ಬೊಲ್ಯ ರಸ್ತೆ ಕಾಂಕ್ರೀಟೀಕರಣ : ಶಾಸಕ ವೇದವ್ಯಾಸ್ ಕಾಮತ್ ರಿoದ ಭೂಮಿಪೂಜೆ
ಮಂಗಳೂರು ಮಹಾನಗರ ಪಾಲಿಕೆಯ ಪದವು ಪಶ್ಚಿಮ ವಾರ್ಡಿನ ಬೊಲ್ಯ ರಸ್ತೆಗೆ 1 ಕೋಟಿ ವೆಚ್ಚದಲ್ಲಿ ಕಾಂಕ್ರೀಟೀಕರಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಆ ಬಳಿಕ ಮಾತನಾಡಿದ ಅವರು, ಬೊಲ್ಯ ಪರಿಸರದ ಜನರ ಬಹುಕಾಲದ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ 1 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಭಾಗದಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ವಾಹನ ಸಂಚಾರಕ್ಕೆ ತೊಡಕು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಬೊಲ್ಯ ರಸ್ತೆಯ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದ್ದು ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಲು ಒಪ್ಪಿಗೆ ನೀಡಿದ್ದಾರೆ. ರಸ್ತೆ ಕಾಂಕ್ರೀಟಿಕರಣದ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಬೊಲ್ಯ ರಸ್ತೆ ಅಭಿವೃದ್ಧಿಯ ಬೇಡಿಕೆಯಂತೆ ಶಾಸಕ ವೇದವ್ಯಾಸ್ ಕಾಮತ್ ಅವರು 1 ಕೋಟಿ ಅನುದಾನ ಬಿಡುಗಡೆಗೊಳಿಸಿ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸುವ ಮೂಲಕ ಜನಪರ ಕಾಳಜಿ ವ್ಯಕ್ತವಾಗುತ್ತಿದೆ. ಈಗಾಗಲೇ ಶಾಸಕರ ಸಹಕಾರದೊಂದಿಗೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ವನಿತಾ ಪ್ರಸಾದ್, ಬಿಜೆಪಿ ಮುಖಂಡರಾದ ಅಜಯ್ ಕುಲಶೇಖರ, ಪ್ರಸಾದ್ ಆಚಾರ್ಯ,ರವಿಚಂದ್ರ, ಸುಮನ, ವಸಂತ್ ಜೆ ಪೂಜಾರಿ, ಶುಭಕರ, ಪ್ರಸಾದ್, ಗೋಪಾಲ್, ಶ್ರೀನಿವಾಸ್, ಪದ್ಮನಾಭ, ಸುರೇಂದ್ರ, ವಾಸು ಕೋಟ್ಯಾನ್, ಪ್ರಕಾಶ್ ಮಹದೇವ, ಜಗನ್ನಾಥ್ ಶೆಣೈ, ಯೋಗಿಶ್, ಅಚ್ಯುತ್,ಸತ್ಯವತಿ, ಚಂಪಾ, ಮೋಹಿನಿ, ಸೌಮ್ಯ, ರಾಧಾ, ಜಯಂತಿ, ರೇಗೋ ಡಿ.ಸಿಲ್ವ, ಚಂದ್ರಾವತಿ, ಭಾರತಿ, ಮೀರಾ, ಗಿರಿಜಾ, ಶೋಭಾ, ವರುಣ್, ಗಣೇಶ್, ತುಕರಾಮ್, ಕುಮಾರ್, ಮುಖೇಶ್, ವಾಸುಕಿ ಮುಂತಾದವರು ಉಪಸ್ಥಿತರಿದ್ದರು.