ನದಿಯ ಒಡಲು ಸೇರುತ್ತಿರುವ ಕೃಷಿ ಭೂಮಿಗಳು :ಕೃಷಿಕರ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಆಗ್ರಹ
ಪಶ್ವಿಮ ಘಟ್ಟದಿಂದ ಹರಿದು ಬರುವ ಭಾರೀ ಪ್ರವಾಹದ ನದಿಗಳಿಂದ ಆಗುವ ಭೂ ಸವೆತ, ಕೃಷಿ ಭೂಮಿ ನಾಶವನ್ನು ಕಾಣಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಾಗಲಿ, ಸಂಬಂಧ ಪಟ್ಟ ಜನಪ್ರತಿನಿಧಿಗಳು ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಆಗುಂಬೆ ಬಳಿಯ ಸೀತಾನದಿಯಲ್ಲಿ ಹುಟ್ಟಿ ಬರುವ ಸೀತಾ ನದಿ ಅತೀ ಹೆಚ್ಚು ತಿರುವುಗಳನ್ನು ಮತ್ತು ವೇಗದ ತೀರ್ವತೆ ಇರುವ ನದಿಯಾಗಿದೆ. ನೀಲಾವರ ಬಳಿಯ ಬಾವಲಿ ಕುದ್ರು ಪ್ರದೇಶದ ಉತ್ತರ ಭಾಗ ಕೂರಾಡಿ ಬಂಡೀಮಠ ಭಾಗದ ಕೃಷಿ ಭೂಮಿ ವರ್ಷವೂ ನದಿ ಪಾಲಾಗಿ ತೀರಾ ಅಪಾಯ ಸ್ಥಿತಿ ಉಂಟಾಗಿದೆ. ಸವೆತದ ತೀರ್ವತೆಯನ್ನು ಮನಗಂಡು ದೋಣಿ ಮೂಲಕ ಸಾಗಿ ನೈಜ ವರದಿ ಸಿದ್ದಪಡಿಸಲಾಗಿದೆ.
ನದಿ ತೀರದಲ್ಲಿ ಭೂಮಿಯ ಸವೆತ ತಡೆಯಲು ನೆಡಲಾದ ಮರಗಿಡಗಳು ಬಿದ್ದು ನದಿಯ ಒಡಲು ಸೇರಿದೆ. ನದಿಯ ಉತ್ತರ ಭಾಗ ಕುಂದಾಪುರ, ದಕ್ಷಿಣ ಭಾಗ ಉಡುಪಿ ವಿಧಾನ ಸಭಾ ಕ್ಷೇತ್ರವಾಗಿದ್ದು ಉಡುಪಿ ಭಾಗದ ಅನೇಕ ಕಡೆ ಕಲ್ಲು ದಂಡೆ ಕಟ್ಟಿ ಭೂಮಿಯ ಸವೆತ ತಡೆಯಲಾಗಿದೆ. ಆದರೆ ಉತ್ತರ ಭಾಗದ ಈ ಪ್ರದೇಶದ ಗಂಭೀರತೆಯನ್ನು ಕುಂದಾಪುರ ಶಾಸಕರು ಗಮನ ಹರಿಸಿ ನದಿ ದಂಡೆಯನ್ನು ಕಟ್ಟಿ ಭೂ ಸವೆತ ಕಡಿಮೆ ಮಾಡಿ ನದಿ ತೀರದ ಜನರ ಮತ್ತು ಕೃಷಿಕರಿಗೆ ಅನುಕೂಲವಾಗುವಂತೆ ಮಾಡಬೇಕಾಗಿದೆ.