ವಿಶ್ವ ಪರಿಸರ ದಿನಾಚರಣೆ ಬಂಟ್ವಾಳದಲ್ಲಿ ಜೆಸಿಐ ವತಿಯಿಂದ ವನಮಹೋತ್ಸವ

ಬಂಟ್ವಾಳ: ವಿಶ್ವ ಪರಿಸರ ದಿನದ ಅಂಗವಾಗಿ ಜೆಸಿಐ ಬಂಟ್ವಾಳದ ವತಿಯಿಂದ ಮಾರ್ನಬೈಲಿನಲ್ಲಿರುವ ಆರೋಗ್ಯ ಉಪಕೇಂದ್ರದಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು.  ತಾಲೂಕು ಪಂಚಾಯತಿ ಸದಸ್ಯ ಸಂಜೀವ ಪೂಜಾರಿ ಬೊಳ್ಳಾಯಿ ಹಾಗೂ ಉದ್ಯಮಿ ಡಾ. ಎಸ್. ಎಂ. ಗೋಪಾಲಕೃಷ್ಣ ಆಚಾರ್ಯ ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಜೆಸಿಐ ಬಂಟ್ವಾಳದ ಅಧ್ಯಕ್ಷ ಉಮೇಶ್ ಆರ್. ಮೂಲ್ಯ ಮಾತನಾಡಿ ಜೆಸಿ ಸಂಸ್ಥೆಯ ಮೂಲಕ ವಿಶ್ವದಾದ್ಯಂತ ವನ ಮಹೋತ್ಸವ ಕಾರ್ಯಕ್ರಮವನ್ನು ನಡೆಸಿ ಗಿಡ ನೆಡುವ ಕಾರ್ಯ ಮಾಡಲಾಗುತ್ತಿದೆ. ಪರಿಸರದ ಮೇಲಿನ ದೌರ್ಜನ್ಯದ ದುಷ್ಪರಿಣಾಮ ಪ್ರಸ್ತುತ ಕೋವಿಡ್ ಸನ್ನಿವೇಶದಲ್ಲಿ ಅರಿವಾಗುತ್ತಿದೆ. ಇನ್ನಾದರೂ ಎಚ್ಚೆತ್ತುಕೊಂಡು ಗಿಡಗಳನ್ನು ನೆಟ್ಟು ಪರಿಸರವನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಮುಂದಡಿ ಇಡಬೇಕಾಗಿದೆ ಎಂದರು.
ಜೆಸಿಐ ಬಂಟ್ಚಾಳದ ನಿಕಟಪೂರ್ವ ಅಧ್ಯಕ್ಷ ಸದಾನಂದ ಬಂಗೇರ, ಉಪಕೇಂದ್ರದ ಆರೋಗ್ಯ ಸಹಾಯಕಿ ಸುಮನ ಕ್ರಾಸ್ತ, ಪ್ರಮುಖರಾದ ಜಯಶಂಕರ್ ಕಾನ್ಸಲೆ, ಇಕ್ಬಾಲ್ ನಂದಾವರ, ಸಂತೋಷ್ ಕುಚ್ಚಿಗುಡ್ಡೆ, ಜೆಸಿಐ ಕೋಶಾಧಿಕಾರಿ, ರವೀಣ ಕುಲಾಲ್, ಸದಸ್ಯರಾದ ಸುಧಾಕರ ಶೆಟ್ಟಿ, ಜೆಸಿರೆಟ್ ವಿಭಾಗದ ಅಧ್ಯಕ್ಷೆ ವಿದ್ಯಾ ಉಮೇಶ್ ಮೂಲ್ಯ, ರಶ್ಮಿ ವಿ.ಶೆಟ್ಟಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.