ಶ್ರೀನಿವಾಸ್ ವಿವಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ & ಟೂರಿಸಂ:- ಆನ್‌ಲೈನ್ ಮೂಲಕ ಅಡುಗೆ ಸ್ಪರ್ಧೆ ಆಯೋಜನೆ
ಶ್ರೀನಿವಾಸ್ ಯೂನಿವರ್ಸಿಟಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ & ಟೂರಿಸಂ ಇದರ ಮೂಲಕ ಆನ್‌ಲೈನ್ ಅಡುಗೆ ಸ್ಪರ್ಧೆ “ಉಪಹಾರ ಮತ್ತು ಅದರ ಸಂಬಂಧಿತ ಭಕ್ಷ್ಯಗಳ ಪಟ್ಟಿ”ಯ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದಾರೆ.
ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್‌ನ ಶ್ರೀನಿವಾಸ ಯೂನಿವರ್ಸಿಟಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ & ಟೂರಿಸಂನ ವತಿಯಿಂದ ಭವಿಷ್ಯದ ಬಾಣಸಿಗರಾಗಲು ಬಯಸುವ ದ್ವಿತೀಯ ಪಿಯುಸಿ ಹಾಗೂ 10+2 ವಿದ್ಯಾರ್ಥಿಗಳಿಗೆ ಆನ್ಲೈನ್ ವೇದಿಕೆಯ ಮೂಲಕ ಅಡುಗೆ ಸ್ಪರ್ಧೆಯನ್ನು ಜುಲೈ 10ರ ಶನಿವಾರದಂದು ಆಯೋಜಿಸಲಾಗುತ್ತಿದೆ.
ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಬಹುದು. ಉಪಹಾರ ಮತ್ತು ಅವುಗಳಿಗೆ ಸಂಬಂಧಿತ ಭಕ್ಷ್ಯಗಳನ್ನು ಪಟ್ಟಿಯಲ್ಲಿ ಮುಖ್ಯವಾಗಿ ಸೇರಿಸಬಹುದಾಗಿದೆ. ಇದನ್ನು ಸ್ಪರ್ಧಿಗಳು ಸ್ಪರ್ಧೆಯ ದಿನದಂದು ತಯಾರಿಸಿ ಮತ್ತು ಪ್ರದರ್ಶಿಸಬೇಕು ಎಂದು ಕಾಲೇಜಿನ ಡೀನ್ ಪ್ರೊ. ಸ್ವಾಮಿನಾಥನ್ ಪ್ರಕಟಣೆಯಲ್ಲಿ ತಿಳಿಸಿದರು