ಗೋ ಹತ್ಯೆ, ಗೋ ಕಳ್ಳತನದಲ್ಲಿ ಭಾಗಿಯಾದ ಆರೋಪ : ಉಡುಪಿ ಎಸ್ಪಿ ವಿಷ್ಣುವರ್ಧನ್ ಎಚ್ಚರಿಕೆ

ಠಾಣೆಯಲ್ಲಿ ಇದುವರೆಗೆ ಗೋ ಕಳ್ಳತನ, ಗೋ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪಗಳನ್ನು ಹಾಗೂ ದನದ ದಲ್ಲಾಳಿ ಮಾಡುವವರನ್ನು ಮತ್ತು ದನಸಾಗಾಟ ಮಾಡುವ ವಾಹನಚಾಲಕರ ಪರೇಡ್ ನಡೆಸಿದರು. ಇವರುಗಳು ಮುಂದಕ್ಕೆ ಯಾವುದೇ ಗೋ ಕಳ್ಳತನ ಗೋ ಹತ್ಯೆ ಪ್ರಕರಣದಲ್ಲಿ ಬಾಗಿಯಾದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣು ವರ್ದನ್ ರವರು ಎಚ್ಚರಿಕೆಯನ್ನು ನೀಡಿದ್ದಾರೆ. ಸಭೆಯಲ್ಲಿ ಪೊಲೀಸ್ ಉಪಾದೀಕ್ಷಕರಾದ ಎಸ್ ವಿಜಯಪ್ರಸಾದ್, ಕಾರ್ಕಳ ವೃತ್ತ ನಿರೀಕ್ಷಕರಾದ ಸಂಪತ್ ಕುಮಾರ್, ಕಾಪು ವೃತ್ತ ನಿರೀಕ್ಷಕರಾದ ಪ್ರಕಾಶ್ ಹಾಗೂ ಕಾರ್ಕಳ ನಗರ ಗ್ರಾಮಾಂತರ, ಹೆಬ್ರಿ, ಅಜೆಕಾರು, ಶಿರ್ವ, ಕಾಪು ಪಡುಬಿದ್ರೆ ಠಾಣೆಯ ಪಿಎಸ್ ರವರುಗಳು ಭಾಗವಹಿಸಿದ್ದರು.

Related Posts

Leave a Reply

Your email address will not be published.