Home 2023 February (Page 6)

ರಜನಿ ಶೆಟ್ಟಿಗೆ ಮಂಗಳೂರು ಪ್ರೆಸ್ ಕ್ಲಬ್‌ನ ವರ್ಷದ ಪ್ರಶಸ್ತಿ

ಮಂಗಳೂರು: ಪ್ರತಿದಿನ 800ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಊಟ ಹಾಕುವ, ತನ್ನ ಮನೆಯಲ್ಲೇ 55 ಬೀಡಾಡಿ ನಾಯಿ, 15 ಬೆಕ್ಕು, 11 ಗಿಡುಗ, ದನ, ಕಾಗೆ, ಕೋಗಿಲೆ, ಆಮೆ, ಮೊಲಗಳನ್ನು ಸಾಕಿ ಸಲಹುತ್ತಿರುವ ಮಂಗಳೂರು ಬಲ್ಲಾಳ್‌ಬಾಗ್ ನಿವಾಸಿ ರಜನಿ ಶೆಟ್ಟಿ ಅವರನ್ನು ಮಂಗಳೂರು ಪ್ರೆಸ್ ಕ್ಲಬ್‌ನ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಂಗಳೂರು ಪ್ರೆಸ್ ಕ್ಲಬ್ ಕಾರ್ಯಕಾರಿ

ತಿರುಪತಿ ಕ್ಷೇತ್ರದ ಭಕ್ತಿ ವಾಹಿನಿಯ ನಿರ್ದೇಶಕರಾಗಿ ಡಾ.ವಸಂತ ಕವಿತಾ ನೇಮಕ

ತಿರುಪತಿ ಕ್ಷೇತ್ರದ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾಗಿ ಡಾ.ವಸಂತ ಕವಿತ ಅವರು ನೇಮಕಗೊಂಡಿದ್ದಾರೆ.ತಿರುಪತಿ ಕ್ಷೇತ್ರದ ಭಕ್ತಿ ಚಾನೆಲ್ ಗೆ ವಸಂತ ಕವಿತಾ ಸೇರಿದಂತೆ ನಾಲ್ಕು ಮಂದಿ ಹೊಸ ನಿರ್ದೇಶಕರ ನೇಮಕಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ‌ಅನುಮೋದನೆ ನೀಡಿದೆ.ಬೆಂಗಳೂರಿನವರಾಗಿರುವ ಶ್ರೀಮತಿ ವಸಂತ ಕವಿತಾ ಅವರು

’ಪೂವರಿ’ ಪತ್ರಿಕೆಗೆ ರಾಜ್ಯ ಗಡಿನಾಡ ಧ್ವನಿ ಮಾಧ್ಯಮ ಪ್ರಶಸ್ತಿ

ಪುತ್ತೂರು: ಗಡಿನಾಡ ಧ್ವನಿ, ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ರಿ., ಆರ್ಲಪದವು ಹಾಗೂ ಇತರ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಯುವ 6ನೇ ಕರ್ನಾಟಕ ಗಡಿನಾಡ ಸಮ್ಮೇಳನದ ’ಗಡಿನಾಡ ಧ್ವನಿ ರಾಜ್ಯ ಮಾಧ್ಯಮ ಪ್ರಶಸ್ತಿಗೆ 2014 ರಲ್ಲಿ ಆರಂಭಿಸಲಾದ ವಿಜಯ್‌ಕುಮಾರ್ ಭಂಡಾರಿ ಹೆಬ್ಬಾರಬೈಲು ಪ್ರಧಾನ ಸಂಪಾದಕತ್ವದಲ್ಲಿ ಹೊರಡುತ್ತಿರುವ ಒಂದುವರೆ ಕೋಟಿ ತುಳುವರ ಏಕೈಕ ತುಳು

ಶ್ರಮದಿಂದ ಗುರಿ ತಲುಪಲು ಸಾಧ್ಯ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ

ಮಿಜಾರು: ಪರಿಶ್ರಮ ಇಲ್ಲದೆ ಸಾಧನೆ ಅಸಾಧ್ಯ. ಶ್ರಮದಿಂದ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ಯಂಗ್ ಇಂಡಿಯಾದ ‘ಯುವ’ ಕಾರ್ಯ ನಿರ್ವಹಣಾ ಮಂಡಳಿಯ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಬುಧವಾರ ಅವರು ಮಾತನಾಡಿದರು. ಸಮಯಕ್ಕೆ

ಕಲ್ಲಬೆಟ್ಟುವಿನಲ್ಲಿ ಮದ್ಯದಂಗಡಿ ತೆರೆಯದಂತೆ ಜನಜಾಗೃತಿ ವೇದಿಕೆ ಮನವಿ

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಕಲ್ಲಬೆಟ್ಟುವಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮದ್ಯದಂಗಡಿ ವಿರುದ್ಧ ಸ್ಥಳೀಯ ದಲಿತ ಸಂಘರ್ಷ ಸಮಿತಿ ಮತ್ತು ಸಾರ್ವಜನಿಕರ ದೂರಿನ ಮೇರೆಗೆ ಬುಧವಾರ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಮತ್ತು ಯೋಜನೆಯ ಪದಾಧಿಕಾರಿಗಳ ಸಭೆಯನ್ನು ವಲಯ ಕಚೇರಿಯಲ್ಲಿ ನಡೆಸಿದರು. ಕಲ್ಲಬೆಟ್ಟುವಿನಲ್ಲಿ ಈಗಾಗಲೇ ಅನಧಿಕೃತ ಮದ್ಯ ಮಾರಾಟ

