ಸಿಎ ಫೌಂಡೇಶನ್ ಪರೀಕ್ಷೆ :ಉತ್ತಮ ಫಲಿತಾಂಶದೊಂದಿಗೆ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

ಮೂಡುಬಿದಿರೆ: ಸಿಎ ಫೌಂಡೇಶನ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಹಾಗೂ ಪದವಿ ಕಾಲೇಜು ಅತ್ಯುತ್ತಮ ಫಲಿತಾಂಶ ದಾಖಲಿಸಿದೆ. ಆಳ್ವಾಸ್ ಶೇಕಡ 75.78 ಫಲಿತಾಂಶ ಗಳಿಸಿದೆ. ಆಳ್ವಾಸ್ ಕಾಲೇಜಿನ 128 ವಿದ್ಯಾರ್ಥಿಗಳಲ್ಲಿ 97 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದುಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳಾದ ಧನುಷ್, ಸನ್ನಿ ಲಾಯ್ಡ್ ಮಿರಾಂಡಾ, ಅಸ್ಟರ್ ಲೆನ್ ಡಿಸೋಜ, ಪ್ರದೀಪ್ ಎಚ್.ಎಂ, ಸ್ವಾತಿ, ಅನ್ವಿತಾ ಆರ್.ಶೆಟ್ಟಿ, ವಿಘ್ನೇಶ್ ವಿ. ಸಾಲ್ಯಾನ್, ಡೆಚ್ಚಮ್ಮ, ಬ್ರಯಾನ್ ಪಿಂಟೊ, ಸೋಹನ್ ಕುಮಾರ್ , ಶನ್ನೆಲ್ ಡಿಸೋಜ, ಪಲ್ಲವಿ ಮಲ್ಲಿಕಾರ್ಜುನ ಮುಶಿ, ಸುಶಾಂತ್ ಯು., ಆಯುಷ್ ಆರ್. ಸಾಲ್ಯಾನ್, ಜ್ಯೋತಿ ಪಿ ಮುಡಿಗೊದ್ರು, ಸ್ಪೂರ್ತಿ ಶಿವಯೋಗಿ ಬಂಮಿಗಟ್ಟಿ, ವಿಕಾಸ್ ಆರ್.ಸಿ, ಶ್ರೀರಕ್ಷ ಮೀಷ್ಣ ಆರ್., ಪಂಚಮಿ ಜೋಷಿ , ಪವಿತ್ರಾ ಕೆ., ಚಿತ್ರಾ ಟಿ.ಎನ್, ಪಾಯಲ್ ಜೆ.ಬಂಗೇರ, ಜ್ಯೋತಿ, ಕೀರ್ತನಾ ವಿ., ಸ್ಯಾಮ್ಸನ್ ಆಕಾಶ್ ರೊಡ್ರಿಗಸ್ , ಕಾವ್ಯ ,ಅನನ್ಯ ಕೆ., ಉದ್ಭವಿ ಯು., ಜಿ.ಅದಿತಿ ಪೈ, ಸಿ.ಶ್ರೇಯಂಕ್, ಶಿವರಾಮ್ ರಾಮಚಂದ್ರ ಹೆಗ್ಡೆ, ಅಂಜು ರಮೇಶ್, ಸೈಯದ್ ಸಿರಾಜುದ್ದೀನ್, ಸ್ಮಿತಾ ಹೆಗ್ಡೆ, ಮಯೂರಿ, ತೇಜಸ್ ಬಿ.ಎಂ, ತ್ವಿಶ ದೇವಾಡಿಗ , ಮೊಹಮ್ಮದ್ ರಫಿ, ಅಶಿತಾ ಬಿ.ಎ, ವರುಣ್ ಸಿ.ಆರ್,ಅಭಿಷೇಕ್ ಶೆಟ್ಟಿ, ಸನತ್ ಎಂ.ಬAಗೇರ, ನಿರೀಕ್ಷೆ ಹೆಗ್ಡೆ, ಮೋಕ್ಷ, ಶಿವಾನಿ ಎಂ.ವಿ, ಕಿರಣ್ ಕುಮಾರ್ ಎನ್., ಕೆ.ಗೌತಮಿ, ಪೂರ್ಣಿಮಾ ಪಿ.ಗುಂಡನಾವರ, ಆಕಾಶ್ ಸಿದ್ದಲಿಂಗ್ ದೊಣ್ಣೆವಡೆ, ಶ್ರೀನಿಧಿ, ಅನುಜಿತ್,ಆಶಿಕ್ ರಹಿಮಾನ್, ಶ್ರೇಯಸ್, ಖುಷಿ ವೈ., ಕೃತಿಕಾ ಕೆ.ಎಂ, ಭವ್ಯಶ್ರೀ, ಜಿತೆಶ್, ರೇಷ್ಮಾ ಬಿ.ಎಂ, ರಕ್ಷಾ ಶೆಟ್ಟಿ, ಎಸ್.ಕಿರಣ್ ಕುಮಾರ್, ವರ್ಷಿಣಿ ಮೇಘ, ಸುಶೀಲ್ ಕುಮಾರ್ ಧವಲಗಿ , ಚಿತ್ರ. ಕೆ, ಕಲ್ಪನಾ ಜಿ ಎಚ್ , ಜೀವನ್, ರಾಕೇಶ್ ಬಾಬು, ಕೌಶಲ್, ಕುಮಾರ್ ಸಿ., ವಿವೇಕ್ ಕೆ.ಬಿ, ರಿಫಾನಾಜ್, ವೇದಾಂತ್ ದೀಪಕ್ ಸಾಹ, ನಿಕಿತಾ ಆರ್.ರಾವ್, ಸ್ಪೂರ್ತಿ ಆರ್ ಭಟ್, ಕೆಲ್ವಿನ್ ಜೀವನ್, ದೀಕ್ಷಾ ಜಿ, ರೀಮಾ, ದರ್ಶನ್, ಶಾರದ್ ಡಿ ಶಣೈ, ಖುಷಿ ಸಾಲ್ಯಾನ್, ಪ್ರಿಯದರ್ಶಿನಿ, ಚೇತನ್ ಪಿ., ಸಂಜನಾ, ಶ್ವೇತಾ ಇರಪ್ಪ ಸಿದ್ನಲ್, ಐಶ್ವರ್ಯ ಎಸ್.ಜಿ,ವಿಜಯ್ ಎಸ್.ಪಿ, ವಿಜಯ್ ಕುಮಾರ್, ಸ್ಟೀವನ್ ಎಸ್., ರಾಕೇಶ್ ಗೌಡ, ರಶ್ಮಿ ಎಸ್.ಶೆಟ್ಟಿ, ತೇಜಸ್ವಿನಿ,ಪ್ರಥಮ್, ಪ್ರೀತಮ್ ನಾಯಕ್, ಲಿಖಿತ್ ಎಸ್., ಜೆಶ್ಮಾ, ವಿಕ್ರಾಂದ್ ಪುಂಡಲಿಕ ಧಣವಡೇ, ಡಿಂಪಲ್ ಪಿ. ಉತ್ತೀರ್ಣರಾಗಿದ್ದಾರೆ.

