ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : ಅತಿರುದ್ರ ಮಹಾಯಾಗ 2ನೇ ದಿನದ ಸಭಾಕಾರ್ಯಕ್ರಮ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 23, 2023 ರ ಗುರುವಾರದಂದು ನಡೆದ ಅತಿರುದ್ರ ಮಹಾಯಾಗದ ಎರಡನೇ ದಿನದ ಸಭಾಕಾರ್ಯಕ್ರಮವನ್ನು ಕೃಷ್ಣಪ್ಪ ಸಾಮಂತ ಸ್ಮಾರಕ ಸರಕಾರಿ ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆಯ ಸಂಸ್ಥಾಪಕರಾದ ಶ್ರೀಧರ್ ಕೆ. ಸಾಮಂತ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ರಘುಪತಿ ಭಟ್, ಬೆಂಗಳೂರಿನ ಬಾಲ ವಾಗ್ಮಿ ಕು. ಹಾರಿಕಾ ಮಂಜುನಾಥ್, ಉಡುಪಿಯ ಶಿವಾನಿ ಡೈಗ್ನೋಸ್ಟಿಕ್ ಸೆಂಟರ್ ನ ಮಾಲೀಕರಾದ ಮತ್ತು ವಿಜ್ಞಾನಿಗಳಾದ ಡಾ. ಶಿವಾನಂದ ನಾಯಕ್, ಉಡುಪಿಯ ಸ್ವದೇಶಿ ಔಷಧ ಭಂಡಾರ ಇದರ ಉದ್ಯಮಿಯಾದ ಭರತ್ ಪ್ರಭು, ಉಡುಪಿ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ರಾಧಾಕೃಷ್ಣ ಸಾಮಂತ್, ಶ್ರೀ ಉಮಾಮಹೇಶ್ವರ ದೇವಸ್ಥಾನದ ಉಪಾಧ್ಯಕ್ಷರಾದ ಅಶೋಕ್ ಪ್ರಭು, ದೇವಸ್ಥಾನದ ಶಾಶ್ವತ ಟ್ರಸ್ಟಿ ಯಾದ ದಿನೇಶ್ ಸಾಮಂತ್ ಉಡುಪಿಯ ಕೂಟ ಮಹಾಜಗತ್ತಿನ ಅಧ್ಯಕ್ಷರಾದ ಡಾ. ಎ. ಗಣೇಶ್, ಅತಿರುದ್ರ ಮಹಾಯಾಗದ ಸಂಚಾಲಕರಾದ ಡಾ. ನಾರಾಯಣ ಶೆಣೈ, ಅತಿರುದ್ರ ಮಹಾಯಾಗದ ಉಗ್ರಣ ಸಮಿತಿಯ ಸಂಚಾಲಕರಾದ ಪ್ರಕಾಶ್ ಪ್ರಭು, ಮಹಾಯಾಗದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಕಾರ್ಯಕರ್ತರ ಸಂಚಾಲಕರಾದ ಮಹಿಳೆ ಕಾರ್ಯಕರ್ತೆ ಡಾ. ಆಶಾ ಪಾಟೀಲ್, ದೇವಸ್ಥಾನದ ಮೊಕ್ತೇಸರಾದ ಸುಭಾಕರ್ ಸಾಮಂತ್ ಮತ್ತು ದಿನೇಶ್ ಪ್ರಭು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್ ಎಲ್ಲರನ್ನು ಸ್ವಾಗತಿಸಿದರು. ನಂತರ ಪ್ರತಿಮಾ ಕೋಡೂರು ಮತ್ತು ಬಳಗದವರಿಂದ ದಕ್ಷ-ಯಜ್ಞ ಹರಿಕಥೆ ಜರುಗಿತು.