ಕಲ್ಲಬೆಟ್ಟುವಿನಲ್ಲಿ ಮದ್ಯದಂಗಡಿ ತೆರೆಯದಂತೆ ಜನಜಾಗೃತಿ ವೇದಿಕೆ ಮನವಿ

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಕಲ್ಲಬೆಟ್ಟುವಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮದ್ಯದಂಗಡಿ ವಿರುದ್ಧ ಸ್ಥಳೀಯ ದಲಿತ ಸಂಘರ್ಷ ಸಮಿತಿ ಮತ್ತು ಸಾರ್ವಜನಿಕರ ದೂರಿನ ಮೇರೆಗೆ ಬುಧವಾರ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಮತ್ತು ಯೋಜನೆಯ ಪದಾಧಿಕಾರಿಗಳ ಸಭೆಯನ್ನು ವಲಯ ಕಚೇರಿಯಲ್ಲಿ ನಡೆಸಿದರು.
ಕಲ್ಲಬೆಟ್ಟುವಿನಲ್ಲಿ ಈಗಾಗಲೇ ಅನಧಿಕೃತ ಮದ್ಯ ಮಾರಾಟ ವ್ಯಾಪಕವಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಗೆ ಸೂಚಿಸುವುದು ಮತ್ತು ಅನಧಿಕೃತ ಮದ್ಯ ಮಾರಾಟವನ್ನು ತಡೆಯುವುದು ಎಂದು ನಿರ್ಧರಿಸಲಾಯಿತು. ಪ್ರಸ್ತಾವಿತ ಮದ್ಯದಂಗಡಿಗೆ ಪರವಾನಿಗೆ ನೀಡದಂತೆ ಅಬಕಾರಿ ಇಲಾಖೆಗೆ ಭೇಟಿ ಕೊಟ್ಟು ಅಬಕಾರಿ ನಿರೀಕ್ಷಕರನ್ನು ಸಂಪರ್ಕಿಸಿ ಮನವಿ ಸಲ್ಲಿಸುವುದು ಹಾಗೂ ಜಿಲ್ಲಾಧಿಕಾರಿಗಳಲ್ಲಿ ಈ ಕುರಿತಾಗಿ ತಿಳಿಸುವುದು, ಮದ್ಯದಂಗಡಿ ಸ್ಥಾಪನೆ ಮಾಡುವಂತಹ ಈ ಸ್ಥಳದಲ್ಲಿ ಕಾಲೇಜು ಹತ್ತಿರದಲ್ಲಿದೆ. ಸುಮಾರು 70ಕ್ಕೂ ಹೆಚ್ಚು ಮಂದಿ ಇರುವ ದಲಿತ ಕುಟುಂಬಗಳಿವೆ. ವಿದ್ಯಾರ್ಥಿಗಳ ವಸತಿ ನಿಲಯಗಳಿವೆ. ಪ್ರದೇಶದಲ್ಲಿ ದೇವಸ್ಥಾನ, ಶಾಲೆ, ಸೆಂಟ್ರಲ್ ಸ್ಕೂಲ್ ಮತ್ತು ಹಲವಾರು ಮಹಿಳೆಯರು ಮತ್ತು ಹಾದು ಹೋಗುವಂತಹ ಸ್ಥಳವಾಗಿದೆ. ಮದ್ಯದಂಗಡಿಯಿoದಾಗಿ ಇಲ್ಲಿ ಭಯ ಭೀತಿ ಹಾಗೂ ಶಾಂತಿ ವಾತಾವರಣ ಸೃಷ್ಟಿಯಾಗುವುದು. ಇದನ್ನು ನಿಲ್ಲಿಸಬೇಕೆಂದು ಸ್ಥಳೀಯರ ಮನವಿಯ ಮೇರೆಗೆ ಜನಜಾಗೃತಿ ವೇದಿಕೆಯವರು ಪರವಾನಿಗೆ ನೀಡದಂತೆ ಅಬಕಾರಿ ಇಲಾಖೆಗೆ ತಿಳಿಸಿ ಒಂದು ವೇಳೆ ಇದಕ್ಕೆ ಮೇಲು ಪರವಾನಿಗೆ ನೀಡಿದ್ದಲ್ಲಿ ಸ್ಥಳೀಯರು ಉದ್ದೇಶಿಸಿರುವ ಯಾವುದೇ ಕಾನೂನು ರೀತಿಯ ಹೋರಾಟಕ್ಕೆ ವೇದಿಕೆ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ನಿರ್ಣಯಿಸಲಾಯಿತು.
ವೇದಿಕೆಯ ತಾಲೂಕು ಅಧ್ಯಕ್ಷ ಸುಭಾಶ್ಚಂದ್ರ ಚೌಟ, ವಲಯಾಧ್ಯಕ್ಷ ಜೋಸ್ಸಿ ಮೆನೆಜಸ್, ದಿನೇಶ್, ವಾಸುದೇವ, ಜಗತ್ಪಾಲ ಹೆಗ್ಡೆ, ಲಕ್ಷಣ ಸುವರ್ಣ, ಪ್ರಾದೇಶಿಕ ನಿರ್ದೇಶಕ ವಿವೇಕ ವಿ., ಯೋಜನೆಯ ನಿರ್ದೇಶಕ ಸತೀಶ್ ಶೆಟ್ಟಿ, ಯೋಜನಾಧಿಕಾರಿ ನಾರಾಯಣ ಶೆಟ್ಟಿ, ತಿಮ್ಮಯ್ಯ ನಾಯ್ಕ, ಮೇಲ್ವಿಚಾರಕಿ ಮಮತಾ ಮತ್ತು ಒಕ್ಕೂಟದ ಪದಾಧಿಕಾರಿಗಳು, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಪಾಂಡೇಶ್ವರ ಉಪಸ್ಥಿತರಿದ್ದರು.ಬಳಿಕ ಅಬಕಾರಿ ನಿರೀಕ್ಷಕ ವಿಶ್ವನಾಥ ಪೈ ಅವರಿಗೆ ಮನವಿ ಸಲ್ಲಿಸಲಾಯಿತು.