Home 2022 August (Page 27)

ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆಗೆ ಅಖಿಲ ಭಾರತೀಯ ಸಂತ ಸಮಿತಿಯಿಂದ ಖಂಡನೆ

ಇತ್ತೀಚಿನ ದಿನಗಳಲ್ಲಿ ಹಿಂದೂ ಯುವಕರ ಹತ್ಯೆಗಳು ಪದೇ ಪದೇ ನಡೆಯುತ್ತಿದೆ. ಹಿಂದೂ ಯುವಕರನ್ನೇ ಗಮನದಲ್ಲಿಟ್ಟು ಹತ್ಯೆ ಮಾಡುತ್ತಿರುವುದು ಗಂಭೀರವಾದ ವಿಷಯ. ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಿರುವುದಕ್ಕೆ ಅಖಿಲ ಭಾರತೀಯ ಸಂತ ಸಮಿತಿ ಖಂಡನೆ ವ್ಯಕ್ತಪಡಿಸಿದೆ. ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ

ಆರೋಪಿಗಳ ಪರಿಚಯ ಇರುವವರು ಇಲಾಖೆಗೆ ಸಹಕರಿಸಬೇಕು ,ಡಿಜಿಪಿ ಪ್ರವೀಣ್ ಸೂದ್ ಹೇಳಿಕೆ

ಯಾವುದೇ ಪ್ರಕರಣವಿದ್ದರೂ ಅದರ ಬಗ್ಗೆ ಕೆಲವು ನಾಗರಿಕರಿಗೆ ಮಾಹಿತಿ ಇರುತ್ತದೆ. ಅಂಥವರು ಮುಂದೆ ಬಂದು ಪೆÇಲೀಸರಿಗೆ ಮಾಹಿತಿ ನೀಡಿದರೆ ಪ್ರಕರಣ ಬೇಧಿಸಲು ಸುಲಭವಾಗುತ್ತದೆ. ಮಾಹಿತಿ ನೀಡದಿದ್ದಲ್ಲಿ ಅವರೂ ಇದರಲ್ಲಿ ಭಾಗಿದಾರರೆಂದು ನಾವು ತಿಳಿಯಬೇಕಾಗುತ್ತದೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದರು. ಮಂಗಳೂರಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ

ರಸ್ತೆ ಬದಿಯ ಹುಲ್ಲು, ಮರದ ಗೆಲ್ಲು ತೆರವು : ಯುವಕೇಸರಿ ಅಬೀರಿ ಸ್ವಚ್ಛತಾ ಶ್ರಮದಾನ

ವಿಟ್ಲ: ಯುವಕೇಸರಿ ಅಬೀರಿ ಅತಿಕಾರಬೈಲು ಚಂದಳಿಕೆ ಸಂಘಟನೆಯ ವತಿಯಿಂದ ಶ್ರಮದಾನ ನಡೆಯಿತು. ಅತಿಕಾರಬೈಲುವಿನಿಂದ ಚಂದಳಿಕೆ ಜಂಕ್ಷನ್ ವರೆಗೆ ಸುಮಾರು 2 ಕಿಲೋ ಮೀಟರ್ ದೂರದ ರಸ್ತೆಯ ಬದಿಯ ಹುಲ್ಲು ಮತ್ತು ಮರದ ಗೆಲ್ಲುಗಳನ್ನು ತೆರವುಗೊಳಿಸುವ ಸ್ವಚ್ಚತಾ ಶ್ರಮದಾನ ನಡೆಯಿತು. ಯುವಕೇಸರಿಯ 40 ಕಿಂತಲೂ ಹೆಚ್ಚು ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದ್ದರು. ವಿವಿಧ ಗ್ರಾಮ

ಪೊಳಲಿ ದೇವಳದ ಚೆಂಡಿನ ಗದ್ದೆಯಲ್ಲಿ ಭತ್ತ ನಾಟಿ

ಬಂಟ್ವಾಳ: ದ.ಕ.ಜಿ.ಪಂ., ಬಂಟ್ವಾಳ ಕೃಷಿ ಇಲಾಖೆಯ ಸಹಯೋಗದೊಂದಿಗೆ ಪೊಳಲಿ ದೇವಳದ ಚೆಂಡಿನ ಗದ್ದೆಯಲ್ಲಿ ಯಾಂತ್ರೀಕೃತ ಭತ್ತದ ನಾಟಿ ಕಾರ್ಯಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸ್ಥಳೀಯರ ಸಹಕಾರದೊಂದಿಗೆ ಚೆಂಡಿನ ಗದ್ದೆಯಲ್ಲಿ ಭತ್ತದ ನಾಟಿ ಕಾರ್ಯಕ್ಕೆ ಚಾಲನೆ

ಸ್ವಾಮೀಜಿಗಳಿಂದ ಅನಾಗರಿಕ ವರ್ತನೆ ಸರಿಯಲ್ಲ, ಹೆಚ್.ಡಿ. ಕುಮಾರಸ್ವಾಮಿ ಆರೋಪ

ಹತ್ಯೆ ಮಾಡಿದವರ ತಲೆ ಕಡಿಯುತ್ತೇವೆ ಎಂಬ ಹೇಳಿ ನೀಡಿರುವ ಕಾಳಿ ಸ್ವಾಮಿ ವರ್ತನೆ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಅವರು ಪುತ್ತೂರು ನೆಹರೂನಗರದ ಮಾಸ್ಟರ್ ಪ್ಲಾನರಿಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮಂದೊಂದಿಗೆ ಮಾತನಾಡಿದರು. ಇಂತಹ ಹೇಳಿಕೆ ನೀಡುವುದು ಸ್ವಾಮೀಜಿಗಳ ಲಕ್ಷಣವಲ್ಲ. ಸ್ವಾಮೀಜಿಗಳು ಅನಾಗರಿಕರಂತೆ ವರ್ತಿಸುತ್ತಿದ್ದಾರೆ.

