ಆಳ್ವಾಸ್ ಜಾಂಬೂರಿಗೆ 50 ಅಡಿ ಗಾತ್ರದ ಬೃಹತ್ ಗಾಳಿಪಟ

ಆಳ್ವಾಸ್ ಜಾಂಬೂರಿಗೆ 50 ಅಡಿ ಗಾತ್ರದ ಬ್ರಹತ್ ಗಾಳಿಪಟ ನಿರ್ಮಾಣವು ಡಿಸೆಂಬರ್ 21ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 3ರ ತನಕ ಮಂಗಳೂರಿನ ಗೋಕುಲ್ ಸಭಾಂಗಣದಲ್ಲಿ ನೆರವೇರಲಿದೆ. 50 ಅಡಿ ಎತ್ತರದ 16 ಅಡಿ ಅಗಲದ ಈ ಗಾಳಿಪಟದಲ್ಲಿ ತುಳುನಾಡಿನ ಸಾಂಸ್ಕೃತಿಕ ವಿಚಾರಗಳ ಕಲಾಕೃತಿಗಳನ್ನು ಬಣ್ಣ ಗಳ ಮೂಲಕ ಅಭಿವ್ಯಕ್ತ ಪಡಿಸಲಾಗುವುದು.

ಅಂತರಾಷ್ಟ್ರೀಯ ಖ್ಯಾತಿಯ ಟೀಮ್ ಮಂಗಳೂರು ಹವ್ಯಾಸಿ ಗಾಳಿಪಟ ತಂಡದ ಕಲಾವಿದರು ಮತ್ತು ಗಾಳಿಪಟ ವಿನ್ಯಾಸಕಾರರಾದ ದಿನೇಶ್ ಹೊಳ್ಳ ಮತ್ತು ಕಲಾವಿದರು ಗಾಳಿಪಟವನ್ನು ರಚಿಸಿದ್ದಾರೆ. ದಿನೇಶ್ ಹೊಳ್ಳ, ನವೀನ್ ಅಡ್ಕರ್, ಸತೀಶ್ ರಾವ್, ಭವನ್ ಪಿ. ಜಿ.,ಅನುರಾಧ. ಸರ್ವೇಶ್ ರಾವ್, ಅರುಣ್ ಕುಮಾರ್, ರವಿ ಶೆಟ್ಟಿ, ಅರಸಿನಮಕ್ಕಿ. ಶೇಖರ್ ಶಿಶಿಲ, ಸಹಕರಿಸಿದ್ದಾರೆ. ಬಣ್ಣ ಸಂಯೋಜನೆಯಲ್ಲಿ ಸಪ್ನಾ ನೋರೋನ್ಹ, ಪ್ರಾಣೇಶ್ ಕುದ್ರೋಳಿ, ಪ್ರೀತಮ್ ಸಹಕರಿಸಿದ್ದಾರೆ.