ವಿಟ್ಲ: ಮಿತ್ತೂರು ಫ್ರೀಡಂ ಕಮ್ಯುನಿಟಿ ಹಾಲ್ ಎನ್.ಐ ಎ ವಶಕ್ಕೆ

ವಿಟ್ಲ: ಫ್ರೀಡಂ ಎಜ್ಯುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಒಡೆತನಕ್ಕೆ ಸೇರಿದ ಫ್ರೀಡಂ ಕಮ್ಯುನಿಟಿ ಹಾಲ್ ಇಡ್ಕಿದು ಗ್ರಾಮದ 213ನೇ ಸರ್ವೇ ನಂಬರ್ ನಲ್ಲಿ ಸುಮಾರು 0.20 ಎಕ್ರೆ ಜಾಗದಲ್ಲಿದ್ದು, ಪಿ.ಎಫ್.ಐ. ಸದಸ್ಯರಿಗೆ ಭಯೋತ್ಪಾದನಾ ಚಟುವಟಿಕೆ ನಡೆಸಲು ಶಸ್ತ್ರಾಸ್ತ್ರ ತರಬೇತಿಯನ್ನು ನೀಡುತ್ತಿದೆ ಎಂದು ತನಖೆ ನಡೆಸಿ, ಎನ್. ಐ. ಎ. ಕಾನೂನು ಬದ್ಧವಾಗಿ ವಶಕ್ಕೆ

ಪ್ರಗತಿಪರ ಕೃಷಿಕ ಆಂಡ್ರೊ ಮಿಸ್ಕಿಟ್ ನಿಧನ

ಕಿನ್ನಿಗೋಳಿ: ಪೊಂಪೈ ಪದವಿಪೂರ್ವ ಕಾಲೇಜು ಐಕಳ ಇದರ ವಾಣಿಜ್ಯ ವಿಭಾಗದ ನಿವೃತ ಲ್ಯಾಬ್ ಅಸಿಸ್ಟೆಂಟ್ ಹಾಗೂ ಕಟೀಲು ಸಂತ ಜಾಕೋಬ್ ದೇವಾಲಯದ ಮಾಜಿ ಉಪಾಧ್ಯಕ್ಷರು ಮತ್ತು ಪ್ರಗತಿಪರ ಕೃಷಿಕರು ಆಗಿರುವಂತ ಆಂಡ್ರೊ ಮಿಸ್ಕಿಟ್ ಇಂದು ಬೆಳಿಗ್ಗೆ ನಿಧನರಾದರು. ಅವರು ತೋಟದ ಕೆಲಸದಲ್ಲಿ ತೊಡಗಿರುವ ಸಂದರ್ಭದಲ್ಲಿ ಫೆಬ್ರವರಿ ಒಂದರಂದು ಹೆಜ್ಜೇನು ನೊಣಗಳ ದಾಳಿಗೆ ಸಿಲುಕಿ

ಕಿನ್ನಿಗೋಳಿ : ಬಲಿಪ ನಾರಾಯಣ ಮತ್ತು ವೇಷಧಾರಿ ಅಂಬಾತನಯ ಮುದ್ರಾಡಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಕಿನ್ನಿಗೋಳಿ: ಯಕ್ಷಲಹರಿ(ರಿ) ಕಿನ್ನಿಗೋಳಿ, ದ.ಕ. ಮತು ವಿಜಯ ಕಲಾವಿದರು ಕಿನ್ನಿಗೋಳಿ ಹಾಗು ಯುಗಪುರುಷ ಕಿನ್ನಿಗೋಳಿ ಇದರ ವತಿಯಿಂದ ಗುರುವಾರ ಸಂಜೆ.5-30ಕ್ಕೆ ಗಂಟೆಗೆ ಯುಗಪುರುಷದ ಸಭಾಭವನದಲ್ಲಿ ತೆಂಕುತಿಟ್ಟು ಯಕ್ಷರಂಗದ ಭೀಷ್ಮರೆಂದೇ ಖ್ಯಾತರಾದ ಬಲಿಪ ನಾರಾಯಣ ಭಾಗವತರ ಮತ್ತು ಕವಿ,ಪ್ರಸಂಗಕರ್ತ,ಅರ್ಥಧಾರಿ ವೇಷಧಾರಿ ಅಂಬಾತನಯ ಮುದ್ರಾಡಿ ಅವರಿಗೆ ಶ್ರದ್ಧಾಂಜಲಿ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : ಅತಿರುದ್ರ ಮಹಾಯಾಗ ದಿನ 2

ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಂದು ಶುಭಾರಂಭಗೊಂಡ ಅತಿರುದ್ರ ಮಹಾಯಾಗದ, ಎರಡನೇ ದಿನ ಫೆಬ್ರವರಿ 23, 2023 ರ ಗುರುವಾರ ಬೆಳಗ್ಗೆ ಅತಿರುದ್ರ ಯಾಗಮಂಟಪದಲ್ಲಿ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ, ಶ್ರೀ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ತಿಲಹೋಮ, ಪವಮಾನ ಹೋಮ, ಕೂಷ್ಮಂಡ ಹೋಮ, ನವಕಪ್ರಧಾನ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : ಅತಿರುದ್ರ ಮಹಾಯಾಗ 2ನೇ ದಿನದ ಸಭಾಕಾರ್ಯಕ್ರಮ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 23, 2023 ರ ಗುರುವಾರದಂದು ನಡೆದ ಅತಿರುದ್ರ ಮಹಾಯಾಗದ ಎರಡನೇ ದಿನದ ಸಭಾಕಾರ್ಯಕ್ರಮವನ್ನು ಕೃಷ್ಣಪ್ಪ ಸಾಮಂತ ಸ್ಮಾರಕ ಸರಕಾರಿ ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆಯ ಸಂಸ್ಥಾಪಕರಾದ ಶ್ರೀಧರ್ ಕೆ. ಸಾಮಂತ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