ಅಳಪೆಯ ಶ್ರೀ ಮಹಾದೇವಿ ಭಜನಾ ಮಂಡಳಿ 24ನೇ ವರ್ಷದ ಸಮವಸ್ತ್ರ ವಿತರಣೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಂಗಳೂರಿನ ಅಳಪೆಯ ಶ್ರೀ ಮಹಾದೇವಿ ಭಜನಾ ಮಂಡಳಿಯ ವತಿಯಿಂದ 24ನೇ ವರ್ಷದ ಸಮವಸ್ತ್ರ ವಿತರಣೆ, ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಮಂದಿರದ ಸದಸ್ಯರಾದ ಸುರೇಶ್ ಸಾಲಿಯಾನ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ 42 ಮಂದಿಗೆ ಸಮವಸ್ತ್ರ

ಕಲ್ಮಕಾರಿನಲ್ಲಿ ಕೃಷಿಕರ ತೋಟಕ್ಕೆ ನೀರು ನುಗ್ಗಿ ಕೃಷಿ ಹಾನಿ

ಕರಾವಳಿಯಲ್ಲಿ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಸುಳ್ಯ ತಾಲೂಕಿನಲ್ಲಿ ನಿನ್ನೆ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಕೃಷಿ ಹಾನಿಯಾಗಿದೆ. ಇನ್ನು ಕಲ್ಮಕಾರಿನ ಕಡಮಕಲ್ಲು ಕಾಡಿನಲ್ಲಿ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದ್ದು ಅಪಾರ ಪ್ರಮಾಣದ ಮಣ್ಣು ಮಿಶ್ರಿತ ನೀರು ಹರಿದು ಸೇತುವೆಗಳು ಕೊಚ್ಚಿ ಹೋಗಿವೆ. ಕೃಷಿಕರ ಜಮೀನಿಗೆ ನೀರು ನುಗ್ಗಿ ಅಪಾರ

ಫಾಝಿಲ್ ಮನೆಗೆ ಎಸ್ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಭೇಟಿ

ಸುರತ್ಕಲ್ ನಲ್ಲಿ ಸಂಘಪರಿವಾರ ಬೆಂಬಲಿತ ದುಷ್ಕರ್ಮಿಗಳಿಂದ ಇತ್ತೀಚೆಗೆ ಬರ್ಬರವಾಗಿ ಹತ್ಯೆಗೀಡಾದ ಫಾಝಿಲ್ ಮನೆಗೆ ಎಸ್ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಭೇಟಿ ಕೊಟ್ಟು ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊಲೆಗಡುಕರಿಗೆ ತಕ್ಕ ಶಿಕ್ಷೆ ಆಗಬೇಕು. ಇದಕ್ಕೆ ಬೇಕಾದ ಕಾನೂನು ಹೋರಾಟದಲ್ಲಿ ಪಕ್ಷ ಫಾಝಿಲ್

ಹಿರಿಯ ಪತ್ರಿಕೋದ್ಯಮಿ ಟಿ. ಮೋಹನ್ ದಾಸ್ ಪೈ ನಿಧನ

ಮಣಿಪಾಲದ ಪೈ ಕುಟುಂಬದ ಹಿರಿಯರಾದ ತೋನ್ಸೆ ಮೋಹನದಾಸ್ ಪೈ (89) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಆಸ್ಪತ್ರೆಯಲ್ಲಿ ಇತ್ತೀಚಿಗೆ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಡಾ. ಟಿಎಂಎ ಪೈ ಪ್ರತಿಷ್ಠಾನ, ಶಿಕ್ಷಣ ಸಂಸ್ಥೆ ಎಂಜಿಎಂ ಕಾಲೇಜಿನ ಟ್ರಸ್ಟಿ, ಸಿಂಡಿಕೇಟ್ ಬ್ಯಾಂಕಿನ ಪೂರ್ವ ರೂಪ ಐಸಿಡಿಎಸ್ ಲಿ., ಮಣಿಪಾಲ್ ಮೀಡಿಯ

ಪುತ್ತೂರು ಜ್ಯೂಸ್ ಸೆಂಟರ್ ಗೆ ಬೆಂಕಿ

ಪುತ್ತೂರು: ಪುತ್ತೂರು ಬಸ್ ನಿಲ್ದಾಣದ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಜ್ಯೂಸ್ ಸೆಂಟರ್ ವೊಂದರಲ್ಲಿ ಅಡುಗೆ ಅನಿಲದಿಂದಾಗಿ ಸಂಭವಿಸಬಹುದಾದ ಭಾರಿ ಬೆಂಕಿ ದುರಂತವೊಂದು ಪೊಲೀಸ್ ಮತ್ತು ಗೃಹರಕ್ಷಕ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ತಪ್ಪಿದ ಘಟನೆ ಆ.1 ರ ನಸುಕಿನ ಜಾವ ನಡೆದಿದೆ. ಯೋಗೀಶ್ ರೈ ಮಾಲಕತ್ವದ ಜ್ಯೂಸ್ ಸೆಂಟರ್ ನೊಳಗೆ 3 ಗಂಟೆ ರಾತ್ರಿ ಸುಮಾರಿಗೆ ಬೆಂಕಿಯ