ಪುದು ಗ್ರಾ.ಪಂ. ಪ.ಜಾತಿ, ಪಂಗಡದ ಅನುದಾನ ದುರ್ಬಳಕೆ ಆರೋಪ
ಮಂಗಳೂರು ಬಿಜೆಪಿ ಎಸ್‍ಸಿ, ಎಸ್‍ಟಿ ಮೋರ್ಚಾ ವತಿಯಿಂದ ಪ್ರತಿಭಟನೆ

ಬಂಟ್ವಾಳ: ಪುದು ಗ್ರಾ.ಪಂ.ಪರಿಶಿಷ್ಟ ಜಾತಿ ಹಾಗೂ ಪಂಗಡದ ಅನುದಾನವನ್ನು ದುರ್ಬಳಕೆ ಮಾಡಿದೆ ಎಂದು ಆರೋಪಿಸಿ ಮಂಗಳೂರು ಬಿಜೆಪಿ ಎಸ್‍ಸಿ, ಎಸ್‍ಟಿ ಮೋರ್ಚಾ ವತಿಯಿಂದ ಮಂಗಳೂರು ಮಂಡಲದ ಉಪಾಧ್ಯಕ್ಷ ವಿಠಲ್ ಸಾಲ್ಯಾನ್ ಅವರ ನೇತೃತ್ವದಲ್ಲಿ ಗ್ರಾ.ಪಂ.ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.ದ.ಕ.ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸತೀಶ್ ಕುಂಪಲ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಪುದು ಗ್ರಾ.ಪಂ. ಪರಿಶಿಷ್ಟರಿಗೆ ಮೀಸಲಾತಿಯ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಸಂವಿಧಾನದ ಆಶಯಗಳಿಗೆ ಧಕ್ಕೆ ತಂದಿದೆ. ಗ್ರಾಮದ ಜನತೆಗೂ ಪುದು ಗ್ರಾ.ಪಂ.ಆಡಳಿತ ಮಂಡಳಿ ಅಪಮಾನ ಮಾಡಿದೆ. ಮುಂದೆ ಸರಿ ಮಾಡೋಣ ಎಂಬ ಭರವಸೆ ನೀಡಿದರೂ ಈಗ ಆಗಿರುವ ಕಾಮಗಾರಿಗೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ದ.ಕ.ಜಿಲ್ಲಾ ಬಿಜೆಪಿ ಎಸ್‍ಸಿ ಮೋರ್ಚಾದ ಅಧ್ಯಕ್ಷ ವಿನಯನೇತ್ರ ಮಾತನಾಡಿ, ದಲಿತರಿಗೆ ಅನ್ಯಾಯ ಮಾಡಿರುವ ಅಭಿವೃದ್ಧಿ ಅಧಿಕಾರಿಗಳು, ಎಂಜಿನಿಯರ್ ವಿರುದ್ಧ ಹೋರಾಟದ ಮೂಲಕ ಉತ್ತರ ನೀಡುವ ಕಾರ್ಯ ಮಾಡಬೇಕು ಎಂದರು.ಜಿಲ್ಲಾ ಮೋರ್ಚಾದ ಕಾರ್ಯದರ್ಶಿ ಅಣ್ಣಿ ಏಳ್ತಿಮಾರ್, ಕೋಶಾ„ಕಾರಿ ಪ್ರಕಾಶ್ ಸಿಂಪೋನಿ, ಮೇರಮಜಲು ಗ್ರಾ.ಪಂ.ಅಧ್ಯಕ್ಷೆ ಜಯಶ್ರೀ ಕರ್ಕೇರ, ಮಂಗಳೂರು ಮಂಡಲ ಬಿಜೆಪಿ ಕಾರ್ಯದರ್ಶಿ ಹೇಮಂತ್ ಶೆಟ್ಟಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮನೋಜ್ ಆಚಾರ್ಯ ನಾಣ್ಯ, ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.