಥೆ ಉದ್ಘಾಟನೆ
ಸ್ವಂತ ಕಟ್ಟಡಗಳು ಇರುವ ಅಂಗನವಾಡಿಗಳಿಗೆ ಡಿಜಿಟಲ್ ವ್ಯವಸ್ಥೆ ಆಗಿದೆ. ಉಳಿದ ಕೇಂದ್ರಗಳಿಗೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಬೇಕಿದೆ. ನರಿಂಗಾನದಲ್ಲಿ ಗ್ರಾಮ ಪಂಚಾಯಿತಿ ಮುತುವರ್ಜಿ ವಹಿಸಿರುವುದು ಉತ್ತಮ ಬೆಳವಣಿಗೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ನರಿಂಗಾನದ ಕಲ್ಲರಕೋಡಿಯಲ್ಲಿ ಅಂಗನವಾಡಿ ಕೇಂದ್ರದ ಡಿಜಿಟಲ್ ವ್ಯವಸ್ಥೆ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಸ್ಥಳದಾನಿಗಳಾದ ಮಹಮ್ಮದ್ ಪಾರೆ, ರಝಾಕ್ ಪಾರೆ, ಮಜೀದ್ ಪಾರೆ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜ್ಯೋತಿ ಡಿಸೋಜ, ಸದಸ್ಯರಾದ ಮುರಳೀಧರ ಶೆಟ್ಟಿ ಮೋರ್ಲ, ಲತೀಫ್ ಕಾಪಿಕಾಡ್, ಸುಂದರ ಪೂಜಾರಿ ಕೋಡಿಮಜಲ್, ಶೇಖಬ್ಬ ನಿಡ್ಮಾಡ್, ಸಲೀಂ ಪೊಟ್ಟೊಳಿಕೆ, ಫಯಾಝ್ ಮೊಂಟೆಪದವು, ಪಿಡಿಒ ರಜನಿ, ಸಿಡಿಪಿಓ ಮುಮ್ತಾಝ್, ಮುಖಂಡ ಅರುಣ್ ಡಿಸೋಜ, ಮೂಸಾ ಕುಂಞಿ ಮೊದಲಾದವರು ಉಪಸ್ಥಿತರಿದ್ದರು.
ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ನವಾಝ್ ಕಲ್ಲರಕೋಡಿ ಸ್ವಾಗತಿಸಿದರು. ಮೇಲ್ವಿಚಾರಕಿ ಶೋಭಾ ವಂದಿಸಿದರು.
ಅಬ್ದುಲ್ ರಹ್ಮಾನ್ ಚಂದಹಿತ್ಲು ಕಾರ್ಯಕ್ರಮ ನಿರೂಪಿಸಿದರು.