Home 2025 January (Page 9)

ಬಡ ಕುಟುಂಬಕ್ಕೆ ಆಸರೆಯಾದ ಸುಧೀರ್ ಶೆಟ್ಟಿ ಕಣ್ಣೂರು:ಕೇಶವ ಸದನದ ಗೃಹ ಪ್ರವೇಶ ಕಾರ್ಯಕ್ರಮ

ಮಂಗಳೂರು: 30ನೇ ಕೊಡಿಯಾಲ್ ಬೈಲ್ ವಾರ್ಡ್‌ನ ವಿವೇಕ ನಗರ ಬಳಿ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಗಣೇಶ್ ಹಾಗೂ ರೋಹಿಣಿ ದಂಪತಿಗಳಿಗೆ ತಮ್ಮ ವೈಯಕ್ತಿಕ ನೆಲೆಯಲ್ಲಿ ನಿರ್ಮಿಸಿಕೊಟ್ಟ ‘ಕೇಶವ ಸದನ’ದ ಗೃಹ ಪ್ರವೇಶ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಸುಧೀರ್ ಶೆಟ್ಟಿ ಕಣ್ಣೂರು ಅವರು, “ನನ್ನ

ಮಂಗಳೂರು: ಎಸ್‌ ವಿಟಿ ಟ್ರೋಫಿ-2025: ಟ್ರೋಫಿ ಮತ್ತು ಜರ್ಸಿ ಬಿಡುಗಡೆ

ಎಸ್‌ವಿಟಿ ವೊಲಂಟೀಯರ್ಸ್ ಅಸೋಸಿಯೇಷನ್ ಹಾಗೂ ಆಭರಣ ಜ್ಯುವೆಲರ್ಸ್ ಜೊತೆ ಪ್ರಸ್ತುತ ಪಡಿಸುತ್ತಿರುವ ಎಸ್‌ವಿಟಿ ಟ್ರೋಫಿ-2025 ಜಿಎಸ್‌ಬಿ ವೊಲಂಟೀಯರ್ಸ್ ಪ್ರೀಮಿಯರ್ ಲೀಗ್ ಸೀಸನ್-3ರ ಟ್ರೋಫಿ ಅನಾವರಣ ಮತ್ತು ಜರ್ಸಿ ಲಾಂಚ್ ನಗರದ ಅಳಕೆಯ ಸಮೀಪದಲ್ಲಿರುವ ಪರ್ಫೆಕ್ಟ್ ಪಾಸ್ ಎಂಬಲ್ಲಿ ನಡೆಯಿತು.  ಎಸ್ ವಿ ಟಿ ವೊಲಂಟೀಯರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಸುರೇಶ್ ವಿ

ಮಂಜೇಶ್ವರ: ಹೊತ್ತಿ ಉರಿದ ಎಂಎಫ್ ಫ್ರೇಂ ವರ್ಕ್ ಪ್ಲೈವುಡ್ ಕಾರ್ಖಾನೆ: ಭಾರೀ ಪ್ರಮಾಣದ ಸಾಮಾಗ್ರಿಗಳು ನಾಶ

ಮಂಜೇಶ್ವರ: ಮಂಜೇಶ್ವರ ಬಟ್ಟಿ ಪದವಿನಲ್ಲಿ ಕಾಯಾಚರಿಸುತ್ತಿರುವ ಎಂ ಎಫ್ ಫ್ರೇಂ ವರ್ಕ್ ಕಾರ್ಖಾನೆಯಲ್ಲಿ ಶನಿವಾರ ಸಂಜೆ ವೇಳೆಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇದರ ಪರಿಣಾಮವಾಗಿ, ಕಾರ್ಖಾನೆ ಬಹುತೇಕ ಹೊತ್ತಿ ಉರಿದು ಭಾರೀ ಪ್ರಮಾಣದ ಸಾಮಾಗ್ರಿಗಳು ನಾಶಗೊಂಡಿದೆ. ಮಾಹಿತಿ ಅರಿತು ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕದಳ ಹಾಗೂ ಸ್ಥಳೀಯರು ಬೆಂಕಿಯನ್ನು ನಂದಿಸುವಲ್ಲಿ

ಸುಳ್ಯ: ಡಾ. ಅನುರಾಧಾ ಕುರುಂಜಿಯವರಿಗೆ “ಚೈತನ್ಯ ಶ್ರೀ ಪ್ರಶಸ್ತಿ ಪ್ರದಾನ

     ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತ್ ನವರು ಪ್ರಥಮ  ಬಾರಿಗೆ  ಕೊಡಮಾಡಿದ ಪ್ರತಿಷ್ಠಿತ  “ಚೈತನ್ಯ ಶ್ರೀ- 2024” ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಯಲಹಂಕದ ವಿ ಜೆ ಇಂಟರ್ ನ್ಯಾಷನಲ್ ಶಾಲಾ ಮೈದಾನದಲ್ಲಿ ರಾಜ್ಯ ಮಟ್ಟದ ನಾಲ್ಕನೇ ಬೃಹತ್ ವೈಜ್ಞಾನಿಕ ಸಮ್ಮೇಳನದಲ್ಲಿ ಹಮ್ಮಿಕೊಂಡಿದ್ದರು.   ಈ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿಗೆ

ಆಳ್ವಾಸ್‌ಗೆ ಸತತ 17ನೇ ಬಾರಿ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪ್ರಶಸ್ತಿ

