ಮುಂಬೈ; ಭಾರತ್ ಬ್ಯಾಂಕ್‍ಗೆ ಅಂತರ್ ರಾಜ್ಯ ಶೆಡ್ಯೂಲ್ಡ್ ಕೋ ಬ್ಯಾಂಕ್ ಅತ್ಯುತ್ತಮ ಕಾರ್ಯಾಧ್ಯಕ್ಷ ಪ್ರಶಸ್ತಿ

ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಮಹಾಮಂಡಳ ವತಿಯಿಂದ ಮುಂಬೈನಲ್ಲಿ ಆಯೋಜಿಸಿದ್ದ ಭಾರತ್ ಕೋ ಆಪರೇಟಿವ್ ಬ್ಯಾಂಕಿಂಗ್ ಸಮ್ಮಿಟ್- 2024ರಲ್ಲಿ ಸಹಕಾರ ಕ್ಷೇತ್ರದಲ್ಲಿ ಮಾಡಿರುವ ವಿಶಿಷ್ಟ ಸಾಧನೆಯನ್ನು ಪರಿಗಣಿಸಿ ನೀಡುವ ರಾಷ್ಟ್ರ ಮಟ್ಟದ ಭಾರತ್ ರತ್ನ ಸಹಕಾರಿತ ಸನ್ಮಾನ್-2024ರಲ್ಲಿ ಭಾರತ್ ಬ್ಯಾಂಕ್ ಬೆಸ್ಟ್ ಚೇರ್‍ಮೆನ್ ಅವಾರ್ಡನ್ನು ಪಡೆದುಕೊಂಡಿದೆ.
ಮೇ 22 ಬುಧವಾರ ರಂದು ಮುಂಬೈನ ಗ್ರ್ಯಾಂಡ್ ಲಲಿತ್ ಹೋಟೆಲ್ ಸಭಾಂಗಣದಲ್ಲಿ ನಡೆದ “ಸಹಕಾರಿ ಬ್ಯಾಂಕ್ ಶೃಂಗಸಭೆ” ನಲ್ಲಿ ಬಹು-ರಾಜ್ಯ ಶೆಡ್ಯೂಲ್ಡ್ ಸಹಕಾರಿ ಬ್ಯಾಂಕ್‌ಗಳ ವಿಭಾಗದಲ್ಲಿ “ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ”ಯ ನ್ನು ಭಾರತ್ ಕೋ ಆಪರೇಟಿವ್ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ ಜಯ ಸುವರ್ಣ ರವರಿಗೆ ನೀಡಲಾಯಿತು.
ಹಲವಾರು ಪ್ರಶಸ್ತಿಗಳನ್ನು ಭಾರತ್ ಕೋ ಆಪರೇಟಿವ್ ಬ್ಯಾಂಕ್ ತಮ್ಮದಾಗಿಸಿಕೊಂಡಿದ್ದು, ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ ಲಭಿಸಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ ಜಯ ಸುವರ್ಣ ವ್ಯಕ್ತಪಡಿಸಿದರು.
ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಭಾರತ ಸರ್ಕಾರದ ಸಂವಹನ ಸಚಿವಾಲಯದ ಮಹಾನಿರ್ದೇಶಕರಾದ ಶ್ರೀ ಸುಮ್ನೇಶ್ ಜೋಶಿಯವರು ಜೆಟಿ.ಎಮ್ ಡಿ ಶ್ರೀ ದಿನೇಶ್ ಸಾಲಿಯಾನ್,ಸಿಐಎಸ್ಓ ಶ್ರೀ ಭಾಸ್ಕರ ರಾವ್, ಭಾರತ್ ಬ್ಯಾಂಕಿನ ಮಾರ್ಕೆಟಿಂಗ್ ಹೆಡ್ ಶ್ರೀ ರೋಹಿತ್ ಉದ್ಯಾವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು.