ಪರೀಕ್ಷೆಯಲ್ಲಿ ಉತ್ತೀರ್ಣರಾದ 97 ವಿದ್ಯಾರ್ಥಿಗಳು ತಮ್ಮ ಮೊದಲ ಪ್ರಯತ್ನದಲ್ಲೇ ಸಾಧನೆ ಮಾಡಿದ್ದಾರೆ. ಜಿತೇಶ್ ಅಂಧ ವಿದ್ಯಾರ್ಥಿಯಾಗಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಸ್ವೀಕಾರ ಯೋಜನೆಯಡಿ ಸಂಪೂರ್ಣ ಉಚಿತ ಶಿಕ್ಷಣ ಮತ್ತು ಉಚಿತ ಸಿಎ ತರಬೇತಿಯನ್ನು ಪಡೆಯುತ್ತಿದ್ದಾನೆ. 13 ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಪ್ರಾಂಶುಪಾಲ ಡಾ. ಕುರಿಯನ್, ಸಂಯೋಜಕ ಅನಂತಶಯನ, ಪದವಿ ಪೂರ್ವ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ ಎಂ. ಡಿ. ಸುದ್ದಿಗೋಷ್ಠಿಯಲ್ಲಿದ್ದರು.

Related Posts

Leave a Reply

Your email address will not be published.