ಮೂಡುಬಿದಿರೆ: ಪದವಿ ಪೂರ್ವ ಶಿಕ್ಷಣ ಇಲಾಖೆ ಇದರ ವತಿಯಿಂದ ರಾಯಚೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಬಾಲಕ ಬಾಲಕಿಯರು ಭಾಗವಹಿಸಿದ ತಂಡ ಎರಡು ವಿಭಾಗದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.ಬಾಲಕರ

ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ “ಉತ್ತುಂಗ ” ವಾರ್ಷಿಕ ಸಂಚಿಕೆ ಬಿಡುಗಡೆ

ಮೂಡುಬಿದಿರೆ: ವಾರ್ಷಿಕ ಸಂಚಿಕೆಗಳು ಶಿಕ್ಷಣ ಸಂಸ್ಥೆಯ ಸಾಹಿತ್ಯದ ಸೃಜನಾತ್ಮಕ ಚಟುವಟಿಗೆಗಳಿಗೆ ಹಿಡಿದ ಕೈಗನ್ನಡಿ ಎಂದು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ ನುಡಿದರು.ಅವರು ಕಾಲೇಜಿನ ಕುವೆಂಪು ಸಭಾಂಗಣ ದಲ್ಲಿ ಶನಿವಾರ ನಡೆದ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ “ಉತ್ತುಂಗ” ಚೊಚ್ಚಲ ವಾರ್ಷಿಕ ಸಂಚಿಕೆ ಬಿಡುಗಡೆ

ಬೆಳ್ತಂಗಡಿ: ಮುಖ್ಯಮಂತ್ರಿ ಪದಕ ವಿಜೇತ ವೃತ್ತ ನಿರೀಕ್ಷಕರಾದ ಸಂದೇಶ್ ಪಿ.ಜಿ ಗೆ ಸನ್ಮಾನ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ನೇತೃತ್ವದಲ್ಲಿ ಬಿಷಪ್ ಹೌಸ್ ಬೆಳ್ತಂಗಡಿಯಲ್ಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಲಾರೆನ್ಸ್ ಮುಕ್ಕುಯಿ ಇವರ ನೇತೃತ್ವದಲ್ಲಿ ಮುಖ್ಯ ಮಂತ್ರಿ ಪದಕ ವಿಜೇತರಾಗಿರುವ ವೃತ್ತ ನಿರೀಕ್ಷಕರಾದ ಸಂದೇಶ್ ಪಿ.ಜಿ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರಸ್ತುತ ಮೂಡಬಿದಿರೆಯಲ್ಲಿ ವೃತ್ತ

ಬಡವರ ಧ್ವನಿಯಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಕೆಲಸ ಮಾಡುತ್ತಿದೆ: ಐಕಳ ಹರೀಶ್ ಶೆಟ್ಟಿ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇರುವುದೇ ಬಡವರ ಕಣ್ಣೀರು ಒರೆಸುವುದಕ್ಕೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ಒಕ್ಕೂಟ ನಿರಂತರವಾಗಿ ಬಡವರಿಗೆ, ಕಷ್ಟದಲ್ಲಿ ಇರುವವರಿಗೆ ನೆರವು ನೀಡುತ್ತಾ ಬಂದಿದೆ. ಮುಂದೆಯೂ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಬಡವರ ಧ್ವನಿಯಾಗಿ ಕೆಲಸ ಮಾಡುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು. ಬಂಟ್ಸ್ ಹಾಸ್ಟೇಲ್ ನ

ಮಂಗಳೂರು : ಗೃಹರಕ್ಷಕಿ ಜಯಂತಿಗೆ ಸನ್ಮಾನ ಕಾರ್ಯಕ್ರಮ

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿ ಮೇರಿಹಿಲ್, ಮಂಗಳೂರು ಇಲ್ಲಿ ಮಂಗಳೂರು ಘಟಕದ ಗೃಹರಕ್ಷಕಿ ಶ್ರೀಮತಿ ಜಯಂತಿ ಇವರನ್ನು ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ ಚೂಂತಾರು ಇವರು ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿದರು. ಶ್ರೀಮತಿ ಜಯಂತಿ ಅವರು 16-10-2018 ರಲ್ಲಿ ಗೃಹರಕ್ಷಕ ದಳಕ್ಕೆ ಸೇರ್ಪಡೆಯಾಗಿ ಸುಮಾರು 6 ವರ್ಷಗಳಿಂದ

ಉಡುಪಿ: ಆಟೋ ಚಾಲಕ ನೇಣುಬಿಗಿದು ಆತ್ಮಹತ್ಯೆ

ಉಡುಪಿ: ಜೀವನದಲ್ಲಿ ಜಿಗುಪ್ಸೆಗೊಂಡ ಆಟೋ ಚಾಲಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಟಪಾಡಿ ಪಳ್ಳಿಗುಡ್ಡೆಯಲ್ಲಿ ನಡೆದಿದೆ.ಪಳ್ಳಿಗುಡ್ಡೆ ನಿವಾಸಿ ದೀಪಕ್ ಆ‌ರ್ (34) ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ. ಇವರು ಜ.1ರಂದು ರಾತ್ರಿ ಮನೆಯ ಕೊಠಡಿಯ ಕಬ್ಬಿಣದ ಹುಕ್ಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