ಗ್ಲೋಬಲ್ ಮಿಸ್ ಇಂಟರ್ ನ್ಯಾಶನಲ್ ಇಂಡಿಯಾ ಯೂನಿವರ್ಸ್’ ಕಿರೀಟ ಮುಡಿಗೇರಿಸಿಕೊಂಡ ಅನನ್ಯಾ ಸಿಂಗ್

ಮಂಗಳೂರಿನ ವೆಲೆನ್ಸಿಯಾದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ವಿದ್ಯಾರ್ಥಿನಿಯಾದ ಅನನ್ಯಾ ಸಿಂಗ್ ಅವರು ’ಗ್ಲೋಬಲ್ ಮಿಸ್ ಇಂಟರ್ ನ್ಯಾಶನಲ್ ಇಂಡಿಯಾ ಯೂನಿವರ್ಸ್’ ಕಿರೀಟವನ್ನು ಮುಡಿಗೇರಿಸಿದ್ದಾರೆAnanya Singh

ನವದೆಹಲಿಯ ಗ್ಲೋಬಲ್ ಇಂಡಿಯಾ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ಆಯೋಜಿಸಿರುವ ’ಗ್ಲೋಬಲ್ ಮಿಸ್ ಇಂಟರ್ ನ್ಯಾಶನಲ್ ಇಂಡಿಯಾ ಯೂನಿವರ್ಸ್- 2021’ಸ್ಪರ್ಧೆಯಲ್ಲಿ ಅನನ್ಯಾ ಸಿಂಗ್ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಅವರು ’ಗ್ಲೋಬಲ್ ಮಿಸ್ ಇಂಟರ್ ನ್ಯಾಶನಲ್ ಇಂಡಿಯಾ ಯೂನಿವರ್ಸ್’ ಆಗಿ ಹೊರಹೊಮ್ಮಿದ್ದಾರೆ.ಈ ಸ್ಪರ್ಧೆಯಲ್ಲಿ ಭಾರತದ ವಿವಿಧ ರಾಜ್ಯಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಆದರೆ ಸ್ಪರ್ಧಿಯ ನಡೆ, ಪರಿಚಯ ಹಾಗೂ ಪ್ರಶ್ನೆಗಳಿಗೆ ಉತ್ತರಿಸುವ ವೈಖರಿಯನ್ನು ಗಮನಿಸಿ ಅನನ್ಯಾ ಸಿಂಗ್ ಅವರು ಮಿಸ್ ಇಂಡಿಯಾ ಗೌರವಕ್ಕೆ ಪಾತ್ರರಾಗಿದ್ದಾರೆ.

 

Related Posts

Leave a Reply

Your email address will not be published.